Three Rajyog: ಬರೋಬ್ಬರಿ 100 ವರ್ಷಗಳ ನಂತರ ನಡೆಯಲಿರುವ  ಮೂರು ಗ್ರಹಗಳ ಸಂಯೋಗ; ಈ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

Three Rajyog: ಗ್ರಹಗಳು ಚಲನಶೀಲತೆ ಹೊಂದಿವೆ. ಕಾಲ ಕಾಲಕ್ಕೆ ಸ್ಥಾನಪಲ್ಲಟ ಹೊಂದುತ್ತದೆ. ಇದರಿಂದ ಹಲವು ರಾಶಿಯವರಿಗೆ ಒಳ್ಳೆಯದಾದರೆ ಇನ್ನು ಕೆಲವು ರಾಶಿಯವರಿಗೆ ನಷ್ಟವಾಗುತ್ತದೆ. ಹೀಗೆ ರೂಪುಗೊಂಡ ಯೋಗದ ಪರಿಣಾಮ 12 ರಾಶಿಯ ಮೇಲೆ ಆಗುತ್ತದೆ. ಇದನ್ನೂ ಓದಿ: Kannada Astrology: ಅಕ್ಟೋಬರ್ 22 ರಂದು ಬದಲಾಗದಲಿದೆ ಈ ರಾಶಿಯವರ ಅದೃಷ್ಟ; ಇನ್ನು ಮುಂದೆ ಈ 4 ರಾಶಿಯವರು ಮುಟ್ಟಿದ್ದೇಲ್ಲಾ ಚಿನ್ನ!

ಅದರಂತೆ ಅ.20 ರಂದು ಸೂರ್ಯನು ತುಲಾ ರಾಶಿ ಪ್ರವೇಶಿಸುತ್ತಿದ್ದಾನೆ. ಇದೇ ವೇಳೆ ಮರುದಿನ ಬುಧ ಕೂಡ ತುಲಾ ರಾಶಿಗೆ ಪಾದಾರ್ಪಣೆ ಮಾಡಲಿದ್ದಾನೆ.ಈ ಎರಡು ಗ್ರಹಗಳ ಸಂಯೋಜನೆಯಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ. ಈಗಾಗಲೇಸಸ ರಾಜಯೋಗ ಮತ್ತು ಭದ್ರ ರಾಜಯೋಗ ಈ ರಾಶಿಯಲ್ಲಿ ನಡೆದಿದೆ. ಈ ಮೂಲಕ ನೂರು ವರ್ಷದ ನಂತರ ಮೂರು ರಾಜಯೋಗಗಳು ಮೂರು ರಾಶಿ ಚಕ್ರದ ಚಿಹ್ನೆಗಳು ಮತ್ತು ಉತ್ತಮ ಹಣದ ಹರಿವು, ಯಶಸ್ಸು, ಕೀರ್ತಿಯನ್ನು ಕಾಣಲಿದ್ದಾರೆ. ಹಾಗಾದ್ರೆ ಯಾವ ಯಾವ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಎಂದು ತಿಳಿದುಕೊಳ್ಳೊಣ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ಮೂರು ರಾಜ ಯೋಗಗಳು ಬಂದಿರುವುದರಿಂದ ಬಹಳ ಲಾಭದಾಯಕವಾಗಿದೆ. ಈ ರಾಶಿಯವರು ವೃತ್ತಿ ಜೀವನ ಹಾಗೂ ವ್ಯವಹಾರದಲ್ಲಿ ಯಶಸ್ಸು ಗಳಿಸಲಿದ್ದಾರೆ. ಕೆಲವರು ಮಕ್ಕಳಿಂದ ಸಿಹಿ ಸುದ್ದಿ ಕೇಳಲಿದ್ದಾರೆ. ಸಂಸಾರದಲ್ಲಿಯೂ ನೆಮ್ಮದಿ ನೆಲೆಸಿರುತತ್ತದೆ. ಇನ್ನು ಪ್ರೇಮಿಗಳಾದವರು ತಮ್ಮ ವಿಚಾರವನ್ನು ಮನೆಯಲ್ಲಿ ಪ್ರಸ್ತಾಪಿಸಲು ಸೂಕ್ತ ಸಮಯವಾಗಿದೆ. ನಿಮಗೆ ಕುಟುಂಬದವರಿಂದ ಬೆಂಬಲ ಸಿಗಲಿದೆ. ಬಹಳ ದಿನಗಳಿಂದ ಹೊಸ ವಾಹನ ಖರೀದಿಸಬೇಕು ಎಂದು ಅಂದುಕೊಂಡಿದ್ದರೆ ಇದು ಬಹಳ ಪ್ರಶಸ್ತ ಸಮಯವಾಗಿದೆ. ಹೊಸ ಆಸ್ತಿ ಖರೀದಿ, ಹೂಡಿಕೆಗಳನ್ನು ಆರಂಭಿಸಲು ಸಹ ಇದು ಒಳ್ಳೆಯ ಸಮಯವಾಗಿದೆ. ಇದನ್ನೂ ಓದಿ: SBI Student Scholarship 2023: 6 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿ ವೇತನ; ಇಂದೇ ಅರ್ಜಿ ಸಲ್ಲಿಸಿ!

ಮಿಥುನ ರಾಶಿ:

ಮಿಥುನ ರಾಶಿಯಲ್ಲಿ ಜನಿಸಿದವರು ಈ ಮೂರು ರಾಜಯೋಗದ ಪರಿಣಾಮದಿಂದ ತಮ್ಮ ಜೀವನದಲ್ಲಿ ಯಶಸ್ಸು ಕಾಣಲಿದ್ದಾರೆ. ಇಲ್ಲಿವರೆಗೆ ಪಟ್ಟ ಎಲ್ಲ ಕಷ್ಟಗಳಿಗೆ ಪ್ರತಿಫಲ ಸಿಗುವ ಸಮಯ ಇದಾಗಿದೆ. ಯಾವುದಾದರು ಹೊಸ ಉದ್ಯಮ, ವ್ಯಾಪಾರ, ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದೆ. ಅಲ್ಲದೆ ಮಿಥುನ ರಾಶಿಯವರಿಗೆ ವಿದೇಶಿ ಪ್ರವಾಸ ಯೋಗವಿದೆ. ಮಿಥುನ ರಾಶಿಯವರಿಗೆ ಕೌಟುಂಬಿಕವಾಗಿಯೂ ಎಲ್ಲ ರೀತಿಯಲ್ಲಿ ಬೆಂಬಲ ಸಿಗಲಿದೆ. ಇದರಿಂದ ಕುಟುಂಬ ಸದಸ್ಯರ ಜೊತೆ ಒಳ್ಳೆಯ ಸಮಯವನ್ನು ನೀವು ಕಳೆಯಲಿದ್ದೀರಿ.

ಮಕರ ರಾಶಿ:

ಮಕರ ರಾಶಿಯಲ್ಲಿ ಜನಿಸಿದವರು ಈ ಮೂರು ರಾಜಯೋಗದಿಂದಾಗಿ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನ ಮಾನ ಪ್ರಾಪ್ತಿಯಾಗಲಿದೆ. ಮಕರ ರಾಶಿಯವರಿಗೆ ಅನಿರೀಕ್ಷಿತವಾಗಿ ಹಣ ಬರಲಿದೆ. ಈ ಮೂರು ರಾಜಯೋಗದಿಂದ ನಿಮ್ಮ ಅದೃಷ್ಟವು ಸೂರ್ಯನಂತೆ ಬೆಳಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ಅಲ್ಲದೆ ವೃತ್ತಿ ಜೀವನದಲಿ ಇದುವರೆಗೆ ನೀವು ಪಟ್ಟ ಎಲ್ಲ ಕಷ್ಟಗಳಿಗೆ, ನಿಮ್ಮ ಪ್ರಾಮಾಣಿಕತೆಗೆ ಬೆಲೆ ಸಿಗಲಿದೆ. ನಿಮಗೆ ಭಡ್ತಿ ಸಿಗುವ ಯೋಗವಿದೆ.

Comments are closed.