Second hand bike market: ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಬೇಕೆ? ಅತ್ಯಂತ ಕಡಿಮೆ ಬೆಲೆಗೆ, ಅದೂ ಉತ್ತಮ ಕಂಡೀಶನ್ ಬೈಕ್! ಎಲ್ಲಿ ಸಿಗುತ್ತೆ ಗೊತ್ತಾ?

Second hand bike market: ಈಗ ಸಾಮಾನ್ಯವಾಗಿ ಎಲ್ಲರೂ ವಾಹನ ಖರೀದಿಸಲು ಇಷ್ಟಪಡುತ್ತಾರೆ. ಅದರಲ್ಲೂ ಯುವಕರಿಗೆ ಬೈಕ್ ಎಂದರೆ ಎಲ್ಲಿಲ್ಲದ ಕ್ರೇಜ್. ಹೊಸ ಹೊಸ ಬೈಕ್ಗಳನ್ನು ಚಾಲನೆ ಮಾಡಲು ಇಷ್ಟಪಡುತ್ತಾರೆ. ಇನ್ನು ಕೆಲವರು ಕಚೇರಿಗಳಿಗೆ ತೆರಳುವ ಸಲುವಾಗಿ ಬೈಕ್ ಖರೀದಿಸುತ್ತಾರೆ. ಹೀಗೆ ಒಂದಲ್ಲ ಒಂದು ಕಾರಣಕ್ಕಾಗಿ ಪ್ರತಿಯೊಬ್ಬರು ಬೈಕ್ ಖರೀದಿಸುತ್ತಾರೆ. ಆದರೆ ಎಲ್ಲರ ಬಳಿಯು ಹೊಸ ಬೈಕ್ ಖರೀದಿಸುವ ಆರ್ಥಿಕ ಶಕ್ತಿ ಇರುವುದಿಲ್ಲ. ಅಂತಹವರು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗೆ ಮುಂದಾಗುತ್ತಾರೆ. ಕಡಿಮೆ ಬಜೆಟ್ನಲ್ಲಿಯೂ ಬರುತ್ತದೆ. ಹಾಗಾಗಿಯೇ ಈಗಿಗ ಹೆಚ್ಚಿನ ಜನ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುತ್ತಿದ್ದಾರೆ. ಹಾಗಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ಗಳ ಮಾರಾಟ, ಶೋರೂಂಗಳು ಆರಂಭಗೊಂಡಿದೆ.

ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಈಗ ಸೆಕೆಂಡ್ ಹ್ಯಾಂಡ್ ಬೈಕ್ಗಳ ಮಾರಾಟ ಜೋರಾಗಿದೆ. ಅದಕ್ಕಾಗಿಯೇ ಶೋರೂಂಗಳು ಆರಂಭಗೊಂಡಿವೆ. ಗುಜರಾತಿನ ವಡೋದರಾ ನಗರದಲ್ಲಿ ದೇಶದ ಅತಿದೊಡ್ಡ ಸೆಕೆಂಡ್ ಹ್ಯಾಂಡ್ ಬೈಕ್ಗಳ ಶೋ ರೂಂ ಇದೆ. ಇಲ್ಲಿ ಎಲ್ಲ ತರಹದ ಬೈಕ್ಗಳು ನಿಮಗೆ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತದೆ. ಈ ಮಾರುಕಟ್ಟೆಯಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ಎಲ್ಲವೂ ಸಿಗುತ್ತದೆ. ಈ ಮಾರುಕಟ್ಟೆಯಲ್ಲಿ 3೦೦ ಡೀಲರ್ಸ್ಗಳು ಇದ್ದಾರೆ.

ಗುಜರಾತಿನ ಇತರ ದೊಡ್ಡ ದೊಡ್ಡ ನಗರಗಳಿಗೆ ಹೋಲಿಸಿದರೆ ವಡೋದರಾದಲ್ಲಿ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇಲ್ಲಿ ಕಡಿಮೆ ಕಿಲೋಮೀಟರ್ ಓಡಿರುವ ಹಾಗೂ ಉತ್ತಮ ಕಂಡಿಶನ್ನಲ್ಲಿರುವ ವಾಹನಗಳು ಸಿಗಲಿವೆ. ಹಾಗಾಗಿ ಹೆಚ್ಚಿನ ಜನರು ಈ ಮಾರುಕಟ್ಟೆಗೆ ಆಗಮಿಸುತ್ತಾರೆ.

ವಡೋದರಾದಲ್ಲಿ ಪ್ರತಿಯೊಬ್ಬ ಡೀಲರ್ ತಿಂಗಳಿಗೆ ಸರಾಸರಿ 35-4೦ ವಾಹನಗಳನ್ನು ಮಾರಾಟ ಮಾಡುತ್ತಾನೆ. ಈ ಮೂಲಕ ಅವರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವಡೋದರಾಕ್ಕೆ ಸಮೀಪ ಇರುವ ಗ್ರಾಮಗಳಾದ ಚೋಟೌಡೇಪುರ,ಪಂಚಮಹಲ್, ದಾಹೋದ್, ಬೋಡೆಲಿ, ಕರಜನ್ ಸೇರಿದಂತೆ ವಿವಿಧ ಗ್ರಾಮಗಳಿಂದ ಜನರು ಆಗಮಿಸಿ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುತ್ತಾರೆ. ಡೀಲರ್ಗಳು ಅಷ್ಟೇ ಪ್ರೀತಿಯಿಂದ ಜನರಿಗೆ ಸೇವೆ ನೀಡುತ್ತಿದ್ದಾರೆ. ಹಾಗಾಗಿಯೇ ಈ ಮಾರುಕಟ್ಟೆಯು ದೇಶದಲ್ಲಿಯೇ ಜನಪ್ರಿಯವಾಗಿದೆ.

ವಡೋದರಾದಂತೆ ಆಂಧ್ರಪ್ರದೇಶದ ಹೈದರಾಬಾದ್ನಲ್ಲಿಯೂ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರುಕಟ್ಟೆಯಿದೆ. ಇಲ್ಲಿ ನಿಮಗೆ ಕಡಿಮೆ ಕಿಲೋಮೀಟರ್ ಓಡಿರುವ ವಾಹಗಳು ಹೆಚ್ಚಾಗಿ ದೊರೆಯುತ್ತವೆ. ಇಲ್ಲಿ 15,೦೦೦ ರೂ.ನಿಂದ ಹಿಡಿದು 3 ಲಕ್ಷ ರೂ. ವರೆಗಿನ ವಾಹನಗಳು ಇವೆ.

Comments are closed.