New Loan Scheme: ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ 2,000 ಮಾತ್ರವಲ್ಲ, ಸಿಗತ್ತೆ ಉಚಿತ  25,೦೦೦ರೂ. ಇಂದೇ ಅಪ್ಲೈ ಮಾಡಿ!

New Loan Scheme: ಕರ್ನಾಟಕದ ಎಲ್ಲ ಮಹಿಳೆಯರಿಗಾಗಿ ರಾಜ್ಯ ಸರ್ಕಾರವು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಮಹಿಳೆಯರನ್ನು ಸ್ವಾವಲಂಬಿಯಾಗಿಸಲು 25,೦೦೦ ರೂ.ಗಳನ್ನು ಸಾಲ ನೀಡಲು ಮುಂದಾಗಿದೆ. ಇದಕ್ಕಾಗಿ ಶ್ರಮ ಶಕ್ತಿ ಮಹಿಳಾ ವಿಶೇಷ ಯೋಜನೆ ಜಾರಿಗೆ ತರಲಾಗಿದೆ. ಹಾಗಾದರೆ ಯಾರೆಲ್ಲ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಬಹುದು? ಯಾವ ರೀತಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ನಾವು ತಿಳಿಸಿಕೊಡುತ್ತೇವೆ.

ಈಗಾಗಲೇ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಹಾಗೂ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,೦೦೦ ರೂ. ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಈಗಾಗಲೇ ಲಕ್ಷಾಂತರ ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈಗ ರಾಜ್ಯ ಸರ್ಕಾರವು ಶ್ರಮ ಶಕ್ತಿ ವಿಶೇಷ ಮಹಿಳಾ ಯೋಜನೆ ಜಾರಿಗೆ ತಂದಿದೆ. ಇದು ಬಡ್ಡಿ ರಹಿತ ಸಾಲ ನೀಡುವ ಯೋಜನೆಯಾಗಿದೆ. ಹಾಗಾಗಿ ನೀವು ಪಡೆದುಕೊಂಡ ಸಾಲವನ್ನಷ್ಟೆ ಹಿಂತಿರುಗಿಸಿದರೆ ಸಾಕು. ಮಹಿಳೆಯರು ಈ ಯೋಜನೆಯಡಿ ಕೇವಲ ಶೇ.4 ಬಡ್ಡಿದರದಲ್ಲಿ 5೦,೦೦೦ ರೂ. ಸಾಲ ನೀಡಲಾಗುತ್ತದೆ.

ಅರ್ಹತೆಗಳು

ಅರ್ಜಿದಾರರು ಧಾರ್ಮಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು. ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು,ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದೊಳಗೆ ಇರಬೇಕು. ಎಲ್ಲ ಮೂಲಗಳಿಂದ ಅರ್ಜಿದಾರರ ಕುಟುಂಬದ ಆದಾಯವು 3,5೦,೦೦೦ ರೂ. ಮೀರಿರಬಾರದು, ಅರ್ಜಿದಾರರ ಕುಟುಂಬದವರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಾಗಿರಬಾರದು, ಅರ್ಜಿದಾರರು ಹಾಗೂ ಅವರ ಕುಟುಂಬದವರು ಕಳೆದ 5 ವರ್ಷದಲ್ಲಿ ರಾಜ್ಯ ಸರ್ಕಾರದ ಯಾವುದೇ ನಿಗಮ ಮಂಡಳಿಗಳಲ್ಲಿ ಯಾವುದೇ ಸೌಲಭ್ಯ ಪಡೆದಿರಬಾರದು.

ಯಾವ ಯಾವ ಉದ್ಯೋಗ ಮಾಡಬಹುದು?:

ಟೈಲರಿಂಗ್, ಹೂವಿನ ವ್ಯಾಪಾರ, ಟೀ ಸ್ಟಾಲ್, ಹಣ್ಣಿನ ವ್ಯಾಪಾರ, ಮೀನು ಹಾಗೂ ಮಾಂಸದ ವ್ಯಾಪಾರ ಹೀಗೆ ಸಣ್ಣ ಸಣ್ಣ ವ್ಯಾಪಾರ ಶುರು ಮಾಡಬಹುದಾಗಿದೆ.

ಬೇಕಾಗುವ ದಾಖಲೆಗಳು:

ಯೋಜನಾ ವರದಿ, ಸಕ್ಷಮ ಪ್ರಾಧಿಕಾರದಿಂದ ಜಾತಿ/ ಅಲ್ಪಸಂಖ್ಯಾತ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ಖಾತರಿ ನೀಡುವ ಸ್ವಯಂ ಘೋಷಣಾ ಪತ್ರ ಮುಂತಾದ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ.

ಸರ್ಕಾರದ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ತಿಳಿಸಲಾಗುವ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಲಿಂಕ್ : https://kmdconline.karnataka.gov.in/Portal/login

Comments are closed.