Kannada Astrology: ಶಡಷ್ಟಕ ಯೋಗದಲ್ಲಿ ಉಳಿದ ರಾಶಿಯವರು ಕಷ್ಟಪಡುತ್ತಿದ್ದರೆ ಈ ಮೂರು ರಾಶಿಯವರು ಮಾತ್ರ ಸುಖ ಸಮೃದ್ಧಿಯನೇ ನೋಡುತ್ತಾರೆ; ಯಾವ ಅದೃಷ್ಟ ರಾಶಿಗಳು ಗೊತ್ತೇ?

Kannada Astrology: ಶನಿ ಹಾಗೂ ಮಂಗಳ ಬಲಿಷ್ಠ ಗ್ರಹಗಳು ಎನಿಸಿಕೊಂಡಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಎರಡು ಗ್ರಹಗಳು ಒಂದೇ ಮನೆಗೆ ಬಂದಾಗ ಅಲ್ಲಿ ಯೋಗ ಸೃಷ್ಟಿಯಾಗುತ್ತದೆ ಅದನ್ನೇ ಶಡಷ್ಟಕ ಯೋಗ ಎನ್ನಬಹುದು. ಈ ಷಡಷ್ಟಕ ಯೋಗ ರೂಪುಗೊಂಡಾಗ ಶುಭಫಲಗಳಿಗಿಂತಲೂ ಅಶುಭ ಫಲಗಳೇ ಜಾಸ್ತಿ. ಕೆಲವು ರಾಶಿಯವರಿಗೆ ಉತ್ತಮ ಫಲ ನೀಡಿದರೆ ಇನ್ನೂ ಕೆಲವು ರಾಶಿಯವರು ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಮೇಷ, ಮಕರ, ಸಿಂಹ ರಾಶಿಯವರಿಗೆ ಷಡಷ್ಟಕ ಯೋಗ ಮಂಗಳಕರ ಎಂದು ಹೇಳಲಾಗುವುದು ಈ ರಾಶಿಯವರಿಗೆ ಷಡಷ್ಟಕ ಯೋಗ ರೂಪಗೊಂಡ ನಂತರ ಸಾಕಷ್ಟು ಪ್ರಯೋಜನಗಳು ಆಗಲಿವೆ. ಯಾವವು ನೋಡೋಣ.

ಮೇಷ ರಾಶಿ: ಮೇಷ ರಾಶಿಯವರಿಗೆ ಷಡಷ್ಟಕ ಯೋಗ ಅತ್ಯಂತ ಮಂಗಳಕರವಾಗಿರುತ್ತದೆ ಈ ಯೋಗಫಲದಿಂದಾಗಿ ಹೊಸ ಮನೆ ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಇದೆ ಮೇಷ ರಾಶಿಯವರು ಜೀವನದಲ್ಲಿ ಸಾಕಷ್ಟು ಸೌಕರ್ಯಗಳನ್ನು ಕೂಡ ಹೊಂದಿರುತ್ತಾರೆ. ಐಷಾರಾಮಿ ವಸ್ತುಗಳ ಖರೀದಿಗೆ ಇದು ಸೂಕ್ತವಾದ ಸಮಯ. ಉದ್ಯೋಗಸ್ಥರು ಹೆಚ್ಚಿನ ಗೌರವ ಸಂಬಳ ಪಡೆಯುತ್ತಾರೆ. ಸಮಯಕ್ಕೆ ಸರಿಯಾಗಿ ಯಾವ ಯೋಜನೆ ಕೈಗೊಂಡಿದ್ದೀರೋ ಅವೆಲ್ಲವೂ ಈಡೇರುತ್ತದೆ. ಭೂಮಿಗೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಲಾಭ ಸಿಗುತ್ತದೆ.

ಸಿಂಹ ರಾಶಿ: ಮಂಗಳ ಹಾಗೂ ಶನಿ ಗ್ರಹದಿಂದ ರೂಪಗೊಳ್ಳುವ ಷಡಷ್ಟಕ ಯೋಗ ಸಿಂಹ ರಾಶಿಯವರೆಗೂ ಉತ್ತಮ ಫಲವನ್ನೇ ಕೊಡುತ್ತದೆ. ಉದ್ಯೋಗ ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಯಶಸ್ಸು ಸಿಗುತ್ತದೆ ನಿರುದ್ಯೋಗಿಗಳು ಉದ್ಯೋಗ ಪಡೆಯುವ ಅವಕಾಶವಿದೆ. ಉತ್ತಮ ಜನರ ಸಂಪರ್ಕ ನಿಮ್ಮ ಗೌರವವನ್ನು ಕೂಡ ಹೆಚ್ಚಿಸುತ್ತದೆ. ಆರ್ಥಿಕವಾಗಿ ಹೆಚ್ಚು ಲಾಭ ದೊರೆಯುತ್ತದೆ ಉದ್ಯೋಗ ಉದ್ದಿಮೆ ಎರಡರಲ್ಲಿಯೂ ಆದಾಯ ಹೆಚ್ಚಳವಾಗುವುದು. ಮನೆಯಲ್ಲಿ ಆರೋಗ್ಯ ಸುಧಾರಿಸುತ್ತದೆ ನೆಮ್ಮದಿ ನೆಲೆಸುತ್ತದೆ.

ಮಕರ ರಾಶಿ: ಶಡಷ್ಟಕ ಯೋಗ ಮಕರ ರಾಶಿಯವರಿಗೆ ಉತ್ತಮ ಜೀವನ ಕಲ್ಪಿಸಿಕೊಳ್ಳಲು ಸಹಾಯಮಾಡುತ್ತದೆ ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಹುಟ್ಟಿಕೊಳ್ಳುತ್ತವೆ ಆರ್ಥಿಕ ಸ್ಥಿತಿ ಇನ್ನಷ್ಟು ಉತ್ತಮಗೊಳ್ಳುತ್ತದೆ ಹೊಸ ವಸ್ತುಗಳನ್ನು ವಾಹನ ಮನೆ ಮೊದಲಾದ ದೊಡ್ಡ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಕೈಕೊಂಡ ಕೆಲಸಗಳು ಯಶಸ್ವಿಯಾಗುತ್ತವೆ ಮನೆಯಲ್ಲಿ ಸಂತೃಪ್ತಿ ನೆಲೆಸುತ್ತದೆ. ಅಚಾನಕ್ಕಾಗಿ ಬರುವ ಹಣದಿಂದ ಮನೆಯವರಿಗೂ ಸುಖ ಸಮೃದ್ಧಿ ಸಿಗುತ್ತದೆ. ಈ ಮೂರು ರಾಶಿಯವರಿಗೆ ಶಡಷ್ಟಕ ಯೋಗ ಮುಕ್ತಾಯವಾಗುತ್ತದೆ ಹಾಗಾಗಿ ಮುಂದಿನ ದಿನಗಳಲ್ಲಿ ತುಸು ಕಷ್ಟ ನೋಡುವ ಸಾಧ್ಯತೆ ಇದೆ ಅದೇ ರೀತಿ

Comments are closed.