Recipe: ನಿನ್ನೆ ಮಾಡಿದ ಚಪಾತಿ ಉಳಿದಿದ್ರೆ ವೇಸ್ಟ್ ಮಾಡ್ಬೇಡಿ, ಮತ್ತೆರಡು ವಸ್ತು ಸೇರಿಸಿ ತಯಾರಿಸಿ ಭರ್ಜರಿ ತಿಂಡಿ; ಮನೆಯವರು ಚಪ್ಪರಿಸಿಕೊಂಡು ತಿನ್ನದೇ ಇದ್ರೆ ಕೇಳಿ!  

Recipe: :ನಾವು ತಿನ್ನುವ ಆಹಾರವನ್ನು ವ್ಯರ್ಥ ಮಾಡಬಾರದು. ನಮಗೆ ಎಷ್ಟು ಬೇಕು ಅಷ್ಟೇ ಬಡಿಸಿಕೊಳ್ಳಬೇಕು. ತುಂಬಾ ಇಷ್ಟ ಎಂದು ಜಾಸ್ತಿ ಹಾಕಿಕೊಂಡು ಬಿಡುವ ರೂಡಿ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಕೆಲವೊಮ್ಮೆ ನಾವು ಮಾಡಿದ ಪದಾರ್ಥ ಹೆಚ್ಚಾದಾಗ ವ್ಯರ್ಥವಾಯಿತಲ್ಲ ಎಂದು ನಾವು ಬೇಸರ ಮಾಡಿಕೊಳ್ಳುತ್ತೇವೆ. ಚಪಾತಿ ಮಾಡಿದಾಗ ಹೆಚ್ಚಾಯಿತು ಎಂದು ನೀವು ಚಿಂತೆ ಬಿಡಿ. ಅದನ್ನು ನೀವು ರುಚಿ ರುಚಿಯಾದ ಉಪ್ಪಿಟ್ಟು ಮಾಡಿ. ಎಲ್ಲರೂ ಪ್ರೀತಿಯಿಂದ ತಿನ್ನುತ್ತಾರೆ ನೋಡಿ. ಇದನ್ನೂ ಓದಿ: Kannada Astrology: ಗಣೇಶ ಚತುರ್ಥಿ ಮುಗಿದು 5 ದಿನಗಳ ಬಳಿಕ ಮಂಗಳನ ಅಸ್ತ: ಈ ಮೂರು ರಾಶಿಯವರ ಜೀವನದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ, ಜಾಗರೂಕರಾಗಿರಿ

ಉಪ್ಪಿಟ್ಟು ಮಾಡಲು ಬೇಕಾಗುವ ಪದಾರ್ಥಗಳು;

೪ ಚಪಾತಿ, ಈರುಳ್ಳಿ, ಟೊಮೆಟೋ, ಕ್ಯಾರೇಟ್ ಒಂದೊಂದು, ಅರ್ಧ ಕ್ಯಾಪ್ಸಿಕಂ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ, ಕೊತ್ತಂಬರಿ ಪುಡಿ ಅರ್ಧ ಚಮಚ, ಗರಂ ಮಸಾಲ ಅರ್ಧ ಚಮಚ, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಹಾಕಲು ಸ್ವಲ್ಪ ಕರಿಬೇವು, ಎರಡು ಚಮಚ ಎಣ್ಣೆ, ಸಾಸಿವೆ, ಜೀರಿಗೆ ಅರ್ಧ ಚಮಚ ಬೇಕಾಗುತ್ತದೆ.

ಇನ್ನು ಉಪ್ಪಿಟ್ಟು ಮಾಡುವ ವಿಧಾನ:

ಮೊದಲು ಚಪಾತಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ನಂತರ ಕಡಾಯಿಗೆ ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಬಿಸಿಯಾದ ನಂತರ ಸಾಸಿವೆ ಜೀರಿಗೆ ಹಾಕಬೇಕು. ಅದು ಸಿಡಿಯಲು ಆರಂಭಿಸಿದಾಗ ಹೆಚ್ಚಿಟ್ಟುಕೊಂಡ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬಣ್ಣ ಬದಲಾಗುವವರೆಗೆ ಫ್ರೈ ಮಾಡಬೇಕು. ನಂತರ ಅದಕ್ಕೆ ಹೆಚ್ಚಿಕೊಂಡ ಟೊಮ್ಯಾಟೋ ಸೇರಿಸಿ ಸ್ವಲ್ಪ ಹೊತ್ತು ಮುಚ್ಚಳವನ್ನು ಮುಚ್ಚಿಡಬೇಕು. ನಂತರ ಕ್ಯಾರೇಟ್, ಕ್ಯಾಪ್ಸಿಕಂ ಸೇರಿಸಿ ಅದಕ್ಕೆ ಅರಿಶಿನ, ಮೆಣಸಿನ ಕಾಯಿ, ಉಪ್ಪು ಕೊತ್ತಂಬರಿ ಪುಡಿ ಹಾಕಿ ಮತ್ತೆ ಫ್ರೈ ಮಾಡಬೇಕು.

ಮತ್ತೆ ಮುಚ್ಚಳವನ್ನು ಮುಚ್ಚಿ ಎರಡು ನಿಮಿಷಗಳ ಮುಚ್ಚಿಡಬೇಕು. ನಂತರ ಈಗ ಕತ್ತರಿಸಿಟ್ಟುಕೊಂಡ ಚಪಾತಿ ತುಂಡುಗಳನ್ನು ಸೇರಿಸಿ ಗರಂ ಮಸಾಲ ಹಾಗೂ ಕರಿಬೇವು ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ. ಚಪಾತಿ ಉಪ್ಪಿಟ್ಟು ಸ್ವಲ್ಪ ಗಟ್ಟಿಯಾಗಿದ್ದರೆ ತಿನ್ನಲು ರುಚಿಯಾಗಿರುತ್ತದೆ. ಕೊನೆಯಲ್ಲಿ ಸ್ವಲ್ಪ ಪ್ರಮಾಣದ ಕೊತ್ತಂಬರಿ ಸೊಪ್ಪು ಸೇರಿಸಿ ಮನೆಯವರಿಗೆ ನೀಡಿ. ಅವರು ಚಪ್ಪರಿಸಿಕೊಂಡು ತಿನ್ನದಿದ್ದರೆ ಆವಾಗ ಹೇಳಿ. ಇದನ್ನು ಓದಿ: iPhone Price Drop: ಗಣೇಶನ ಹಬ್ಬಕ್ಕೆ ಸಿಹಿ ಸುದ್ದಿ; ಆಪಲ್ ಫೋನ್ ತಗೊಳೋಕೆ ಇದೇ ಒಳ್ಳೆ ಟೈಮ್ ನೋಡಿ

Comments are closed.