Vastu Tips: ಈ ವಸ್ತು ಮನೆಲ್ಲಿದ್ರೆ ಸಾಕು, ವಾಸ್ತು ದೋಷ ನಿವಾರಣೆ ಆಗುತ್ತೆ; ಮನೆಯಲ್ಲಿ ದುಡ್ಡೂ ಇರತ್ತೆ, ಇವತ್ತೇ ಈ ವಸ್ತು ತನ್ನಿ!

Vastu Tips: ಪ್ರತಿಯೊಬ್ಬರು ಕೂಡ ಮನೆ ಕಟ್ಟುವ ಸಂದರ್ಭದಲ್ಲಿ ವಾಸ್ತು ಪ್ರಕಾರವಾಗಿ ಕಟ್ಟಿರುತ್ತಾರೆ ಹಾಗೂ ಮನೆ ಕಟ್ಟಿದ ನಂತರ ಕೂಡ ಕೆಲವೊಂದು ವಾಸ್ತುದೋಷಗಳು ಪ್ರಾರಂಭವಾಗುತ್ತವೆ ಆ ಸಂದರ್ಭದಲ್ಲಿ ಕೆಲವೊಂದು ಫೋಟೋಗಳನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದಾಗಿ ಕೆಲವೊಂದು ನಿರ್ದಿಷ್ಟ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನೀವು ಕೂಡ ನಿಯಮವನ್ನು ಫಾಲೋ ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಬನ್ನಿ ಯಾವ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರ ಮೂಲಕ ಯಾವೆಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಎಂಬುದನ್ನು ತಿಳಿಯೋಣ.

ಈ ಫೋಟೋಗಳನ್ನು ಇಟ್ಟುಕೊಳ್ಳುವುದರ ಮೂಲಕ ವಾಸ್ತು ದೋಷವನ್ನು ನಿವಾರಿಸಿಕೊಳ್ಳಿ!

ಬುದ್ಧನ ಫೋಟೋ: ಬುದ್ಧನ ಫೋಟೋವನ್ನು ಮನೆಯಲ್ಲಿ ತೂಗು ಹಾಕುವುದರಿಂದಾಗಿ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸುತ್ತದೆ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ಇನ್ನು ಇದನ್ನು ನಿಮ್ಮ ಮನೆಯಲ್ಲಿ ಊರ್ವ ಹಾಗೂ ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಎಂಬುದಾಗಿ ತಿಳಿಸಲಾಗುತ್ತದೆ.

ಕಮಲದ ಫೋಟೋ: ಕಮಲದ ಮೇಲೆ ಲಕ್ಷ್ಮಿ ಹಾಗೂ ಸರಸ್ವತಿಯರು ವಿರಾಜಮಾನ ರಾಗಿರುತ್ತಾರೆ ಎಂಬುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಸಾಕಷ್ಟು ದೇವರ ಕೈಗಳಲ್ಲಿ ಕೂಡ ನೀವು ಕಮಲದ ಹೂವನ್ನು ನೋಡಬಹುದಾಗಿದೆ. ನಿಮ್ಮ ಜೀವನದಲ್ಲಿ ಪಾವಿತ್ರತೆ ಹಾಗೂ ಸಮೃದ್ಧಿ ಅನ್ನುವುದು ಇನ್ನಷ್ಟು ವೃದ್ಧಿ ಆಗಬೇಕು ಎಂದರೆ ಕಮಲದ ಹೂವಿನ ಫೋಟೋವನ್ನು ನಿಮ್ಮ ಮನೆಯಲ್ಲಿ ಇಡಬೇಕು. ಈಶಾನ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು.

ಏಳು ಓಡುವ ಕುದುರೆಗಳು: ಮನೆಯಲ್ಲಿ ನೀವು ಏಳು ಓಡುವ ಕುದುರೆಗಳ ಫೋಟೋವನ್ನು ತೂಗು ಹಾಕುವುದು ಕೂಡ ನಿಮಗೆ ನಿಮ್ಮ ಉದ್ಯೋಗ ಹಾಗೂ ಯಶಸ್ಸಿನ ವಿಚಾರದಲ್ಲಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ಸಹಾಯಮಾಡುತ್ತದೆ. ಇದನ್ನು ನೀವು ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ತೂಗು ಹಾಕಬೇಕಾಗಿರುತ್ತದೆ.

ನವಿಲಿನ ಫೋಟೋ: ನವಿಲಿನ ಫೋಟೋವನ್ನು ನೀವು ನಿಮ್ಮ ಮನೆಯ ದಕ್ಷಿಣಾ ದಿಕ್ಕಿನಲ್ಲಿ ತೂಗು ಹಾಕಬೇಕಾಗಿರುತ್ತದೆ ಎಂಬುದು ವಾಸ್ತು ಶಾಸ್ತ್ರದ ಉಲ್ಲೇಖವಾಗಿದೆ. ಇದರಿಂದಾಗಿ ಮನೆಯಲ್ಲಿ ಹಣದ ಹರಿವು ಹೆಚ್ಚಾಗಲಿದೆ ಹಾಗೂ ನಿಮ್ಮ ಅದೃಷ್ಟ ಕೂಡ ಇನ್ನಷ್ಟು ಹೆಚ್ಚಾಗಿ ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ನಿಮಗೆ ಗೆಲುವು ದೊರಕಲಿದೆ.

ವಾಟರ್ ಫಾಲ್ ಫೋಟೋ: ಜಲಪಾತದ ಫೋಟೋವನ್ನು ನೀವು ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ತೂಗು ಹಾಕಬೇಕಾಗಿರುತ್ತದೆ. ಇದರಿಂದಾಗಿ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಸಾಧಿಸುತ್ತೀರಿ ಹಾಗೂ ಹಣದ ವಿಚಾರದಲ್ಲಿ ಕೂಡ ಯಾವುದೇ ರೀತಿ ಆರ್ಥಿಕ ಸಮಸ್ಯೆಯನ್ನು ನೀವು ಹೊಂದುವುದಿಲ್ಲ.

ಪರ್ವತದ ಫೋಟೋ: ಪರ್ವತದ ಫೋಟೋವನ್ನು ನೀವು ಆಗ್ನೇಯ ದಿಕ್ಕಿನಲ್ಲಿ ಇಡಬೇಕಾಗಿರುತ್ತದೆ. ಜೀವನದಲ್ಲಿ ಸ್ಥಿರತೆ ಹಾಗೂ ಕಷ್ಟದ ಸಂದರ್ಭದಲ್ಲಿ ಬೇರೆಯವರಿಂದ ಬೆಂಬಲವನ್ನ ಪಡೆದುಕೊಳ್ಳಲು ನೀವು ಈ ಫೋಟೋವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.

Comments are closed.