UPI Credit Line Loan: ಅಕೌಂಟ್ ನಲ್ಲಿ ಒಂದು ರೂಪಾಯಿ ಇಲ್ಲದೆ ಇದ್ದರೂ UPI ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿ. ಹೇಗೆ ಗೊತ್ತೇ?

UPI Credit Line Loan: ಭಾರತದಲ್ಲಿ ಬಹುತೇಕ 75% ನಷ್ಟು ರಿಟೇಲ್ ಪೇಮೆಂಟ್ (Retail Payment) ಯು ಪಿ ಐ ಮೂಲಕವೇ ಆಗುತ್ತದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಅಂದ್ರೆ ಯುಪಿಐ ಮೂಲಕ ನಾವು ಯಾವುದೇ ಪೇಮೆಂಟ್ ಕೂಡ ಮಾಡಬಹುದು. ಗೂಗಲ್ ಪೇ,(Google Pay) ಫೋನ್ ಪೇ Phone pay), ಜಿಪೇ ಹೀಗೆ ಯಾವುದೇ ಪೇಮೆಂಟ್ ಆಪ್ ಮೂಲಕ ಯುಪಿಐ ಪೇಮೆಂಟ್ ಮಾಡಿಕೊಳ್ಳಬಹುದು. ಇದನ್ನೂ ಓದಿ:Kaatera Film: ಮೀಡಿಯಾ ಬಳಿ ದರ್ಶನ್ ಕ್ಷಮೆ ಕೇಳಿದ್ದು “ಕಾಟೇರ” ನಿಗೆ ಪ್ಲಸ್ ಆಗತ್ತಾ? ಅಭಿಮಾನಿಗಳು ಹೇಳೋದೇನು ಗೊತ್ತಾ?

ಈ ಹಿಂದೆ ಯುಪಿಐ ಮೂಲಕ ಎಲ್ಲಾ ರೀತಿಯ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕ್ಯೂಆರ್ ಕೋಡ್ (QR Code) ಅನ್ನು ಮಾಡಿದರೆ ಸಾಕು ನೀವು ಎಲ್ಲಾ ರೀತಿಯ ಪೇಮೆಂಟ್ ಮಾಡಬಹುದು. ಇದೀಗ ಆರ್ ಬಿ ಐ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯುಪಿಐ ಪೇಮೆಂಟ್ ಮಾಡುವವರಿಗೆ ಹೊಸ ಸುದ್ದಿ ಒಂದನ್ನು ನೀಡಿದ ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇಲ್ಲ ಅಂದ್ರೆ ಪರವಾಗಿಲ್ಲ, ಯುಪಿಐ ನಲ್ಲಿಯೂ ಕೂಡ ಕ್ರೆಡಿಟ್ ಕಾರ್ಡ್ ರೀತಿಯಲ್ಲಿಯೇ ಪಾವತಿ ಮಾಡಬಹುದು.

ಕ್ರೆಡಿಟ್ ಲೈನ್ ಸಾಲ ಸೌಲಭ್ಯ: (Credit line loan)

ಹೌದು ಕ್ರೆಡಿಟ್ ಕಾರ್ಡ್ ನಲ್ಲಿ ಇರುವ ನಿಯಮದಂತೆ ನಿಮ್ಮ ಖಾತೆಯಲ್ಲಿ ಒಂದೇ ಒಂದು ರೂಪಾಯಿ ಇಲ್ಲದೆ ಇದ್ದರೂ ಕೂಡ ಪೇಮೆಂಟ್ (payment) ಮಾಡಬಹುದು ಅದೇ ರೀತಿ ಇದೀಗ ಯುಪಿಐ ನಲ್ಲಿಯೂ ಕೂಡ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ದರೂ ಯುಪಿಐ ವಹಿವಾಟು ನಡೆಸಲು ಅನುವು ಮಾಡಿಕೊಟ್ಟಿದೆ. ಇದನ್ನು ಕ್ರೆಡಿಟ್ ಲೈನ್ ಸಾಲ ಎಂದು ಹೇಳಬಹುದು. ನೀವು ತಿಂಗಳಿಗೆ ಎಷ್ಟು ಮೊತ್ತದವರೆಗೆ ಹಣ ಬಳಸಬಹುದು ಎಂಬುದನ್ನು ನಿಮ್ಮ ಬ್ಯಾಂಕ್ ನಿರ್ಧಾರ ಮಾಡುತ್ತದೆ. ಬ್ಯಾಂಕ್ ನ ನಿಯಮಗಳ ಆಧಾರದ ಮೇಲೆ ನೀವು ಕ್ರೆಡಿಟ್ ಲೈನ್ ಸಾಲ ಪಡೆದುಕೊಳ್ಳಬಹುದು. ತಿಂಗಳಲ್ಲಿ ಯಾವುದೇ ಸಮಯದಲ್ಲಿ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದಾಗಲೂ ನೀವು ಯುಪಿಐ ಮೂಲಕವೇ ಪೇಮೆಂಟ್ ಮಾಡಬಹುದು. ನಂತರ ಅದಕ್ಕೆ ಬ್ಯಾಂಕ್ ತಿಳಿಸುವ ಬಡ್ಡಿ ಹಾಗೂ ಬಳಸಿದ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಇದನ್ನೂ ಓದಿ: Health tips: ನಿಂಬೆ ಸಿಪ್ಪೆ ಅಂತ ಬಿಸಾಡಬೇಡಿ ಹುಷಾರಾಗಿ ಎತ್ತಿಡಿ; ಕೆಟ್ಟ ಕೊಲೆಸ್ಟ್ರಾಲ್, ಹೃದ್ರೋಗ ತಡೆಯೋಕ್ಕೆ ಇದುವೇ ರಾಮಬಾಣ!

ಪೂರ್ವ ಹಣ ಮಂಜೂರಾತಿ

ನೀವು ಬಳಸುವ ಯುಪಿಐ ಪ್ಲಾಟ್ ಫಾರ್ಮ್ ಗೆ ಬ್ಯಾಂಕ್ನಿಂದ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್ ಸಾಲಗಳನ್ನು ವರ್ಗಾಯಿಸಲಾಗುತ್ತದೆ. ಸಪ್ಟೆಂಬರ್ 5 ರಿಂದ ಆರ್ಬಿಐ ತನ್ನ ಸುತ್ತೋಲೆಯಲ್ಲಿ ಕ್ರೆಡಿಟ್ ಲೈನ್ ಫಂಡಿಂಗ್ ಖಾತೆಗೆ ಸೇರಿಸುವ ಬಗ್ಗೆ ವಿಸ್ತಾರವಾದ ವಿವರಣೆ ನೀಡಿದೆ. ಇದಕ್ಕೆ ವಾಣಿಜ್ಯ ಬ್ಯಾಂಕುಗಳು ಅವರದ್ದೇ ಆದ ಷರತ್ತು ಹಾಗೂ ನಿಯಮಗಳನ್ನು ವಿಧಿಸುವ ಸಾಧ್ಯತೆ ಇದೆ. ನೀವು ಬಳಸುವ ಕ್ರೆಡಿಟ್ ಮಿತಿ ಕ್ರೆಡಿಟ್ ಅವಧಿ ಬಡ್ಡಿ ಎಲ್ಲವನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇನ್ನು ಮುಂದೆ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೆ ಇದ್ದಾಗಲೂ ಕೂಡ ತ್ವರಿತ ಸಮಯದಲ್ಲಿ ಪೇಮೆಂಟ್ ಅನ್ನು ಯುಪಿಐ ಮೂಲಕ ಮಾಡಬಹುದಾಗಿದೆ.

Comments are closed.