Kaatera Film: ಮೀಡಿಯಾ ಬಳಿ ದರ್ಶನ್ ಕ್ಷಮೆ ಕೇಳಿದ್ದು “ಕಾಟೇರ” ನಿಗೆ ಪ್ಲಸ್ ಆಗತ್ತಾ? ಅಭಿಮಾನಿಗಳು ಹೇಳೋದೇನು ಗೊತ್ತಾ?

Kaatera Film: ಅಕ್ಷರ ಕ್ರಾಂತಿಯನ್ನು ಮಾಡಿದ್ದ ’ದಾಸ’ (Daasa) ಈಗ ಕಾಟೇರನಾಗಿ ನಿಮ್ಮ ಮುಂದೆ ಬರಲಿದ್ದಾನೆ. ಈ ಸಿನಿಮಾದ ಬಗ್ಗೆಯೂ ಬಹಳ ನಿರೀಕ್ಷೆ ಇದೆ. ಕ್ರಾಂತಿ ಸಿನಿಮಾ (Kranti film) ಅಂದುಕೊಂಡಷ್ಟರ ಮಟ್ಟಿಗೆ ಗೆಲುವನ್ನು ಸಾಧಿಸಿಲ್ಲ. ಹಾಗಾಗಿ ಕಾಟೇರನ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ರಾಕ್ ಲೈನ್ ವೆಂಕಟೇಶ್ (Rockline Venkatesh) ನಿರ್ಮಾಣ ಹಾಗೂ ತರುಣ್ ಸುಧೀರ್ (tarun Sudeer)  ಅವರ ನಿರ್ದೇಶನದ ಕಾಟೇರ ಸಿನಿಮಾ ನೋಡಲು ಜನರಂತೂ ಕಾದು ಕುಳಿತಿದ್ದಾರೆ. ಇದನ್ನೂ ಓದಿ: Lucky Girl: ಈ ಹೆಸರಿನ ಹೆಣ್ಣುಮಕ್ಕಳು ತಂದೆಗೆ ಎಂಥ ಅದೃಷ್ಟ ತಂದುಕೊಡುತ್ತಾರೆ ಗೊತ್ತೇ? ಯವವು ಗೊತ್ತಾ ಆ ಅಕ್ಷರಗಳು!

ಕಾಟೇರಾ ಸಿನಿಮಾದ ಪೋಸ್ಟರ್ (Poster) ಒಂದನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಆದರೆ ಇದರವರಿಗೆ ಟೀಸರ್ ಟ್ರೈಲರ್ ಯಾವುದು ಕೂಡ ಬಿಡುಗಡೆ ಆಗಿಲ್ಲ ಹಾಗಾಗಿ ವರಮಹಾಲಕ್ಷ್ಮಿ ಹಬ್ಬಕ್ಕಾದರೂ ಈ ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಹೀರೋ ಹಾಗೂ ಹೀರೋಯಿನ್ ಸೈಕಲ್ ಮೇಲೆ ಕುಳಿತ ಒಂದು ಪೋಸ್ಟರ್ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಅಪ್ಡೇಟ್ ಕೂಡ ಖಾತೆಯ ಸಿನಿಮಾದಿಂದ ಬಂದಿಲ್ಲ.

ಗಣೇಶ ಹಬ್ಬಕ್ಕೆ ಕಾಟೇರನ ಕೊಡುಗೆ

ವರಮಹಾಲಕ್ಷ್ಮಿ ಹಬ್ಬ ಕಂತು ಯಾವುದೇ ಸುದ್ದಿ ಸಿಕ್ಕಿಲ್ಲ ಆದರೆ ಗಣೇಶ ಹಬ್ಬಕ್ಕೆ ಕಾಟೇರ ಟೀಸರ್ ಬಿಡುಗಡೆ ಆಗೋದು ಪಕ್ಕ ಎಂದು ಬಲ್ಲ ಮೂಲಗಳು ತಿಳಿಸಿವೆ. ಸದ್ಯ ಇದೇ ಕೆಲಸದಲ್ಲಿ ತರುಣ್ ಸುಧೀರ್ ಕೂಡ ಬ್ಯುಸಿ ಆಗಿದ್ದು ಫಸ್ಟ್ ಕ್ಲಿಪ್ ಬಿಡುಗಡೆ ಆಗುವ ಸಾಧ್ಯತೆ ಇದೆ. ಕಾಟೇರ ಸಿನಿಮಾದಲ್ಲಿ ದರ್ಶನ್ ಅವರ ಆರ್ಭಟ ಚಿತ್ರಮಂದಿರವನ್ನು ಆವರಿಸಿಕೊಳ್ಳಲಿದೆ ಎನ್ನುವ ನಿರೀಕ್ಷೆ ಇದೆ ಇದರ ಜೊತೆಗೆ ವಿ ಕೃಷ್ಣ ಅವರ ಬ್ಯಾಗ್ರೌಂಡ್ ಮ್ಯೂಸಿಕ್ ಅಭಿಮಾನಿಗಳು ಮನ ಸೋಲುವಂತೆ ಮಾಡುತ್ತದೆ. ಇದನ್ನೂ ಓದಿ: Best food for dengue patient: ಡೆಂಗ್ಯೂ ಜ್ವರ ಬಂದರೆ ಔಷದ ಸೇವಿಸುವುದು ಮಾತ್ರವಲ್ಲ, ಈ ಆಹಾರವನ್ನು ಸೇವಿಸಿದರೆ ಮಾತ್ರ ತಕ್ಷಣ ರಿಕವರಿ ಆಗುತ್ತೀರಿ! ಯಾವವು ಗೊತ್ತಾ?

ಹಳೆಯ ಕಥೆಗೆ ಹೊಸ ರೂಪ

ಕಾಟೆರಾ ಸಿನಿಮಾದ ಫಸ್ಟ್ ಪೋಸ್ಟರ್ ಲುಕ್ ನೋಡಿದ್ರೆ ಇದು ಹಳೆಯ ಕಥೆ ಇರಬಹುದು ಎಂದು ಅನಿಸುತ್ತೆ ಅದಕ್ಕೆ ತಕ್ಕ ಹಾಗೆ ಇದು 70ರ ದಶಕದ ಕಥೆ ಎನ್ನುವ ಮಾಹಿತಿ ಇದೆ. ಉಳುವವನೇ ಒಡೆಯ ಎನ್ನುವ ಕಾಯ್ದೆ ಜಾರಿಗೆ ಇದ್ದಾಗ ರಾಜ್ಯದಲ್ಲಿ ನಡೆದಂತಹ ಸಂಘರ್ಷಗಳ ಬಗ್ಗೆ ಈ ಕಥೆಯಲ್ಲಿ ಹೇಳಲಾಗಿದೆ. ಸ್ಟಾರ್ ನಟ ದರ್ಶನ ಜೊತೆಗೆ ಮೊದಲ ಬಾರಿಗೆ ಮಾಲಾಶ್ರೀ ಅವರ ಪುತ್ರಿ ಆರಾಧನಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಇನ್ನಷ್ಟು ದೊಡ್ಡ ತಾರಾಗಣ ಕೂಡ ಈ ಸಿನಿಮಾದಲ್ಲಿ ಇದೆ.

ಈ ಸಿನಿಮಾಕ್ಕೆ ಡಿ 56 ಎಂದು ಟೈಟಲ್ ಇಡಲಾಗಿತ್ತು. ಆದರೆ ಈಗಂತೂ ಖಾತೆಯ ಎನ್ನುವುದು ಫೈನಲ್ ಆಗಿದೆ. ಇನು ಖಾತೆ ರಣ ಆರ್ಭಟಕ್ಕೆ ರಾಬರ್ಟ್ ಚಿತ್ರದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಧ್ವನಿಗೂಡಿಸಿದ್ದಾರೆ. ಇದರಲ್ಲಿ ಸ್ವಲ್ಪ ನೈಜ ಘಟನೆ ಹಾಗೂ ಇನ್ನಷ್ಟು ಮಸಾಲಾ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.

ದಸರಾ ಸಮಯದಲ್ಲಿ ಕಾಟೇರ ತೆರೆಗೆ:

ಅಕ್ಟೋಬರ್ ಹೊತ್ತಿಗೆ ಈ ಸಿನಿಮಾ ತೆರೆಗೆ ಬರಲಿದೆ ಎಂದು ರಾಕ್ ಲೈನ್ ವೆಂಕಟೇಶ್ ಅವರು ತಿಳಿಸಿದ್ದಾರೆ. ಇನ್ನು ಈ ಬಾರಿ ದರ್ಶನ್ ಅವರು ಮೀಡಿಯಾ ಮುಂದೆ ಕೂಡ ಕ್ಷಮೆ ಕೇಳಿರುವುದರಿಂದ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಮೀಡಿಯಾದಲ್ಲಿಯೂ ಕೂಡ ದರ್ಶನ್ ಅವರ ಕಾಟೇರ ಸಿನಿಮಾದ ಬಗ್ಗೆ ಸಾಕಷ್ಟು ಪ್ರಮೋಷನ್ ಆಗಬಹುದು. ಅದರಿಂದ ಈ ಸಿನಿಮಾದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಇದನ್ನೂ ಓದಿ: Dairy Farming: ಒಂದೇ ಒಂದು ರೂಪಾಯಿಗಳ ಬಡ್ಡಿಯೂ ಇಲ್ಲದೆ ಹಸು ಹೆಮ್ಮೆ ಖರೀದಿಗೆ ಪಡೆಯಿರಿ 50,000 ರೂ.ಸಾಲ! ಹೇಗೆ ಗೊತ್ತೇ?

Comments are closed.