Meghana Raj: ಮೇಘನಾ ರಾಜ್ ರವರ 2ನೇ ಮದುವೆ ಬಗ್ಗೆ ತಾಯಿ ಪ್ರಮಾಣ; ಜೋಷಾಯಿ ಹೇಳಿದ್ದೇನು ಗೊತ್ತಾ?

Meghana Raj: ನಟಿ ಮೇಘನಾ ರಾಜ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಮಲಯಾಳಂ ಹಾಗೂ ಬೇರೆ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ. ಮೇಘನಾ ರಾಜ್ ರವರು ಚಿಕ್ಕವಯಸ್ಸಿನಿಂದಲೇ ಸಿನಿಮಾ ರಂಗಕ್ಕೆ ಅತ್ಯಂತ ಹತ್ತಿರದವರಾಗಿದ್ದಾರೆ ಯಾಕೆಂದರೆ ಅವರ ತಂದೆ ಹಾಗು ತಾಯಿ ಆಗಿರುವಂತಹ ಸುಂದರ ರಾಜ್ ಹಾಗೂ ಪ್ರಮೀಳ ಜೋಷಾಯಿ ಇಬ್ರು ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ನಟನೆ ಮಾಡಿಕೊಂಡು ಬರ್ತಾ ಇದ್ದಾರೆ. ಮೇಘನ ರಾಜ್ ಅವರಿಗೆ ನಟನೆಯನ್ನು ಹೊಸ ವಿಚಾರ ಆಗಿರಲಿಲ್ಲ ಹಾಗೂ ಚಿತ್ರರಂಗವನ್ನು ಕೂಡ ಅತ್ಯಂತ ಹತ್ತಿರದಿಂದ ನೋಡಿದ್ರು.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡಿದ ನಂತರ ಚಿರು ಸರ್ಜಾ ಅವರನ್ನು ಮೇಘನಾ ರಾಜ್ ರವರು ಪ್ರೀತಿಸಿ ಎರಡು ಧರ್ಮಗಳ ಅನುಸಾರವಾಗಿ ಎಲ್ಲರೂ ಮೆಚ್ಚಿಕೊಳ್ಳುವ ರೀತಿಯಲ್ಲಿ ಮದುವೆ ಆಗ್ತಾರೆ. ಪ್ರತಿಯೊಬ್ಬರೂ ಕೂಡ ಚಿರು ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಗಳ ಜೋಡಿಯನ್ನು ಮೆಚ್ಚಿದ್ದರು.

ಇನ್ನು ಚಿರು ಸರ್ಜಾ ಮೇಘನ ರಾಜ್ ಅವರ ಬಿಟ್ಟು ಇಹಲೋಕವನ್ನು ತ್ಯಜಿಸಿದ್ದ ಸಂದರ್ಭದಲ್ಲಿ ಜೂನಿಯರ್ ಚಿರು ಸರ್ಜಾ ರಾಯನ್ ಜನಿಸುತ್ತಾರೆ ಹಾಗೂ ಅವರಿಗೆ ಈಗ ಮೂರುವರೆ ವರ್ಷ. ಚಿತ್ರರಂಗದಿಂದ ದೂರವಿದ್ದ ಮೇಘನ ರಾಜ್ ಈಗ ಒಂದೊಂದೇ ಕಿರುತೆರೆಯ ಕಾರ್ಯಕ್ರಮಗಳು ಹಾಗೂ ಸಿನಿಮಾದಲ್ಲಿ ನಟಿಸುವ ಮೂಲಕ ಮತ್ತೆ ತಮ್ಮ ನಾರ್ಮಲ್ ಜೀವನಕ್ಕೆ ವಾಪಸ್ ಆಗುತ್ತಿದ್ದಾರೆ. ಈಗ ಪ್ರತಿಯೊಬ್ಬರೂ ಕೇಳುತ್ತಿರುವಂತಹ ಪ್ರಶ್ನೆ ಮೇಘನ ರಾಜ್ ಮತ್ತೆ ಮದುವೆ ಆಗ್ತಾರಾ ಅನ್ನೋದಾಗಿ. ಈ ಬಗ್ಗೆ ಸಂಬಂಧಿಕರಿಂದಲೂ ಕೂಡ ಮಾತು ಕೇಳಿ ಬರ್ತಾ ಇದೆ ಅನ್ನೋದಾಗಿ ಅವರ ತಾಯಿ ಆಗಿರುವಂತಹ ಪ್ರವೀಣ ಜೋಶಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡುತ್ತಾ ನನಗೂ ಕೂಡ ನನ್ನ ಮಗಳು ಮತ್ತೆ ಜೀವನದಲ್ಲಿ ಸೆಟಲ್ ಇಗಬೇಕು ಒಂದೊಳ್ಳೆ ಜೀವನವನ್ನು ನಡೆಸಬೇಕು ಅನ್ನೋದಾಗಿ ಆಸೆ ಇದೆ ಆದರೆ ನನಗೆ ಆಸೆ ಇದ್ದ ಮಾತ್ರಕ್ಕೆ ಅವಳಿಗೂ ಕೂಡ ಅದೇ ಇರಬೇಕು ಅಂತ ಇಲ್ಲ ಅದನ್ನ ಅವಳಿಗೆ ಮಾಡು ಅಂತ ಹೇಳೋದು ಬಲವಂತ ಆಗುತ್ತೆ ಅನ್ನೋದಾಗಿ ಹೇಳಿದ್ದಾರೆ. ಸಾಕಷ್ಟು ಬಾರಿ ಸ್ನೇಹಿತರು ಕೂಡ ಈ ವಿಚಾರವನ್ನು ಮೇಘನ ರಾಜ್ ರವರಿಗೆ ಹೇಳುವುದಕ್ಕೆ ಹೋಗಿ ಆ ಮಾತನ್ನು ಅವಳ ಎದುರುಗಡೆ ಆಡೋ ಹಾಗಿಲ್ಲ ಎನ್ನುವುದಾಗಿ ಸ್ನೇಹಿತರು ಕೂಡ ಹೇಳಿದ್ದಾಗಿದೆ. ಎಲ್ಲದಕ್ಕೂ ಒಂದು ಋಣ ಅಂತ ಇದೆ ಆ ದಿನ ಬಂದಾಗ ಮಾತ್ರ ಎಲ್ಲಾ ನಡೆಯಬೇಕಾಗಿರುವುದು ನಡೆಯುತ್ತೆ. ಎಲ್ಲ ದೇವರಿಗೆ ಬಿಟ್ಟಿದ್ದು ಎನ್ನುವುದಾಗಿ ಪ್ರಮೀಳಾ ಜೋಷಾಯಿ ಮೇಘನಾ ರಾಜ್ ರವರ 2ನೇ ಮದುವೆ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ.

Comments are closed.