BiggBossKannada10: ಬಿಗ್ ಬಾಸ್ ಮನೆಯಲ್ಲಿರುವ ಈ ಸ್ಪರ್ಧಿಗಳ ವಯಸ್ಸು ಎಷ್ಟು ಗೊತ್ತಾ? ನೋಡಿದ್ರೆ ಹಾಗೆ ಅನ್ನಿಸೋದೇ ಇಲ್ಲ ಬಿಡಿ!

BiggBossKannada10: ರಿಯಾಲಿಟಿ ಶೋ(Reality show) ಗಳಲ್ಲೇ ಅತಿದೊಡ್ಡ ರಿಯಾಲಿಟಿ ಶೋ ಅಂದರೆ ಅದು ಬಿಗ್ ಬಾಸ್ ರಿಯಾಲಿಟಿ ಶೋ. ಈ ಬಾರಿ ಕನ್ನಡದಲ್ಲಿ 1೦ನೇ ಸೀಸನ್ (Bigg Boss season 10) ಆರಂಭಗೊಂಡು ಅದಾಗಲೇ ಎರಡು ವಾರಗಳು ಗತಿಸಿವೆ. ಎರಡನೇ ವಾರಕ್ಕೆ ಬಿಗ್ ಬಾಸ್ ಮನೆ ಕಾವೇರಿದ್ದು, ಸ್ಪರ್ಧಿಗಳ (Contestant) ನಡುವೆ ಜಿದ್ದಾಜಿದ್ದಿನ ಪೈಪೋಟಿ ಆರಂಭಗೊಂಡಿದೆ. ಈ ಬಿಗ್ ಬಾಸ್ ಮನೆಗೆ ಬಂದಿರುವ ಸ್ಪರ್ಧಿಗಳ ವಯಸ್ಸಿನ ವಿಚಾರ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಕೆಲವೊಬ್ಬರ ವಯಸ್ಸು ಕೇಳಿದರೆ ನೀವು ಹೌದಾ? ಇಷ್ಟೇನಾ ಎಂದು ಹೇಳುವುದು ಪಕ್ಕಾ !

ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಸ್ಪರ್ಧಿಗಳಲ್ಲಿ ಭಾಗ್ಯಶ್ರೀ ರಾವ್ (Bhagyashree) ಅವರು ಕೂಡ ಒಬ್ಬರು. ಇವರು ಎರಡನೇ ವಾರದಲ್ಲಿ ಮೊದಲ ವಾರಕ್ಕಿಂತ ಹೆಚ್ಚು ಉತ್ತಮವಾಗಿ ಆಡಿದ್ದಾರೆ. ಎಲ್ಲ ಆಟಗಳಲ್ಲೂ ಭಾಗವಹಿಸುವ ಆಸಕ್ತಿ ತೋರಿಸಿದ್ದಾರೆ. ಇವರಿಗೆ ವಿವಾಹವಾಗಿದ್ದು, ಆಯುಷ್ಮಾನ್ ಎನ್ನುವ ಮಗನಿದ್ದಾನೆ. ಇವರ ವಯಸ್ಸು 32 ವರ್ಷ.

ಇನ್ನು ಬಿಗ್ ಬಾಸ್ ಮನೆಗೆ ಕಾಲಿಟ್ಟುರುವವರಲ್ಲಿ ಗೌರೀಶ ಅಕ್ಕಿ ಕೂಡ ಒಬ್ಬರು. ಇವರು ಹಿರಿಯ ಪತ್ರಕರ್ತರಾಗಿದ್ದಾರೆ. ಇವರು ಹಲವಾರು ಪತ್ರಿಕೆಗಳು, ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಇವರು ಮನೆಗೆ ಆಗಮಿಸಿದಾಗಿನಿಂದಲೂ ಒಂದೇ ರೀತಿಯಾಗಿದ್ದು, ಎಲ್ಲಿಯೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿಲ್ಲ. ಇದೇ ಇವರಿಗೆ ಮುಳುವಾಗುವ ಸಾಧ್ಯತೆಗಳಿವೆ. ಇವರ ವಯಸ್ಸು 49 ವರ್ಷ. ಇವರು ಬಿಗ್ ಬಾಸ್ ಮನೆಗೆ 1೦ನೇ ಸ್ಪರ್ಧಿಯಾಗಿ ಕಾಲಿಟ್ಟರು. ಎಲ್ಲರನ್ನು ರಂಜಿಸುತ್ತೇನೆ. ಎಲ್ಲರ ಮನಸ್ಸು ಗೆಲ್ಲುತ್ತೇನೆ ಎಂದಿದ್ದರು. ಅದನ್ನು ಮಾಡುತ್ತಾರಾ ಇಲ್ಲವಾ ಎಂದು ಕಾದುನೋಡಬೇಕಾಗಿದೆ.

ಬಿಗ್ ಬಾಸ್ ಮನೆಗೆ ಕಿರುತೆರೆಯಲ್ಲಿ ವಿಲನ್ ಪಾತ್ರಗಳಿಂದಲೇ ಪ್ರಸಿದ್ಧವಾಗಿರುವ ತನಿಶಾ ಅವರು ಕೂಡ ಬಂದಿದ್ದಾರೆ. ಇವರು ಬಂದ ದಿನದಿಂದಲೂ ಬಹಳ ಎಕ್ಟಿವ್ ಆಗಿದ್ದು, ಮೊದಲ ವಾರದಲ್ಲೇ ಉತ್ತಮ ಸ್ಪರ್ಧಿ ಎನ್ನುವ ಅವಾರ್ಡ್ ಪಡೆದುಕೊಂಡಿದ್ದಾರೆ. ಇವರು ಕಿರುತೆರೆ, ಬೆಳ್ಳಿತೆರೆ ಜೊತೆಗೆ ಬ್ಯುಸಿನೆಸ್ ಕೂಡ ನಡೆಸುತ್ತಿದ್ದಾರೆ. ಇವರ ವಯಸ್ಸು 33 ವರ್ಷ.

ಬಿಗ್ ಬಾಸ್ ಸ್ಪರ್ಧಿಗಳಲ್ಲಿಸಿರಿ ಕೂಡ ಒಬ್ಬರು. ಇವರು ಕಿರುತೆರೆಯಲ್ಲಿ ಕಳೆದ 2೦ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಲವಾರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ಇದೀಗ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ತಕ್ಕ ಮಟ್ಟಿಗೆ ಸೌಂಡ್ ಮಾಡುತ್ತಿದ್ದಾರೆ. ಇವರ ವಯಸ್ಸು 39 ವರ್ಷ. ಇವರಿಗೆ ಇನ್ನು ವಿವಾಹವಾಗಿಲ್ಲ. ಇನ್ನು ಮೇಲೆ ವಿವಾಹ ಆಗಬೇಕು ಎಂದು ನಿರ್ಧಾರ ಮಾಡಿದ್ದಾರೆ.

ಬಿಗ್ ಬಾಸ್ ಮನೆಯ ಟಫ್ ಸ್ಪರ್ಧಿಗಳಲ್ಲಿ ಕಾರ್ತಿಕ್ ಕೂಡ ಒಬ್ಬರು. ಇವರು ಅಕ್ಕ, ಅಂತರಪಟ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದು, ಎಲ್ಲರಿಗೂ ಪೈಪೋಟಿ ನೀಡುತ್ತಿದ್ದಾರೆ. ಇವರ ಆಟದ ವೈಖರಿ ನೋಡಿದರೆ ಫೈನಲ್ ವರೆಗೆ ಬಂದರೂ ಅಚ್ಚರಿಯಿಲ್ಲ. ಇವರ ವಯಸ್ಸು 36 ವರ್ಷ ಎನ್ನಲಾಗಿದೆ.

Comments are closed.