YouTube Edit: ಯೂಟ್ಯೂಬ್ ನಲ್ಲಿ ಇನ್ನು ಕಂಟೆಂಟ್ ಕ್ರಿಯೇಟ್ ಮಾಡೋದು ಮಾತ್ರವಲ್ಲ, ಈ ಕೆಲಸವನ್ನೂ ಮಾಡಬಹುದು; ಯೂಟ್ಯೂಬ್ ಬಳಕೆದಾರರಿಗೆ ಹಬ್ಬ!

YouTube Edit: ಗೂಗಲ್ ಮಾಲಿಕತ್ವದ ಡಿಜಿಟಲ್ ವೇದಿಕೆಯಾದ ಯೂಟ್ಯೂಬ್ ಕಂಟೆಂಟ್ ಕ್ರಿಯೇಟ್ ಮಾಡುವವರಿಗೆ ಗುಡ್ ನ್ಯೂಸ್ ನೀಡಿದ್ದು, ವೀಡಿಯೋ ಎಡಿಟ್ ಮಾಡುವ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಮೂಲಕ ಯೂ ಟ್ಯೂಬ್ ಚಾನೆಲ್ ಹೊಂದಿರುವರರು, ನಿರಂತರವಾಗಿ ವೀಡಿಯೋ ಮಾಡುವವರು ಇನ್ಮುಂದೆ ತಮ್ಮ ಮೊಬೈಲ್ನಲ್ಲೇ ತಾವು ಮಾಡಿರುವ ವೀಡಿಯೋ ಎಡಿಟ್ ಮಾಡಬಹುದಾಗಿದೆ.

ಹಾಗೆ ನೋಡಿದರೆ ವೀಡಿಯೋ ಎಡಿಟಿಂಗ್ ಕಲ್ಪನೆ ಹೊಸದೇನು ಅಲ್ಲ. ಚೀನಾ ಮೂಲದ ಟಿಕ್ ಟಾಕ್ ಅಪ್ಲಿಕೇಶನ್ನಲ್ಲಿಯೂ ಈ ರೀತಿ ಎಡಿಟ್ ಮಾಡುವ ಸೌಲಭ್ಯ ನೀಡಲಾಗಿತ್ತು. ಈಗ ಗೂಗಲ್ ಸಂಸ್ಥೆಯು ಸಹ ಇದನ್ನೇ ಫಾಲೋ ಮಾಡಿದೆ ಅಷ್ಟೆ.

ಈ ಅಪ್ಲಿಕೇಶನ್ ಸಹಾಯದಿಂದ ಯೂಟ್ಯೂಬರ್ಗಳು ತಮ್ಮ ಮೊಬೈಲ್ನಲ್ಲಿ ಅತ್ಯಂತ ಸುಲಭವಾಗಿ ತಾವು ಮಾಡಿರುವ ವೀಡಿಯೋ ಎಡಿಟ್ ಮಾಡಿ ಅಪ್ಲೋಡ್ ಮಾಡಬಹುದಾಗಿದೆ. ನಿಖರವಾದ ಎಡಿಟಿಂಗ್, ಟ್ರಿಮ್ಮಿಂಗ್, ಆಟೋ ಕ್ಯಾಪ್ಷನ್ ಸೌಲಭ್ಯವನ್ನು ಈ ಅಪ್ಲಿಕೇಶನ್ ಒಳಗೊಂಡಿದೆ. ಇಷ್ಟೇ ಅಲ್ಲದೆ ವಾಯ್ಸ್ ಓವರ್, ಫಿಲ್ಟರ್, ಲೈಬ್ರರಿ, ಟ್ರಾನ್ಸಿಷನ್ಸ್ ಮತ್ತು ಎಫೆಕ್ಟ್ಗಳನ್ನು ಈ ಅಪ್ಲಿಕೇಶನ್ ಹೊಂದಿದೆ.

ಇದರಿಂದಿಗೆ ರಾಯಲ್ಟಿ ಫ್ರಿ ಮ್ಯೂಸಿಕ್, ಬೀಟ್ ಸಿಂಗ್ ವೈಶಿಷ್ಟ್ಯವನ್ನು ಹೊಂದಿದೆ.ಇದರಿಂದಾಗಿ ಯೂಟ್ಯೂಬರ್ಗಳ ಸುಲಭವಾಗಿ ಅತ್ಯಂತ ಪರಿಪೂರ್ಣವಾಗಿ ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಅಪ್ಲೋಡ್ ಮಾಡಬಹುದಾಗಿದೆ.

ಯೂಟ್ಯೂಬ್ ನಿರ್ಮಾಣ ಮಾಡಿರುವ ಈ ಅಪ್ಲಿಕೇಶನ್ ಸಂಪೂರ್ಣ ಉಚಿತವಾಗಿದೆ. ಪ್ರಸ್ತುತ ಎಂಡ್ರಾಯ್ಡ್ ಡಿವೈಸ್ಗಳ ಬೀಟಾದಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ. ಯೂಟ್ಯೂಬ್ ಕ್ರಿಯೇಟ್ ಮಾಡಿರುವ ಬೀಟ್ನ ಈ ಆವೃತ್ತಿಯು ಅಮೆರಿಕಾ, ಇಂಗ್ಲೇಂಡ್, ಜರ್ಮನಿ, ಫ್ರಾನ್ಸ್, ಇಂಡೋನೇಷಿಯಾ, ಭಾರತ, ಕೋರಿಯಾ, ಸಿಂಗಾಪುರಗಳಲ್ಲಿ ಮಾತ್ರ ಲಭ್ಯವಿದೆ. ಮುಂದಿನ ವರ್ಷ ಈ ಅಪ್ಲಿಕೇಶನ್ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಎಲ್ಲ ಕಡೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಯೂಟ್ಯೂಬ್ ದೃಢಪಡಿಸಿದೆ.

ಯೂಟ್ಯೂಬ್ ತನ್ನ ವಾರ್ಷಿಕ ಮೇಡ್ ಆನ್ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಬಳಕೆದಾರರಿಗೆ ಹಲವು ಎಐ ಚಾಲಿತ ಟೂಲ್ಗಳನ್ನು ನೀಡಿದೆ. ಹೀಗಾಗಿ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಇಷ್ಟು ದಿನ ವೀಡಿಯೋಗಳನ್ನು ಮಾಡಿ ನಂತರ ಬೇರೆ ಬೇರೆ ಅಪ್ಲಿಕೇಶನ್ ಬಳಸಿ ತಮ್ಮ ವೀಡಿಯೋಗಳನ್ನು ಎಡಿಟ್ ಮಾಡುತ್ತಿದ್ದ ಯೂಟ್ಯೂಬರ್ಗಳಿಗೆ ಇನ್ಮುಂದೆ ಆ ರೀತಿಯ ಕಷ್ಟಗಳು ಇರುವುದಿಲ್ಲ. ತಾವು ಇದ್ದ ಜಾಗದಲ್ಲೇ ವೀಡಿಯೋಗಳನ್ನು ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ತಮ್ಮ ಚಾನೆಲ್ಗಳಿಗೆ ಅಪ್ಲೋಡ್ ಮಾಡಬಹುದಾಗಿದೆ.

Comments are closed.