Business Idea: ಕಡಿಮೆ ಬಜೆಟ್ನಲ್ಲಿ ಹೆಚ್ಚಿನ ಲಾಭ; ಈ ವ್ಯಾಪಾರ ಮಾಡಿದ್ರೆ ಕೈತುಂಬಾ ಆದಾಯ ಫಿಕ್ಸ್! ಈ ಬ್ಯುಸನೆಸ್ ಸ್ಟಾರ್ಟ್ ಮಾಡಿ!

Business Idea: ಜನರನ್ನು ಆಕರ್ಷಿಸುವ ಹಾಗೂ ಹೆಚ್ಚಿನ ಜನರು ಕೊಂಡುಕೊಳ್ಳುವ ಅನೇಕ ಸಣ್ಣ ಸಣ್ಣ ವ್ಯಾಪಾರಗಳಿವೆ. ಇದರಲ್ಲಿ ನಿಮಗೆ ಲಾಭ ನಿಶ್ಚಿತ. ದೊಡ್ಡ ಪ್ರಮಾಣ ಲಾಭ ಬರದಿದ್ದರೂ ಬಂದ ಹಣವನ್ನು ನೀವು ಉಳಿತಾಯ ಮಾಡುವುದರಿಂದ ನಿಮಗೆ ದೊಡ್ಡ ಪ್ರಮಾಣದ ಲಾಭವೇ ಆಗಲಿದೆ. ಹಾಗೆ ಸಣ್ಣ ಪ್ರಮಾಣದ ಹೂಡಿಕೆ ಮಾಡಿ ಲಾಭ ಗಳಿಸಬಹುದಾದ ವ್ಯಾಪಾರಗಳ ಬಗ್ಗೆ ಈಗ ನೋಡೋಣ.

3ಡಿ ಮುದ್ರಣ:

ತಂತ್ರಜ್ಞಾನವು ಪ್ರವೇಶಿಸಬಹುದಾದ ಹಾಗೂ ಅತ್ಯಂತ ಸುಲಭವಾಗಿ ಮಾಡಬಹುದಾದ ೩ಡಿ ಮುದ್ರಣ ಸೇವೆ ವ್ಯಾಪಕವಾಗಿ ಪ್ರಚುರವಾಗುತ್ತಿದೆ.೩ಡಿ ಮುದ್ರಣದೊಂದಿಗೆ ವ್ಯಾಪಾರ ಹಾಗೂ ಕಸ್ಟಮ್ಸ್ಗಳು ಮತ್ತು ಮೂಲ ಮಾದರಿಗಳನ್ನು ತ್ವರಿತವಾಗಿ ವೆಚ್ಚ ಪರಿಣಾಮಕಾರಿಯಾಗಿ ರಚಿಸಬಹುದು. ಏಕೆಂದರೆ ಈ ವ್ಯಾಪಾರಕ್ಕೆ ದುಬಾರಿ ಅಚ್ಚುಗಳು ಹಾಗೂ ಉಪಕರಣಗಳು ಅಗತ್ಯವಿಲ್ಲ.

ಆಹಾರ ಮತ್ತು ಪಾನೀಯ ಉತ್ಪಾದನೆ:

ಸಣ್ಣ ಪ್ರಮಾಣದ ಉದ್ಯಮ ಸ್ಥಾಪಿಸುವವರಿಗೆ ಆಹಾರ ಮತ್ತು ಪಾನೀಯ ವಲಯ ಅತಂತ್ಯ ಪ್ರಶಸ್ತವಾಗಿದೆ. ಇ ಉದ್ಯಮ ಇಂದು ದೇಶದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಉದ್ಯಮಿಗಳು ಕೃಷಿಕರ ಜೊತೆ ನಿಕಟ ಸಂಬಂಧ ಇಟ್ಟುಕೊಂಡು ಅವರಿಂದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಉತ್ಪನ್ನವಾಗಿ ಮಾಡಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು.

ಕೈಯಿಂದ ಮಾಡಿದ ಕಾಗದ:

ಮತ್ತೊಂದು ಸಣ್ಣ ಪ್ರಮಾಣದ ಉದ್ಯಮವೆಂದರೆ ಕೈಯಿಂದ ತಯಾರಿಸಬಹುದಾದ ಕಾಗದವಾಗಿದೆ.ಇದು ಸುಸ್ಥಿರತೆ ಹಾಗೂ ಪರಿಸರ ಸ್ನೇಹಿ ಆಗಿರುವುದರಿಂದ  ಇದರಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ನಿಮಗೂ ಸಹ ಕಡಿಮೆ ಖರ್ಚಿನಲ್ಲಿ ಉದ್ಯಮ ಶುರು ಮಾಡಿದಂತೆ ಆಗುತ್ತದೆ.

ಶುಭಾಷಯ ಪತ್ರಗಳು, ಲೇಖನ ಸಾಮಾಗ್ರಿಗಳು, ಮತ್ತು ಜರ್ನಲ್ಗಳಂತಹ ಅನನ್ಯ ಮತ್ತು ಆಕರ್ಷಕ ಉತ್ಪನ್ನಗಳನ್ನು ರಚಿಸಬಹುದು. ಇದಕ್ಕೆ ನೀವು ಮರುಬಳಕೆ ಮಾಡಬಹುದಾದ ಉತ್ಪನ್ನಗಳನ್ನು ಬಳಸಬಹುದು.

ವೈಯಕ್ತಿಕ ಉಡುಗೊರೆ ತಯಾರಿಕೆ:

ಈಗೀಗ ಸಣ್ಣ ಸಣ್ಣ ಕಾರ್ಯಕ್ರಮಗಳಿಗೆ ಅಂದರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದರೆ, ಕ್ರೀಡಾಕೂಟದಲ್ಲಿ ಸ್ಥಾನ ಗಳಿಸಿದರೆ, ವ್ಯಾಪಾರದಲ್ಲಿ ಲಾಭವಾದರೆ ಹೀಗೆ ಸಣ್ಣ ಸಣ್ಣ ಘಟನೆಗಳನ್ನು ಸಂಭ್ರಮಿಸಲಾಗುತ್ತದೆ. ಈ ವೇಳೆ ಸಾಧಕರಿಗೆ ಉಡುಗೊರೆ ನೀಡಿ ಶುಭಾಷಯ ತಿಳಿಸಲಾಗುತ್ತದೆ. ಹಾಗಾಗಿ ಇದನ್ನು ಬಳಸಿಕೊಂಡು ನೀವು ಸಣ್ಣ ಪ್ರಮಾಣದ ವ್ಯಾಪಾರ ಶುರು ಮಾಡಬಹುದು. ಮಗ್ಗಳ ಮೇಲೆ ಶುಭಾಷಯ ಬರೆಯುವುದು, ಗೃಹಾಲಂಕಾರ ವಸ್ತುಗಳನ್ನು ತಯಾರಿಸುವುದು, ವೈಯಕ್ತಿಕ ವಸ್ತುಗಳೊಂದಿಗೆ ವ್ಯಾಪಾರ ಪ್ರಾರಂಭಿಸಬಹುದು.

ಮೇಣದ ಬತ್ತಿ ತಯಾರಿಕೆ:

ಮೇಣದ ಬತ್ತಿ ತಯಾರಿಕೆಯು ಇದೀಗ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿರುವ ಉದ್ಯಮವಾಗಿದೆ. ವ್ಯಾಪಾರಗಳು ಪಿಲ್ಲರ್ ಕ್ಯಾಂಡಲ್ಗಳು, ವೋಟಿವ್ ಕ್ಯಾಂಡಲ್ಗಳು, ಮತ್ತು ಪರಿಮಳಯುಕ್ತ ಮೇಣದ ಬತ್ತಿಗಳನ್ನು ತಯಾರಿಸುತ್ತಾರೆ.

ಮೇಣದ ಬತ್ತಿ ತಯಾರಿಸುವಾಗ ಮೇಣ ವಿಕ್ಸ್ ಹಾಗೂ ಸಾರಭೂತ ತೈಲಗಳನ್ನು ಪಡೆಯಬೇಕಾಗತ್ತದೆ.ಈ ಕಚ್ಚಾ ವಸ್ತುಗಳ ಜೊತೆಗೆ ಥರ್ಮಾ ಮೀಟರ್, ಜಾಡಿಗಳು ಮತ್ತು ಡಬಲ್ ಬಾಯ್ಲರ್ಗಳಂತಹ ಉತ್ಪನ್ನಗಳು ಅವಶ್ಯಕ. ಈ ವಸ್ತುಗಳನ್ನು ಬಳಿಸಿಕೊಂಡು ನೀವು ಉದ್ಯಮ ಪ್ರಾರಂಭಿಸುವುದರಿಂದ ಕನಿಷ್ಟ ಆರು ತಿಂಗಳಲ್ಲಿ ಲಾಭದ ಹಂತಕ್ಕೆ ಬಂದು ತಲುಪುತ್ತೀರಿ. ವಿಚಾರ ಸಣ್ಣದಾದರೂ ನೀವು ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ದೊಡ್ಡ ಪ್ರಮಾಣದ ಲಾಭ ಗಳಿಸಬಹುದು.

Comments are closed.