Gold Rate: ಚಿನ್ನದ ಬೆಲೆಯಲ್ಲಿ ಮಾತ್ರ ಅಲ್ಲ ಬೆಳ್ಳಿ ಬೆಲೆಯಲ್ಲಿ ಕೂಡ ಕಂಡು ಬಂದಿದೆ ಬಾರಿ ಬದಲಾವಣೆ; ಚಿನ್ನ ಖರೀದಿಗೂ ಮುನ್ನ ಒಮ್ಮೆ ಇಲ್ಲಿ ನೋಡಿ!

Gold Rate: ಚಿನ್ನ ಹಾಗೂ ಬೆಳ್ಳಿ ಎನ್ನುವುದು ಅಲಂಕಾರಿಕ ವಸ್ತುಗಳಿಗಿಂತ ಹೆಚ್ಚಾಗಿ ಇನ್ನು ಸಾಕಷ್ಟು ಮೌಲ್ಯವನ್ನು ಹೊಂದಿವೆ ಎಂಬುದನ್ನು ಪ್ರತಿಯೊಬ್ಬರು ಕೂಡ ತಿಳಿದುಕೊಳ್ಳಬೇಕಾಗಿರುತ್ತದೆ. ಇನ್ನು ಕಳೆದ ಕೆಲವು ತಿಂಗಳುಗಳಿಂದ ಚಿನ್ನ ಹಾಗೂ ಬೆಳ್ಳಿಯ ಬೆಲೆ ಸಮಾನಾಂತರವಾಗಿ ಸಾಕಷ್ಟು ಏರುಪೇರುಗಳನ್ನು ಕಾಣುತ್ತಿರುವುದು ಮಾರುಕಟ್ಟೆಯಲ್ಲಿ ಕಂಡುಬರುತ್ತದೆ. ಇತ್ತೀಚಿನ ಕೆಲವು ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಗಣನೀಯವಾಗಿ ಇಳಿಕೆ ಕಾಣುತ್ತಿರುವುದು ಕೂಡ ಎಲ್ಲರ ಮುಖದಲ್ಲಿ ಆಶ್ಚರ್ಯ ಮೂಡುವಂತೆ ಮಾಡಿದೆ.

ಉದಾಹರಣೆಗೆ ನೋಡುವುದಾದರೆ 100 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನ ಭಾನುವಾರದಂದು 7.25 ಲಕ್ಷ ರೂಪಾಯಿಗಳಾಗಿತ್ತು ಆದರೆ ಸೋಮವಾರದ ದಿನದಂದು ಇದೇ ಚಿನ್ನ 7.21 ಲಕ್ಷ ರೂಪಾಯಿಗಳಿಗೆ ಇಳಿಕೆ ಕಂಡಿರುವುದು ಕೂಡ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಖರೀದಿ ಮಾಡುವಂತಹ ದೇಶಗಳಲ್ಲಿ ಭಾರತ ಕೂಡ ಪ್ರಮುಖ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ವಿಶೇಷವಾಗಿ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಭಾರತ ದೇಶ ಬೇರೆ ದೇಶಗಳಿಗೆ ಟಕ್ಕರ್ ಪೈಪೋಟಿ ನೀಡುವಂತಹ ದೇಶವಾಗಿದೆ. ನಮ್ಮಲ್ಲಿ ಹಬ್ಬ ಹರಿದಿನಗಳು ಎಂದು ಸಾಕು ಚಿನ್ನವನ್ನು ಖರೀದಿ ಮಾಡುವುದು ಅತ್ಯಂತ ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಕೇವಲ ಚಿನ್ನದ ಬೆಲೆಯಲ್ಲಿ ಮಾತ್ರವಲ್ಲದೆ ಬೆಳ್ಳಿಯ ಬೆಲೆಯಲ್ಲಿ ಕೂಡ ಇಳಿಕೆ ಕಂಡು ಬಂದಿದೆ ಎಂಬಂತಹ ಮಾಹಿತಿ ತಿಳಿದು ಬಂದಿದೆ.

ಉದಾಹರಣೆಗೆ ನೋಡುವುದಾದರೆ ಶನಿವಾರ ಒಂದೇ ದಿನ ಬರೋಬ್ಬರಿ 2,000ಗಳ ಬೆಲೆ ಇಳಿಕೆ ಕಂಡು ಬಂದಿದೆ. ಭಾನುವಾರ 93500 ಇದ್ದ ಬೆಳ್ಳಿಯ ಬೆಲೆ ಸೋಮವಾರ ಒಂದು ಕೆಜಿ ಬೆಳ್ಳಿಯ ಬೆಲೆ 92,800 ರೂಪಾಯಿ ಗಳಿಗೆ ಇಳಿದಿದೆ. ಇದೇ ಸಮಯ ಸೋಮವಾರದಂದು ಬೆಳ್ಳಿಯ ಒಂದು ಕೆಜಿ ಬೆಲೆ ಬೆಂಗಳೂರಿನಲ್ಲಿ 92,900 ರೂಪಾಯಿ ಆಗಿತ್ತು. ಮಾರುಕಟ್ಟೆಯಲ್ಲಿ ಕಾಣುತ್ತಿರುವಂತಹ ಟ್ರೆಂಡ್ ನೋಡಿದ್ರೆ, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಬೆಲೆ ಇಳಿಕೆಯನ್ನು ನಾವು ಕಾಣಬಹುದಾಗಿದೆ ಎಂಬುದಾಗಿ ಪರಿಣಿತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇಂದಿನ ಚಿನ್ನ ಹಾಗೂ ಬೆಳ್ಳಿಯ ದರ!

ಇವತ್ತಿನ ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನದ ಬೆಲೆ 74,615 ರೂಪಾಯಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಇವತ್ತಿನ ಬೆಳ್ಳಿಯ ಒಂದು ಕೆಜಿ ಮೌಲ್ಯದ ಬೆಲೆ 92,700 ರೂಪಾಯಿ ಆಗಿದೆ ಎನ್ನುವಂತಹ ಮಾಹಿತಿ ಕೂಡ ಮಾರುಕಟ್ಟೆಯ ಮೂಲಗಳಿಂದ ತಿಳಿದು ಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ನಡೆಯುತ್ತಿರುವಂತಹ ಏರಿಳಿತಗಳ ಮಾಪನವನ್ನು ಸರಿಯಾದ ರೀತಿಯಲ್ಲಿ ಗಮನಿಸುವುದಾದರೆ ಇದು ಇನ್ನಷ್ಟು ಇಳಿಕೆಯಾಗುವಂತಹ ಸಾಧ್ಯತೆ ಇದೆ ಎಂಬುದಾಗಿ ಹೇಳಬಹುದಾಗಿದೆ.

Comments are closed.