Health Insurance policy: ಆರೋಗ್ಯ ವಿಮೆ ಮಾಡಿಸುವಾಗ ಈ ತಪ್ಪು ಮಾಡಬೇಡಿ; ಮಾಡಿದ್ರೆ ಪಾಲಿಸಿ ಕ್ಲೈಮ್ ಮಾಡಿದ್ರೂ ಒಂದು ರೂಪಾಯಿಯೂ ಸಿಗೋದಿಲ್ಲ!

Health Insurance policy: ಡಿಜಿಟಲ್ ಯುಗದಲ್ಲಿ ಎಲ್ಲವೂ ಸುಲಭದಲ್ಲಿ ಆಗುತ್ತದೆ. ಬ್ಯಾಂಕಿಂಗ್ ಕೆಲಸಗಳು (Banking), ಷೇರು ಮಾರುಕಟ್ಟೆ (Stock market), ಟಿಕೆಟ್ ಬುಕಿಂಗ್, ದೂರದ ಗೆಳೆಯರೊಂದಿಗೆ ಮಾತುಕತೆ ಎಲ್ಲವೂ ಸುಲಭವಾಗಿದೆ. ಇದೇ ರೀತಿ ಇನ್ಷುರೆನ್ಸ್ ಅಥವಾ ವಿಮೆ ಕೂಡ. ವಾಹನದ ವಿಮೆ ಇರಲಿ, ಆರೋಗ್ಯ ವಿಮೆ ಇರಲಿ, ಜೀವ ವಿಮೆ ಇರಲಿ ಎಲ್ಲವೂ ಆನ್ ಲೈನ್ (Online) ನಲ್ಲಿ ಸುಲಭವಾಗಿ ಖರೀದಿಸಬಹುದು. ಇಲ್ಲಿ ಖರೀದಿಸುವುದಷ್ಟೇ ಅಲ್ಲದೇ ಬೇರೆ ಬೇರೆ ಕಂಪನಿಯ ಬೇರೆ ಬೇರೆ ವಿಮೆಗಳನ್ನು ಹೋಲಿಸಿಯೂ ನೋಡಬಹುದು. ಇದನ್ನೂ ಓದಿ: Diabetic Temple: ವಿಜ್ಞಾನಿಗಳಿಗೂ ಸವಾಲಾದ ದೇವಾಲಯ; ಇಲ್ಲಿ ಹೋದರೆ ಸಕ್ಕರೆ ಕಾಯಿಲೆ ಇರುವವರು ಸಂಪೂರ್ಣ ಗುಣಮುಖರಾಗುತ್ತಾರೆ, ಈ ಪವಾಡ ದೇವಾಲಯ ಇರುವುದು ಎಲ್ಲಿ ಗೊತ್ತೇ?

ಆರೋಗ್ಯ ವಿಮೆ ಕ್ಲೈಮ್ (Health Insurance claim) ಮಾಡುವಂತಹ ಸನ್ನಿವೇಶಗಳು ಬಂದಾಗ ಹಲವಾರು ಬಾರಿ ಕ್ಲೈಮ್ ಆಗುವುದಿಲ್ಲ. ನಮ್ಮ ಹಕ್ಕನ್ನು (Rights) ನಿರಾಕರಿಸಲಾಗುತ್ತದೆ. ಯಾವುದೇ ಕಂಪನಿ ಯಾವುದೇ ಕಾರಣ ಇಲ್ಲದೇ ವಿಮೆಯ ಕ್ಲೈಮ್ ಅನ್ನು ನಿರಾಕರಣೆ ಮಾಡುವುದಿಲ್ಲ. ಯಾವುದೋ ಒಂದು ಷರತ್ತು ನಿಯಮಗಳ ಅಡಿಯಲ್ಲಿ ಇಲ್ಲದೇ ಹೋದಾಗ ಹೀಗೆ ಆಗುವ ಸಾಧ್ಯತೆಗಳು ಇರುತ್ತವೆ. ಅಥವಾ ಯಾವುದೋ ಒಂದು ಕಾಯಿಲೆ ನಮ್ಮ ಆರೋಗ್ಯ ವಿಮೆಯ ಅಡಿಯಲ್ಲಿ ಬಾರದೇ ಇದ್ದಾಗ ಈ ತರಹ ಕ್ಲೈಮ್ ರಿಜೆಕ್ಟ್ ಆಗುವ ಸಾಧ್ಯತೆಗಳಿವೆ. ಹಾಗಾದರೆ ಯಾವೆಲ್ಲಾ ಕಾರಣಗಳಿಂದ ಕ್ಲೈಮ್ ರಿಜೆಕ್ಟ್ ಆಗುತ್ತದೆ ಮತ್ತು ಹೀಗಾಗದೇ ಇರಲು ನಾವೇನು ಮಾಡಬಹುದು ನೋಡೋಣ.

ಪ್ರಿ ಎಕ್ಸಿಸ್ಟಿಂಗ್ ಡೀಸೀಸಸ್ (ವಿಮೆಗಿಂತ ಮೊದಲು ಅಸ್ತಿಸ್ತ್ವದಲ್ಲಿರುವ ಕಾಯಿಲೆಗಳು)

ನೀವು ಯಾವುದೇ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳುವಾಗ ನಿಮಗೆ ಈಗಾಗಲೇ ಯಾವುದೋ ಒಂದು ಕಾಯಿಲೆ ಇದ್ದರೆ ಹಾಗೂ ಆ ಕಾಯಿಲೆಯಿಂದಾಗಿ ನೀವು ಆಸ್ಪತ್ರೆಗೆ ದಾಖಲಾಗಿದ್ದರೆ ನಿಮ್ಮ ಕ್ಲೈಮ್ ಅನ್ನು ನಿರಾಕರಿಸುವ ಸಾಧ್ಯತೆ ಹೆಚ್ಚು. ವಿಮೆಯಲ್ಲಿ ಅಂತಹ ನಿಯಮ ಇದೆಯೇ ಎಂದು ಮೊದಲೇ ಪರಿಶೀಲಿಸಿ ವಿಮೆಯನ್ನು ಖರೀದಿಸಿ.

ವೈಟಿಂಗ್ ಪಿರಿಯಡ್ (ವಿಮೆ ಆರಂಭಗೊಳ್ಳುವ ವಿಳಂಬದ ಅವಧಿ)

ಕೆಲವು ರೋಗಗಳ ಚಿಕಿತ್ಸೆಗೆ ವಿಮೆ ಮೊದಲ ವರ್ಷದಿಂದಲೇ ಕ್ಲೈಮ್ ಅನ್ನು ಕೊಡುವುದಿಲ್ಲ. ಅಥವಾ ಈಗಾಗಲೇ ಇರುವ ಕಾಯಿಲೆಗಳ ಚಿಕಿತ್ಸೆಗೆ ಬಂದಾಗ ಕೆಲವು ತಿಂಗಳುಗಳು ಅಥವಾ ಕೆಲವು ವರ್ಷಗಳ ಬಳಿಕವಷ್ಟೇ ವಿಮೆ ಆರಂಭವಾಗುತ್ತದೆ. ಈ ಅವಧಿಯನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಒಂದು ನಿರ್ದಿಷ್ಟ ಕಾಯಿಲೆಯ ವೈಟಿಂಗ್ ಪಿರಿಯಡ್ ಒಂದು ವರ್ಷ ಎಂದಾದರೆ ಒಂದು ವರ್ಷದ ಒಳಗೆ ಆ ನಿರ್ದಿಷ್ಟ ಕಾಯಿಲೆಯಿಂದ ನಾವು ಆಸ್ಪತ್ರೆ ಸೇರುವ ಹಾಗಾದರೆ ನಮಗೆ ಕ್ಲೈಮ್ ಸಿಗುವುದಿಲ್ಲ. ಒಂದು ವರ್ಷದ ನಂತರದ ಎಲ್ಲಾ ಆಸ್ಪತ್ರೆಯ ಖರ್ಚುಗಳನ್ನು ವಿಮೆ ಭರಿಸುತ್ತದೆ. ಇದನ್ನೂ ಓದಿ: Kaatera Film: ಮೀಡಿಯಾ ಬಳಿ ದರ್ಶನ್ ಕ್ಷಮೆ ಕೇಳಿದ್ದು “ಕಾಟೇರ” ನಿಗೆ ಪ್ಲಸ್ ಆಗತ್ತಾ? ಅಭಿಮಾನಿಗಳು ಹೇಳೋದೇನು ಗೊತ್ತಾ?

ಕ್ಲೈಮ್ ಪ್ರೊಸೆಸ್ (ಹಕ್ಕು ಪ್ರಕ್ರಿಯೆ)

ನಾವು ನಮ್ಮ ವಿಮೆಯ ಕ್ಲೈಮ್ ಅನ್ನು ಪಡೆಯಬೇಕಾದರೆ ಅರ್ಜಿಯನ್ನು ಸಲ್ಲಿಸ ಬೇಕಾಗುತ್ತದೆ. ಕ್ಯಾಶ್ ಲೆಸ್ ಎಂದಾದರೆ ಆಸ್ಪೆತ್ರೆಯ ಸಿಬ್ಬಂದಿ ಇದನ್ನು ಮಾಡುತ್ತಾರೆ. ಇಲ್ಲವಾದಲ್ಲಿ ನಮ್ಮ ಕಾಯಿಲೆಯ ಬಗ್ಗೆ ಹಾಗೂ ಚಿಕಿತ್ಸೆಯ ಬಗ್ಗೆ ನಾವು ವಿಮಾ ಕಂಪನಿಗೆ ಹೇಳಬೇಕಾಗುತ್ತದೆ. ಚಿಕಿತ್ಸೆ ಆರಂಭವಾದಾಗ ಇದನ್ನು ತಿಳಿಸಬೇಕಾಗುತ್ತದೆ ಇದನ್ನು ಇಂಟಿಮೇಷನ್ ಎನ್ನುತ್ತಾರೆ. ಇದೆಲ್ಲಾ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಇದಕ್ಕೆ ನಾವು ವಿಮಾ ಕಂಪನಿಯ ಸಲಹೆ ಪಡೆದು ಮುಂದುವರಿಯುವುದು ಉತ್ತಮ.

ಪಾಲಿಸಿ ಅವಧಿ

ಸಾಮಾನ್ಯವಾಗಿ ನಾವು ಪಾಲಿಸಿ ಖರೀದಿಸುವ ಸಮಯದಲ್ಲಿ ಒಂದು ವರ್ಷದ ಅವಧಿಗೆ ಖರೀದಿಸುತ್ತೇವೆ. ಹಾಗು ಈ ಅವಧಿಗೆ ಮೇಲ್ಪಟ್ಟು ಒಂದು ದಿನವೇ ಆದರೂ ಕ್ಲೈಮ್ ಸ್ವೀಕೃತ ಆಗುವುದಿಲ್ಲ. ಸಮಯಕ್ಕೆ ಸರಿಯಾಗಿ ವಿಮೆಯನ್ನು ರಿನಿವಲ್ ಮಾಡಿಸಿಕೊಳ್ಳಬೇಕು.

ಪಾಲಿಸಿ ಷರತ್ತುಗಳು

ಎಲ್ಲಾ ವಿಮಾ ಕಂಪನಿಗಳು ವಿಮೆಯಲ್ಲಿ ನಿಗದಿತ ಷರತ್ತುಗಳನ್ನು ಹೇರಿರುತ್ತಾರೆ. ಈ ನಿಯಗಳ ಪ್ರಕಾರ ಇದ್ದಲ್ಲಿ ಮಾತ್ರ ಕ್ಲೈಮ್ ಸಿಗುತ್ತದೆ. ಇಂತಹ ನಿಯಮಗಳು ಅಥವಾ ಷರತ್ತುಗಳನ್ನು ಪಾಲಿಸಿ ಖರೀದಿಸುವ ಮೊದಲು ಪರಿಶೀಲಿಸಬೇಕಾಗುತ್ತದೆ.

Comments are closed.