Kannada Astrology: ಈ ನಾಲ್ಕು ರಾಶಿಯವ್ರು ತುಂಬಾನೇ ಭಾವನಾತ್ಮಕ ಜೀವಿಗಳು; ಸ್ನೇಹಿತರ ಸಣ್ಣ ಸಣ್ಣ ಖುಷಿಯನ್ನು ಸಂಭ್ರಮಿಸುತ್ತಾರೆ, ನೀವು ಹೀಗೆನಾ ನೋಡಿ!

Kannada Astrology: ಜ್ಯೋತಿಷ್ಯವು ಪ್ರಾಚೀನವು ಅತ್ಯಂತ ಆಕರ್ಷಣೀಯ ವಿದ್ಯೆಯಾಗಿದೆ. ಗ್ರಹಗಳು ಹಾಗೂ ಮಾನವರ ನಡುವಿನ ಸಂಬಂಧವನ್ನು ವಿವರಿಸುತ್ತದೆ. ಅದರ ಅಸಂಖ್ಯಾತ ವಿಚಾರಗಳಲ್ಲಿ ಗ್ರಹಗಳ ಆಧಾರದಲ್ಲಿ ವ್ಯಕ್ತಿಗಳ ವ್ಯಕ್ತಿತ್ವ ವಿಶ್ಲೇಷಣೆ ಮಾಡಬಹುದು. ಪ್ರತಿ ರಾಶಿಗೆ ಸಂಬಂಧಿಸಿದ ಭಾವನಾತ್ಮಕ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಬಹುದು. ಭಾವನ್ಮಾತ್ಮಕ ಸಂಕೀರ್ಣತೆ ಮತ್ತು ವ್ಯಕ್ತಿಯ ಒಳನೋಟ ಅರ್ಥ ಮಾಡಿಕೊಳ್ಳಬಹುದು.ಜ್ಯೋತಿಷ್ಯದ ಪ್ರಕಾರ ಈ ನಾಲ್ಕು ರಾಶಿಯವರು ಬಹಳ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಆ ರಾಶಿಗಳು ಯಾವುದು ಎಂದು ಈಗ ತಿಳಿದುಕೊಳ್ಳೊಣ.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯಲ್ಲಿ ಜನಿಸಿದವರು ತಮ್ಮ ಆಳವಾದ ಸಂವೇದನೆ ಮತ್ತು ಪೋಷಣೆಯ ಪ್ರವೃತ್ತಿಗೆ ಖ್ಯಾತರಾಗಿರುತ್ತಾರೆ. ಕರ್ಕಾಟಕ ರಾಶಿಯವರು ತಮ್ಮ ಅಕ್ಕಪಕ್ಕದ ಜನರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವವನ್ನು ಹೊಂದಿರುತ್ತಾರೆ. ಈ ಸ್ವಭಾವ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಇವರ ಭಾವನಾತ್ಮಕ ಸ್ವಭಾವವು ಪ್ರೀತಿಪಾತ್ರ ಮತ್ತು ಎಲ್ಲರಿಗೆ ಸ್ಫೂರ್ತಿಯನ್ನು ನೀಡುತ್ತದೆ.ಈ ಭಾವನಾತ್ಮಕ ವಿಚಾರವೇ ಇತರರನ್ನು ಅದ್ಬುತ ಪಾಲುದಾರರು, ಸ್ನೇಹಿತರನ್ನು ವಿಶ್ವಾಸಿಕರನ್ನಾಗಿ ಮಾಡುತ್ತದೆ.

ಮೀನ ರಾಶಿ:

ಮೀನ ರಾಶಿಯಲ್ಲಿ ಜನಿಸಿದವರು ಸಹ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಮೀನ ರಾಶಿಯ ವ್ಯಕ್ತಿಗಳು ಕಲಾವಿದರು, ಕನಸುಗಾರರು ಆಗಿರುತ್ತಾರೆ.ಇವರ ಭಾವನೆ ಸಮುದ್ರದಷ್ಟು ಆಳವಾಗಿರುತ್ತದೆ.ಕಲ್ಪನೆ ಮತ್ತು ಆದ್ಯಾತ್ಮಿಕ ರಾಶಿಯಾಗಿರುವ ನೆಪ್ಚೂನ್ನಿಂದ ಆಳಲ್ಪಡುತ್ತಾರೆ. ಹಾಗಾಗಿ ಮೀನ ರಾಶಿಯವರು ಸಹಜವಾಗಿಯೇ ಇತರರ ಸೂಕ್ಷ್ಮ ವಿಚಾರಗಳನ್ನು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಪ್ರತಿ ವಿಚಾರಕ್ಕೂ ತುಂಬಾನೇ ಮಹತ್ವ ನೀಡುತ್ತಾರೆ. ಮೀನ ರಾಶಿಯವರು ಸಹಾನುಭೂತಿ ಹಾಗೂ ಇತರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಎತ್ತಿದ ಕೈ ಎನ್ನಬಹುದು. ಅವರ ಈ ವಿಶೇಷತೆಯೇ ಸಮಾಜದಲ್ಲಿ ಜನರು ಗೌರವಿಸುವಂತೆ ಮಾಡುತ್ತದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಇನ್ನೊಬ್ಬರ ಸೂಕ್ಷ್ಮ ವಿಚಾರಗಳನ್ನು ಸಹ ಅರ್ಥ ಮಾಡಿಕೊಳ್ಳು ಸಾಮರ್ಥ್ಯ ಹೊಂದಿರುತ್ತಾರೆ. ಅಲ್ಲದೆ ಎಲ್ಲರ ಜೊತೆಯು ಭಾವನಾತ್ಮಕವಾಗಿ ಸಂಬಂಧ ಹೊಂದಲು ಬಯಸುತ್ತಾರೆ. ಮತ್ತು ಪ್ರತಿಯೊಬ್ಬರು ಭಾವನಾತ್ಮಕವಾಗಿ ಇರಬೇಕು ಎಂದು ಬಯಸುತ್ತಾರೆ. ವೃಶ್ಚಿಕ ರಾಶಿಯಲ್ಲಿ ಜನಿಸಿದವರು ತಮ್ಮ ಆಸೆಗಳು ಮತ್ತು ಭಾವನೆಗಳೊಂದಿಗೆ ಹೆಚ್ಚು ಮಹತ್ವ ನೀಡುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಮನಸ್ಸಿನ ಆಳವನ್ನು ಎದುರಿಸಲು ಹೆದರುವುದಿಲ್ಲ. ಇವರು ಸ್ವಭಾವತಃ ಬಹಳ ಧೈರ್ಯವಂತರಾಗಿರುತ್ತಾರೆ. ಈ ಆಳವಾದ ಸ್ವಯಂ ಅರಿವು ಸಂಕೀರ್ಣವಾದ ಭಾವನಾತ್ಮಕ ಸಂಬಂಧವನ್ನು ಹಲವು ಸಂದರ್ಭದಲ್ಲಿ ಸಮತೋಲನ ಹಾಗೂ ದೃಢನಿಶ್ಚಯದೊಂದಿಗೆ ಗಟ್ಟಿ ಹೆಜ್ಜೆ ಇಡಲು ಸಹಾಯ ಮಾಡುತ್ತದೆ.

ವೃಷಭ ರಾಶಿ:

ವೃಷಭ ರಾಶಿಯಲ್ಲಿ ಜನಿಸಿದವರು ಭೌತಿಕ ಜಗತ್ತಿನೊಂದಿಗೆ ಆಳವಾದ ಸಂಬಂಧವನ್ನು ಹೊಂದಿರುತ್ತಾರೆ. ಇವರು ಇತರರ ಭಾವನೆಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಸರಳ ಹಾಗೂ ಸಂತೋಷದ ಜೀವನ ನಡೆಸಲು ಇಷ್ಟಪಡುತ್ತಾರೆ. ಇವರ ಭಾವನಾತ್ಮಕ ಸ್ಥಿರತೆ ಹಾಗೂ ಅಚಲ ನಿಷ್ಠೆಯೇ ಇವರ ಶಕ್ತಿಯಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ.

Comments are closed.