Kannada Bigg Boss: ಪ್ರಶಾಂತ್ ಸಂಬರ್ಗಿ ಎಲಿಮಿನೇಶನ್ ಮಾಮೂಲಿ ಎಲಿಮಿನೇಶನ್ ಅಲ್ಲ, ಔಟ್ ಆಗಲು ಕಾರಣ ಏನಂತೆ ಗೊತ್ತಾ?

Kannada Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ -9 ಶುರುವಾಗಿ 11 ವಾರಗಳು ಕಳೆದಿವೆ. ಈಗಾಗಲೇ 9 ಜನರು ತಮ್ಮ ಆಟ ಮುಗಿಸಿ ಹೊರಬಂದಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದವರು ಪ್ರಶಾಂತ್ ಸಂಬರ್ಗಿ (Prashanth Sambargi).


ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಮನೆಯಲ್ಲಿ ಸದಾ ಕಾಲ ಜಗಳ ಆಡುತ್ತಿದ್ದರು. ಯಾವುದೇ ಸಣ್ಣ ವಿಚಾರ ಸಿಕ್ಕರೂ ಸಾಕು ಅದನ್ನೇ ದೊಡ್ಡದು ಮಾಡಿ ಜಗಳ ಆಡುತ್ತಿದ್ದರು. ಎದುರಾಳಿಯ ಮನೋಸ್ಥೈರ್ಯ ಕುಗ್ಗಿಸಿ ಆಟ ಆಡುವುದು ಇವರ ಸ್ಟ್ರಾಟಜಿಯಾಗಿತ್ತು. ಆದರೆ ಅದು ಈ ಬಾರಿ ತುಂಬಾನೇ ಕೆಲಸ ಮಾಡಿದಂತೆ ಕಂಡುಬರುತ್ತಿಲ್ಲ. ಹಾಗಾಗಿ ಪ್ರಶಾಂತ್ ಅವರು 11 ವಾರಕ್ಕೆ ಮನೆಯಿಂದ ಹೊರಬಿದ್ದಿದ್ದಾರೆ ಎನ್ನುವ ಮಾಹಿತಿ ಬಂದಿದೆ.


ಪ್ರತಿಬಾರಿಯಂತೆ ಈ ಬಾರಿಯೂ 18 ಜನರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಆದರೆ ಈ ಬಾರಿ 9 ಜನರು ನವೀನರು ಅಂದರೆ ಹೊಸಬರು. ಇನ್ನು ೯ ಜನ ಪ್ರವೀಣರು ಎಂದು ವಿಂಗಡಿಸಲಾಗಿತ್ತು. ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ದಿನದಿಂದಲೇ ಜಗಳ ಆಡಲು ಶುರು ಮಾಡಿದ್ದರು. ಮೊದಲ ದಿನವೇ ದರ್ಶ್ ಹಾಗೂ ಪ್ರಶಾಂತ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ಇನ್ನೊಬ್ಬ ಸ್ಪರ್ಧಿ ರೂಪೇಶ್ ರಾಜಣ್ಣ ನಡುವೆಯೂ ಹಲವಾರು ಬಾರಿ ಜಗಳ ಆಡಿದ್ದರು. ಈ ವೇಳೆ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ನಂತರ ಅದು ಅರಿವಾದ ಮೇಲೆ ಕ್ಷಮೆ ಕೋರಿ ಕಣ್ಣೀರು ಹಾಕಿದ್ದರು. ಪ್ರಶಾಂತ್ ಸಂಬರ್ಗಿ ಕೇವಲ ಜಗಳ ಮಾಡುವುದಷ್ಟೆ ಅಲ್ಲದೆ ಒಳ್ಳೆಯ ಆಟಗಾರ ಕೂಡ ಆಗಿದ್ದರು. ಪ್ರತಿಯೊಂದು ಟಾಸ್ಕ್ನಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಮನೆಯಲ್ಲಿಯೂ ಬಹಳ ಲವಲವಿಕೆಯಿಂದ ಇರುತ್ತಿದ್ದರು. ಆದರೂ ೧೧ ವಾರಕ್ಕೆ ಹೊರಬಂದಿರುವುದು ಅಚ್ಚರಿ ಮೂಡಿಸಿದೆ.


ಕಳೆದ ವಾರ ಬಾಟಂ ಇರುವ ಮೂವರು ಸ್ಪರ್ಧಿಗಳಲ್ಲಿ ಪ್ರಶಾಂತ್ ಸಂಬರ್ಗಿ ಕೂಡ ಒಬ್ಬರಾಗಿದ್ದರು. ಆ ವೇಳೆ ಕಾವ್ಯಶ್ರೀ ಗೌಡ ಅವರು ಎಲಿಮಿನೇಟ್ ಆಗಿದ್ದರು. ದಿವ್ಯ ಉರುಡುಗ ಅವರು ಉಳಿದುಕೊಂಡಿದ್ದರು. ಈ ವಾರ ದಿವ್ಯ ಅವರೇ ಮನೆಯಿಂದ ಹೊರಬರುವುದು ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಪ್ರಶಾಂತ್ ಸಂಬರ್ಗಿ ಅವರು ಹೊರಬಂದಿದ್ದಾರೆ. ಇದನ್ನೂ ಓದಿ: Kannada Film: ನಟ ರಾಮಕುಮಾರ್ ದೊಡ್ಮನೆ ಅಳಿಯ ಆಗಿದ್ದು ಹೇಗೆ ಗೊತ್ತಾ? ಮದುವೆ ಆದ್ಮೇಲೆ ರಾಮ್ ಕುಮಾರ್ ಗೆ ಸಿನಿಮಾ ಅವಕಾಶ ಕೈತಪ್ಪಿದ್ಯಾಕೆ?


ಪ್ರಶಾಂತ್ ಸಂಬರ್ಗಿ ಅವರು ಕೆಲ ವಿಷಯಗಳಲ್ಲಿ ತಮ್ಮ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದು, ಕೇವಲ ಜಗಳ ಮಾಡುವುದು, ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದರಿಂದಲೇ ಮನೆಯಿಂದ ಹೊರಬರುವಂತಾಯಿತು ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ನಿನ್ನೆ ನಡೆದ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲೂ ಕಿಚ್ಚ ಸುದೀಪ್ ಅವರು ಪ್ರಶಾಂತ್ ಸಂಬರ್ಗಿ ಹಾಗೂ ಆರ್ಯವರ್ಧನ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು ಇನ್ನು ಪ್ರಶಾಂತ ಸಂಬರ್ಗಿ ಅವರಿಗೆ ವಾರಕ್ಕೆ ಒಂದು ಲಕ್ಷ ಸಂಭಾವನೆ ನೀಡಲಾಗುತ್ತಿತ್ತು ಎನ್ನುವ ಮಾಹಿತಿ ಇದೆ.

Comments are closed.