Kannada Serials: ಊಹೆಯೂ ಮಾಡದ ಟ್ವಿಸ್ಟ್; ಈ ವಾರ ಟಿ ಆರ್ ಪಿ ಫಸ್ಟ್ ಪ್ಲೇಸ್ ಯಾವ ಧಾರಾವಾಹಿಗೆ ಗೊತ್ತಾ?

Kannada Serials: ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಕನ್ನಡ ಪ್ರೇಕ್ಷಕರು ಹೆಚ್ಚಾಗಿ ತಮ್ಮನ್ನು ತಾವು ಪ್ರೇಕ್ಷಕರಾಗಿ ಅರ್ಪಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಸಿನಿಮಾಗಿಂತ ಹೆಚ್ಚಾಗಿ ಸಿನಿಮಾದ ಪ್ರೇಕ್ಷಕರೇ ದಾರವಾಹಿಯನ್ನು ನೋಡುವಂತಹ ಕ್ರಮವನ್ನು ಹೆಚ್ಚಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಅದೇ ಕಾರಣಕ್ಕಾಗಿ ಇತ್ತೀಚಿಗೆ ಧಾರವಾಹಿ ನೋಡುವಂತಹ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗಿರುವುದು ಟಿ ಆರ್ ಪಿ ಸಂಖ್ಯೆಯ ಮೂಲಕ ತಿಳಿದು ಬರುತ್ತಿದೆ. ಇನ್ನು ಬೇರೆ ಬೇರೆ ಚಾನಲ್ನಲ್ಲಿ ಇರುವಂತಹ ಧಾರವಾಹಿಗಳನ್ನ ಅವರ ಜನಪ್ರಿಯತೆಯನ್ನು ಟಿ ಆರ್ ಪಿ ಯ ಮೂಲಕ ಅಳೆಯಲಾಗುತ್ತದೆ. ಹಾಗಿದ್ರೆ ಬನ್ನಿ ಟಿಆರ್ಪಿ ವಿಚಾರದಲ್ಲಿ ಯಾರೆಲ್ಲಾ ಫಸ್ಟ್ ಬಂದಿದ್ದಾರೆ ಯಾರೆಲ್ಲ ಲಾಸ್ಟ್ ಬಂದಿದ್ದಾರೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

  • ಮೊದಲನೇ ಸ್ಥಾನದಲ್ಲಿ ಜೀ ಕನ್ನಡ ವಾಹಿನಿಯ ಪುಟ್ಟಗನ ಮಕ್ಕಳು ಧಾರವಾಹಿ ಕಾಣಿಸಿಕೊಳ್ಳುತ್ತದೆ. ಸಾಕಷ್ಟು ಸಮಯಗಳಿಂದಲೂ ಕೂಡ ಪುಟ್ಟಕ್ಕನ ಮಕ್ಕಳು ಧಾರವಾಹಿ ತನ್ನ ಮೊದಲನೇ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ ಎಂದು ಹೇಳಬಹುದಾಗಿದೆ. ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರಾರಂಭ ಆದ ದಿನದಿಂದಲೂ ಕೂಡ ಪ್ರತಿಯೊಬ್ಬ ಧಾರವಾಹಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗುತ್ತಿದೆ.
  • ಎರಡನೇ ಸ್ಥಾನವನ್ನು ಕೂಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಲಕ್ಷ್ಮಿ ನಿವಾಸ ಧಾರವಾಹಿ ಪಡೆದುಕೊಂಡಿದೆ. ಸೈಕೋ ಜಯಂತನ ಮುಖವಾಡವನ್ನು ನೋಡೋದಕ್ಕೆ ಪ್ರೇಕ್ಷಕರು ಕಾತರಾಗಿ ಕಾಯುತ್ತಿದ್ದು ಈ ಧಾರವಾಹಿಯ ಅತ್ಯಂತ ಪ್ರಮುಖ ಆಕರ್ಷಣೀಯ ಕೇಂದ್ರಬಿಂದು ಇದೆ ಎಂದು ಹೇಳಬಹುದಾಗಿದೆ. ಲಕ್ಷ್ಮಿ ನಿವಾಸ ಧಾರವಾಹಿಯನ್ನು ಕೂಡ ಜನರು ಸಾಕಷ್ಟು ಇಷ್ಟಪಡುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಟಿ ಆರ್ ಪಿ ಅಂಕಗಳನ್ನು ಕೂಡ ಪಡೆದುಕೊಂಡರೆ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.
  • ಇತ್ತೀಚಿಗೆ ಪ್ರಾರಂಭವಾಗಿದ್ದರೂ ಕೂಡ ಟಿ ಆರ್ ಪಿ ಅಂಕದ ಪಟ್ಟಿಯಲ್ಲಿ ಆರಂಭದಲ್ಲಿಯೇ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ ಜೀ ಕನ್ನಡ ವಾಹಿನಿಯ ಮತ್ತೊಂದು ಧಾರವಾಹಿ ಶ್ರಾವಣಿ ಸುಬ್ರಮಣ್ಯ. ಈ ಧಾರವಾಹಿಯಲ್ಲಿ ಮಗಳು ಅಪ್ಪನ ಗೌರವಿಸಿದರೂ ಕೂಡ ಆ ಪ್ರೀತಿ ಅಪ್ಪನಿಂದ ಸಿಕ್ತಾ ಇಲ್ಲ ಅನ್ನೋದೇ ಪ್ರೇಕ್ಷಕರು ಈ ಧಾರವಾಹಿಯನ್ನು ನೋಡೋ ಹಾಗೆ ಮಾಡ್ತಾ ಇರೋದು. ಕಳೆದ ಬಾರಿ ಕೂಡ ಮೂರನೇ ಸ್ಥಾನದಲ್ಲಿದ್ದ ಈ ಧಾರವಾಹಿ ಈ ಬಾರಿ ಕೂಡ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
  • ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಧಾರವಾಹಿ ಸೀತಾರಾಮ. ಸೀತ ಹಾಗೂ ರಾಮುವಿನ ನಿಶ್ಚಿತಾರ್ಥ ಸದ್ಯಕ್ಕೆ ಈಗಾಗಲೇ ಮುಗಿದಿದ್ದು ಇನ್ನು ಸಾಕಷ್ಟು ಟರ್ನ್ ಹಾಗೂ ಟ್ವಿಸ್ಟ್ ಗಳು ಈ ಧಾರವಾಹಿಯಲ್ಲಿ ಕಂಡು ಬರುತ್ತಿದ್ದು ಪ್ರೇಕ್ಷಕರನ್ನ ಪ್ರತಿಬಾರಿ ಇದನ್ನ ಚಾಚು ತಪ್ಪದಂತೆ ನೋಡುವ ಹಾಗೆ ಮಾಡ್ತಾ ಇದೆ. ಕಳೆದ ಬಾರಿ ಟಿಆರ್‌ಪಿ ರೇಟಿಂಗ್ನಲ್ಲಿ ಐದನೇ ಸ್ಥಾನದಲ್ಲಿ ಇದ್ದಂತಹ ಈ ಧಾರವಾಹಿ ಈ ಬಾರಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಬಹುದಾಗಿದೆ.
  • ಗೌತಮ್ ಹಾಗೂ ಭೂಮಿಕಾಳ ಕಾಂಬಿನೇಷನ್ನಲ್ಲಿ ಕಾಣಿಸಿಕೊಳ್ಳುವಂತಹ ಜೀ ಕನ್ನಡದ ಮತ್ತೊಂದು ಧಾರವಾಹಿ ಅಮೃತದಾರೆ ಐದನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಕಳೆದ ವಾರ ನಾಲ್ಕನೇ ಸ್ಥಾನದಲ್ಲಿದ್ದಂತಹ ಅಮೃತಧಾರೆ ಈಗ ಐದನೇ ಸ್ಥಾನದಲ್ಲಿದೆ. ಸ್ವಲ್ಪಮಟ್ಟಿಗೆ ವೀಕ್ಷಕರೆ ಸಂಖ್ಯೆ ಆಚೀಚೆ ಆಗಿರಬಹುದು ಆದರೆ ಮುಂದಿನ ವಾರ ಮತ್ತೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆ ಇದೆ.

Comments are closed.