Mailaralinga Swamy Daiva: ನಿಖರವಾಗಿ ಭವಿಷ್ಯ ಹೆಳುವ ಮೈಲಾರ ಲಿಂಗ; ಇಲ್ಲಿಗೆ ಬಂದ ಭಕ್ತಾಧಿಗಳು ವರ ಪಡೆಯದೆ ಖಾಲಿ ಕೈಲಿ ಹೋಗಿದ್ಡೆ ಇಲ್ಲ!

Mailaralinga Swamy Daiva: ಹಾವೇರಿ ಜಿಲ್ಲೆಯ ದೇವರ ಗುಡ್ಡದ ಮೈಲಾರಲಿಂಗ ಅಂದರೆ ಪವಾಡಕ್ಕೆ ಇನ್ನೊಂದು ಹೆಸರು. ಕರ್ನಾಟಕದ ಮುಂದಿನ ಸಿಎಂ ಯಾರಾಗುತ್ತಾರೆ ಎನ್ನುವ ಪ್ರಶ್ನೆಗೆ ಅಕ್ಷರಶಃ ಸಿದ್ದರಾಮಯ್ಯ ಅವರ ಹೆಸರನ್ನ ಸೂಚಿಸಿದ್ದ ಮಹಾ ಪವಾಡ ಶಿವಲಿಂಗ ಇದು. ಇದೇ ಕಾರಣಕ್ಕೆ ಈ ಜಾಗಕ್ಕೆ ಜನಸಾಮಾನ್ಯರು ಮಾತ್ರವಲ್ಲ ವಿಐಪಿ ಗಳು ಕೂಡ ಭೇಟಿ ನೀಡಿ ಮೈಲಾರಲಿಂಗನ ದರ್ಶನ ಪಡೆದು ಕೃಥಾರ್ತರಾಗುತ್ತಾರೆ ತಮ್ಮ ಬೇಡಿಕೆಗಳನ್ನು ಮೈಲಾರ ಲಿಂಗನ ಪಾದಗಳಿಗೆ ಅರ್ಪಿಸಿ ಅದು ಈಡೇರುವುದಕ್ಕೆ ಭಕ್ತಿಯಿಂದ ಪ್ರಾರ್ಥಿಸುತ್ತಾರೆ.

ಮೈಲಾರ ಲಿಂಗ ದೇವರ ಹಿಂದಿರುವ ಕಥೆ

ಬ್ರಹ್ಮಾಂಡ ಪುರಾಣದ ಕ್ಷೇತ್ರ ಖಂಡದಲ್ಲಿ ಈ ದೇವರ ಬಗ್ಗೆ ಉಲ್ಲೇಖವಿದೆ. ಮಣಿ ಶೂಲ ಪರ್ವತದಲ್ಲಿ ಮಣಿ ಮತ್ತು ಮಲ್ಲ ಎಂಬ ಸಹೋದರರು ವಾಸಿಸುತ್ತಿದ್ದರು. ಆದರೆ ಇವರು ಆ ಊರಿನ ಜನರಿಗೆ ತೊಂದರೆ ಕೊಡುತ್ತಿದ್ದರು ಎಲ್ಲಾ ಬೆಳೆ ನಾಶ ಮಾಡುತ್ತಿದ್ದರು ದೈವಿ ಕಾರ್ಯಗಳಿಗೂ ಕೂಡ ವಿಘ್ನ ತಂದೊಡ್ಡುತ್ತಿದ್ದರು. ಈ ಸಂದರ್ಭದಲ್ಲಿ ಜನರ ಮೊರೆಗೆ ಒಲಿದ ಮಹಾಶಿವ ತನ್ನದೇವ ಕಣೋ ಶಿವಗಣದೊಂದಿಗೆ ಈ ಜಾಗಕ್ಕೆ ಬರುತ್ತಾನೆ ಮೈಲಾರ ಲಿಂಗನಾಗಿ ಜನರಿಗೆ ತೊಂದರೆ ಕೊಡುತ್ತಿದ್ದ ಮಣಿ ಹಾಗೂ ಮಲ್ಲ ಸಹೋದರರನ್ನು ಸೋಲಿಸಿ, ಇಲ್ಲಿ ನೆಲೆಸುತ್ತಾನೆ.

ಮಾರ್ತಾಂಡ ವೀರೇಶ್ವರನಾಗಿ ಏಳುಕೋಟೆಯನ್ನು ಕಾಯಲು ಮಣಿ ಹಾಗೂ ಮಲ್ಲ ರಾಕ್ಷಸರನ್ನು ಕೊಲ್ಲುತ್ತಾನೆ ಶಿವ. ಇನ್ನು ಶಿವ ಇಲ್ಲಿ ಬಂದು ನೆಲೆಸಿರುವುದಕ್ಕೆ ಜಾನಪದ ಕಥೆಗಳು ಕೂಡ ಸಾಕಷ್ಟು ಇವೆ.

ಈ ದೇವಾಲಯಕ್ಕೆ ತಲುಪುವುದು ಹೇಗೆ

ರಾಣಿಬೆನ್ನೂರಿನಿಂದ 8 ಕಿಲೋಮೀಟರ್ ದೂರದಲ್ಲಿರುವ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಬಸ್ಸು ಹಾಗೂ ರೈಲು ಮಾರ್ಗವು ಸಮೀಪದಲ್ಲಿಯೇ ಇದೆ ಹಾಗಾಗಿ ಸುಲಭವಾಗಿ ನೀವು ಈ ದೇವಾಲಯಕ್ಕೆ ಭೇಟಿ ನೀಡಬಹುದು. ಇಲ್ಲಿ ನೆಲೆಸಿರುವ ಮೈಲಾರ ಲಿಂಗ ಭಕ್ತರ ಪಾಲಿಕೆ ಆರಾಧ್ಯ ದೈವ ಎನಿಸಿದ್ದಾನೆ. ಭಕ್ತರ ಮನಸ್ಸಿನಲ್ಲಿ ಇರುವ ಎಲ್ಲಾ ಇಷ್ಟಾರ್ಥಗಳನ್ನು ಕೂಡ ಈಡೇರಿಸುತ್ತಾನೆ. ನೀವು ಕೂಡ ಶಿವನ ಭಕ್ತರಾಗಿದ್ದರೆ ತಪ್ಪದೆ ಒಮ್ಮೆಯಾದರೂ ಈ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಮನಸ್ಸಿನಲ್ಲಿ ಇರುವ ಎಲ್ಲಾ ಆಸೆಗಳನ್ನು ಈಡೇರಿಸಲು ಶಿವನ ಆಶೀರ್ವಾದ ಪಡೆದುಕೊಳ್ಳಿ.

Comments are closed.