Digital literacy: ಗ್ರಾಮೀಣ ಭಾಗದ ಜನರಿಗೆ ಗುಡ್ ನ್ಯೂಸ್; ಫ್ರಿಯಾಗಿ ಸಿಗುತ್ತೆ ಈ ಸೌಲಭ್ಯ!

Digital literacy: ಸದ್ಯ ನಮ್ಮ ರಾಜ್ಯದಲ್ಲಿ ಸದ್ದೇ ಆಗದಂತೆ ಒಂದೊಂದೆ ಯೋಜನೆಗಳು ಜಾರಿಯಾಗುತ್ತಿವೆ. ರಾಜ್ಯದ ಜನರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರವು ಒಂದೊಂದೆ ಯೋಜನೆಗಳಿಗೆ ಚಾಲನೆ ನೀಡುತ್ತಿದೆ. ಈ ವಿಚಾರಗಳು ಹಲವರಿಗೆ ತಿಳಿದಿರುವುದಿಲ್ಲ. ರಾಜ್ಯದ ಜನರ ಆರ್ಥಿಕ ಸ್ಥಿತಿಗತಿ ಸುಧಾರಿಸುವುದು ಸರ್ಕಾರಗಳ ಮುಖ್ಯ ಗುರಿಯಾಗಿರುತ್ತದೆ. ಗ್ರಾಮೀಣ ಭಾಗದ ಜನರಿಗೆ ಸರ್ಕಾರವು ಗುಡ್ ನ್ಯೂಸ್ ನೀಡಿದ್ದು, ಗ್ರಾಮೀಣ ಜನರನ್ನು ಡಿಜಟಲಿಕರಣ ಕಲೆಯನ್ನು ಕಲಿಸಲು ಮುಂದಾಗಿದೆ. ಇದನ್ನೂ ಓದಿ: New Loan Scheme: ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ 2,000 ಮಾತ್ರವಲ್ಲ, ಸಿಗತ್ತೆ ಉಚಿತ  25,೦೦೦ರೂ. ಇಂದೇ ಅಪ್ಲೈ ಮಾಡಿ!

ಸದ್ಯ ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಜನರ ಜೀವನ ಅಭಿವೃದ್ಧಿಯತ್ತ ಗಮನ ಹರಿಸಿದ್ದು, ಈಗ ಹೊಸ ಸೌಲಭ್ಯ ನೀಡಲು ಮುಂದಾಗಿದೆ. ಈ ವರ್ಷದ ಅಂತ್ಯದೊಳಗೆ ರಾಜ್ಯದ ೩೫ ಗ್ರಾಮ ಪಂಚಾಯತ್ಗಳನ್ನು ಡಿಜಿಟಲ್ ಗ್ರಾಮ ಪಂಚಾಯತ್ ಆಗಿ ಪರಿವರ್ತನೆ ಮಾಡಲು ನಿರ್ಧರಿಸಿದೆ.

ಗ್ರಾಮಿಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು  ಗ್ರಾಮಗಳ ಅಭಿವೃದ್ಧಿ ಜೊತೆ ಗ್ರಾಮಸ್ಥರಿಗೆ ಡಿಜಿಟಲ್ ಜ್ಞಾನವನ್ನು ನೀಡುವ ಮೂಲಕ ಅವರಿಗೆ ಮೂಲಭೂತವಾಗಿ ಬೇಕಾದ ಎಲ್ಲ ಕೆಲಸ ಕಾರ್ಯಗಳನ್ನು ಅವರೇ ಮಾಡಿಕೊಳ್ಳುವಂತೆ ಮಾಡಲು ನಿರ್ಧಾರ ಕೈಗೊಂಡಿದೆ.

ಗ್ರಾಮೀಣ ಭಾಗದ ರೈತಾಪಿ ಜನರಲ್ಲಿ ಡಿಜಿಟಲ್ ಜ್ಞಾನವನ್ನು ನೀಡಲು ರಾಜ್ಯ ಸರ್ಕಾರವು ಮುಂದಾಗಿದೆ. ರಾಜ್ಯದ ಆಯ್ದ ೩೫ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಡಿಜಟಲಿಕರಣ ಪ್ರಕ್ರಿಯೆ ಆರಂಭಗೊಂಡಿದೆ. ಈಗಾಗಲೇ ೩೫ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮಗಳನ್ನು ಆರಂಭಿಸಿದೆ.

ಗ್ರಾಮದಲ್ಲಿರುವ ನಿರುದ್ಯೋಗಿ ಪದವಿದರರನ್ನು ಗುರುತಿಸಿ ಅವರಿಗೆ ವಾರ್ಡ್ ಹಂತದ ಡಿಜಿಟಲ್ ಮಾರ್ಗದರ್ಶಕರಾಗಿ ನೇಮಕ ಮಾಡಲಾಗಿದೆ. ಇವರು ಸ್ವಯಂ ಸೇವಕರ ರೀತಿ ಕೆಲಸ ಮಾಡಬೇಕು. ಈ ಸ್ವಯಂ ಸೇವಕರು ತಮ್ಮ ಗ್ರಾಮದ ಜನರಿಗೆ ಡಿಜಿಟಲ್ ತರಬೇತಿ ನೀಡುತ್ತಾರೆ. ಇದಕ್ಕಾಗಿ ಗ್ರಾಮದಲ್ಲಿರುವ ಗ್ರಂಥಾಲಯಗಳಿಗೆ ಇಂಟರ್ನೆಟ್, ಲ್ಯಾಪ್ಟಾಪ್, ಸ್ಮಾರ್ಟ್ ಫೋನ್ಗಳನ್ನು ಒದಗಿಸಲಾಗಿದೆ. ಇದನ್ನೂ ಓದಿ: Kannada Astrology: ಅಕ್ಟೋಬರ್ 22 ರಂದು ಬದಲಾಗದಲಿದೆ ಈ ರಾಶಿಯವರ ಅದೃಷ್ಟ; ಇನ್ನು ಮುಂದೆ ಈ 4 ರಾಶಿಯವರು ಮುಟ್ಟಿದ್ದೇಲ್ಲಾ ಚಿನ್ನ!

ಡಿಜಿಟಲ್ ಜ್ಞಾನವು ಇಂದಿನ ದಿನದಲ್ಲಿ ತೀರಾ ಅವಶ್ಯಕವಾಗಿದೆ. ಈಗ ಪ್ರತಿಯೊಂದು ಕಾರ್ಯವನ್ನು ಆನ್ಲೈನ್ ಮೂಲಕ ಮಾಡಿಕೊಳ್ಳಬಹುದಾಗಿದೆ. ಹೀಗೆ ಆನ್ಲೈನ್ನಲ್ಲಿ ಕೆಲಸ ಮಾಡಿಕೊಳ್ಳಲು ಸಹ ಬೇಸಿಕ್ ನೋಲೆಜ್ ಅವಶ್ಯಕವಾಗಿರುತ್ತದೆ. ಯಾವ ರೀತಿ ವೆಬ್ಸೈಟ್ಗೆ ಭೇಟಿ ನೀಡಬೇಕು, ಭೇಟಿ ನೀಡಿದ ನಂತರ ಯಾವ ರೀತಿ ಅರ್ಜಿ ಭರ್ತಿ ಮಾಡಬೇಕು, ಅಥವಾ ಬ್ಯಾಂಕಿಂಗ್ ವ್ಯವಹಾರವನ್ನು ಯಾವ ರೀತಿ ಮಾಡಿಕೊಳ್ಳಬೇಕು ಎನ್ನುವ ಜ್ಞಾನವು ಇಂದು ತೀರಾ ಅಗತ್ಯವಾಗಿದೆ. ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಹಾಗಾಗಿ ಇದನ್ನು ಮನಗಂಡಿರುವ ಸರ್ಕಾರವು ಗ್ರಾಮೀಣ ಜನರಿಗೂ ಡಿಜಿಟಲ್ ಜ್ಞಾನ ಹಾಗೂ ಕೌಶಲ್ಯ ನೀಡಲು ಮುಂದಾಗಿದೆ.

Comments are closed.