Monsoon Places: ಮಳೆಗಾಲದಲ್ಲಿ ನೋಡಲೇಬೇಕಾದ ಕರ್ನಾಟಕದ ಪ್ಲೇಸ್ ಗಳು ಯಾವುವು ಗೊತ್ತೇ? ಇವುಗಳಿಗೆ ತಪ್ಪದೆ ಹೋಗಿ.

Monsoon Places: ಈಗಾಗಲೇ ಮಳೆಗಾಲ (Mansoon) ಶುರುವಾಗಿದೆ, ಈ ಮಳೆಗಾಲದಲ್ಲಿ ಹಲವರು ವಿಶೇಷ ಸ್ಥಳಗಳಿಗೆ ಹೋಗಿ ಎಂಜಾಯ್ ಮಾಡಬೇಕು ಎಂದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಭೇಟಿ ನೀಡುವುದಕ್ಕೆ ನಮ್ಮ ದಕ್ಷಿಣ ಭಾರತದ (South India) ಪ್ರಸಿದ್ಧ ಸ್ಥಳಗಳಲ್ಲಿ ಕರ್ನಾಟಕ (Karnataka) ಕೂಡ ಒಂದು. ನಮ್ಮ ರಾಜ್ಯದ ಕೆಲವು ಸ್ಥಳಗಳು ಮಳೆಗಾಲದಲ್ಲಿ ಭೇಟಿ ನೀಡುವುದಕ್ಕೆ ಅದ್ಭುತವಾದ ಸ್ಥಳಗಳು (Best place to visit) ಎನ್ನಿಸಿಕೊಂಡಿವೆ. ಈ ಮಾನ್ಸೂನ್ ನಲ್ಲಿ ನೀವು ಕೂಡ ಪ್ರವಾಸ ಹೋಗಬೇಕು ಎಂದುಕೊಂಡಿದ್ದರೆ, ಕರ್ನಾಟಕದ ಸುಂದರವಾದ ಸ್ಥಳಗಳ ಬಗ್ಗೆ ತಿಳಿಸುತ್ತೇವೆ ನೋಡಿ..

ಕೂರ್ಗ್ :- ಮಾನ್ಸೂನ್ ವೇಳೆ ಕರ್ನಾಟಕದಲ್ಲಿ ನೀವು ಖಂಡಿತವಾಗಿಯೂ ನೋಡಲೇಬೇಕಾದ ಸ್ಥಳ ಕೂರ್ಗ್. ಹಸಿರು ಮತ್ತು ಪ್ರಕೃತಿಯನ್ನು ಇಷ್ಟಪಡುವವತಿಗೆ ಇದು ಸ್ವರ್ಗ (Heaven) ಇದ್ದ ಹಾಗೆ. ಮಳೆಗಾಲದಲ್ಲಿ ಈ ಜಾಗದ ಸೌಂದರ್ಯ ನೆಕ್ಸ್ಟ್ ಲೆವೆಲ್ ನಲ್ಲಿರುತ್ತದೆ. ಟೀ ಎಸ್ಟೇಟ್, ನದಿಗಳು, ಅಬ್ಬೆ ಫಾಲ್, ಮಂದಲ್ಪಟ್ಟಿ ವ್ಯೂ ಪಾಯಿಂಟ್, ಪುಷ್ಪಗಿರಿ ರಿಸರ್ವ್ ಫಾರೆಸ್ಟ್ ಹೀಗೆ ಅನೇಕ ಸ್ಥಳಗಳಿಗೆ ಭೇತು ನೀಡಬಹುದು. ಮಳೆಗಾಲದಲ್ಲಿ ಅತ್ಯಂತ ರಮಣೀಯವಾಗಿ ಕಾಣುತ್ತದೆ.

ಗೋಕರ್ಣ :- ಈ ಊರಿನ ಸೌಂದರ್ಯ ನೋಡಿದರೆ ನೀವು ಕಳೆದೇ ಹೋಗುತ್ತೀರಿ..ಕಡಲತೀರದಲ್ಲಿ ಇರುವ ಊರು ಇದು, ಮಳೆಗಾಲದ ಸಮಯದಲ್ಲಿ ಇಲ್ಲಿಗೆ ಸಾಕಷ್ಟು ಪ್ರವಾಸಿಗರು ಬರುತ್ತದೆ. ಇಲ್ಲಿನ ಸಮುದ್ರತೀರ ಮತ್ತು ದೇವಸ್ಥಾನ ಬಹಳ ಖ್ಯಾತಿ ಪಡೆದಿರುವ ಸ್ಥಳಗಳು. ಗೋಕರ್ಣದಲ್ಲಿ ಬೀಚ್, ಹಾಫ್ ಮೂನ್ ಬೀಚ್, ಪ್ಯಾರಡೈಸ್ ಬೀಚ್, ಮಹಾಬಲೇಶ್ವರ ದೇವಸ್ಥಾನ ಮತ್ತು ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಬಹುದು.

ನಂದಿ ಬೆಟ್ಟ :- ಮಳೆಗಾಲದಲ್ಲಿ ಭೇಟಿ ನೀಡುವುದಕ್ಕೆ ಇದು ಕೂಡ ಒಂದು ಅದ್ಭುತವಾದ ಸ್ಥಳ. ಬೆಂಗಳೂರು ಹಾಗೂ ಸುತ್ತಾ ಮುತ್ತ ಇರುವ ಜನರು ಈ ಜಾಗಕ್ಕೆ ಭೇಟಿ ನೀಡುತ್ತಾರೆ. ಸೀ ಲೆವೆಲ್ ಇಂದ 8000 ಮೀಟರ್ ಗಿಂತ ಹೆಚ್ಚು ಎತ್ತರದಲ್ಲಿರುವ ಈ ಜಾಗವು ಮೊಡಗಳಿಂದ ಕೂಡಿರುತ್ತದೆ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತ ಬಹಳ ಪ್ರಸಿದ್ಧಿ ಹೊಂದಿದೆ..ಹಾಗೆಯೇ ಈ ಜಾಗದ ಸೌಂದರ್ಯ ಎಲ್ಲರನ್ನು ಸೆಳೆಯುತ್ತದೆ.

ದೇವಬಾಗ್ :- ಈ ಜಾಗ ಇರುವುದು ಕಾರವಾರದಲ್ಲಿ. ದೇವಬಾಗ್ ಸಮುದ್ರದ ನೀಲಿ ನೀರು, ಸುಂದರವಾದ ಪರ್ವತಗಳು, ಕ್ಯಾಸುರಿನ ಮರಗಳು ಇದೆಲ್ಲವೂ ಬಹಳ ಸುಂದರವಾಗಿ ಕಾಣಿಸುತ್ತದೆ. ಹಾಗೆಯೇ ಮಾನ್ಸೂನ್ ನಲ್ಲಿ ನೋಡುವುದಕ್ಕೆ ಉತ್ತಮವಾದ ಆಯ್ಕೆ ಆಗಿದೆ. ಹಾಗೆಯೇ ಇದು ಶಾಂತವಾದ ಸ್ಥಳ ಎಂದು ಹೇಳಬಹುದು. ಈ ಸ್ಥಳದಲ್ಲಿ ನಿಮ್ಮ ಮನಸ್ಸಿಗೆ ಶಾಂತಿ ವಿಶ್ರಾಂತಿ ಸಿಗುತ್ತದೆ..

Comments are closed.