SBI Student Scholarship 2023: 6 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿ ವೇತನ; ಇಂದೇ ಅರ್ಜಿ ಸಲ್ಲಿಸಿ!

SBI Student Scholarship 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (state bank of india)  ದೇಶದ ಪ್ರಮುಖ ಬ್ಯಾಂಕ್ ಆಗಿದೆ. ಈ ಬ್ಯಾಂಕ್ನ ಎಸ್ಬಿಐ ಫೌಂಡೇಶನ್ ಅಡಿಯಲ್ಲಿ ಆಶಾ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷವೂ ನೀಡಲಾಗುತ್ತಿದೆ. ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಆಯ್ಕೆ ಮಾಡಲಾಗುತ್ತದೆ. ಯಾರೊಬ್ಬ ಪ್ರತಿಭಾವಂತರು ವಿದ್ಯಾಭ್ಯಾಸದಿಂದ ದೂರ ಉಳಿಯಬಾರದು. ವಿದ್ಯಾಭ್ಯಾಸ ಮಾಡಲು ಹಣದ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಇದನ್ನೂ ಓದಿ: PAN Card: ಇನ್ಮುಂದೆ ಈ ಕೆಲಸಕ್ಕೆ ಪಾನ್ ಕಾರ್ಡ್ ಕಡ್ಡಾಯವಲ್ಲ; ಸರ್ಕಾರದ ಹೊಸ ನಿಯಮ ರಾತ್ರೋ ರಾತ್ರಿ ಜಾರಿ!

ಎಸ್ಬಿಐ ಫೌಂಡೇಶನ್ನ ಆಶಾ ವಿದ್ಯಾರ್ಥಿ ವೇತನಕ್ಕೆ 2023-24ರ ಸಾಲಿನಲ್ಲಿ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಈ ಕುರಿತು ಬ್ಯಾಂಕ್ ಪತ್ರಿಕಾ ಮಾಹಿತಿ ನೀಡಿದೆ.

ಅರ್ಹತೆಗಳು;

1. 6ರಿಂದ 12 ನೇ ತರಗತಿವರೆಗೆ ಓದುತ್ತಿರುವವರಿಗೆ ಮಾತ್ರ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

2.ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಹಿಂದಿನ ಶೈಕ್ಷಣಿಕ ಅವಧಿಯಲ್ಲಿ ಶೇ.75ರಷ್ಟು ಅಂಕ ಗಳಿಸಿರಬೇಕು.

3. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 3,೦೦೦೦೦ ರೂ.ಗಳನ್ನು ಮೀರಿರಬಾರದು.

ಅರ್ಜಿ ಸಲ್ಲಿಸಲು ಇರುವ ದಾಖಲೆಗಳು;

ವಿದ್ಯಾರ್ಥಿಯು ಅರ್ಜಿ ಸಲ್ಲಿಸುವ ವೇಳೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವಿದ್ಯಾರ್ಥಿ ಅಥವಾ ಪಾಲಕರ ಬ್ಯಾಂಕ್ ಖಾತೆಯ ವಿವರಗಳು, ವಿದ್ಯಾರ್ಥಿಯ ಹಿಂದಿನ ವರ್ಷದ ಅಂಕಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಇದನ್ನೂ ಓದಿ: Aadhaar Card Update; 10 ವರ್ಷದ ಹಿಂದೆ ಆಧಾರ್ ಕಾರ್ಡ್ ಮಾಡಿಸಿದ್ರೆ ತಕ್ಷಣ ಈ ಕೆಲಸ ಮಾಡಿ; ಕೇಂದ್ರ ಸರ್ಕಾರದ ಮಹತ್ವದ ಸೂಚನೆ!

ಅರ್ಜಿ ಸಲ್ಲಿಸಲು ನವೆಂಬರ್ 3ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಇಷ್ಟಪಡುವವರು ಎಸ್ಬಿಐ ಬ್ಯಾಂಕ್ನ ವೆಬ್ ಸೈಟ್ಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

ಇಲ್ಲಿ ಅರ್ಜಿ ಸಲ್ಲಿಸಿ : https://www.buddy4study.com/page/sbi-asha-scholarship-program?ref=featuredBlocks

Comments are closed.