Atal Residential schools:  ಯೋಗಿ ಆದಿತ್ಯನಾಥ್ ಹೊರಡಿಸಿದ ಮಹತ್ವದ ಸೂಚನೆ: ನಮ್ಮ ರಾಜ್ಯದಲ್ಲಿಯೂ ಈ ನೀತಿ ಜಾರಿ ಆಗಲೇಬೇಕು ಎಂದ ಸಾರ್ವಜನಿಕರು!?

Atal Residential schools:  ಒಂದು ರಾಜ್ಯ ಅಥವಾ ದೇಶ ಅಭಿವೃದ್ಧಿ ಕಾಣಬೇಕು ಅಂದ್ರೆ ಮೊಟ್ಟಮೊದಲನೆಯದಾಗಿ ಅಲ್ಲಿ ಶಿಕ್ಷಣ (Education) ಸರಿಯಾಗಿ ಪ್ರತಿಯೊಬ್ಬರಿಗೂ ಸಿಗಬೇಕು ಪ್ರತಿಯೊಂದು ಮಗುವು ಕೂಡ ಶಾಲೆಗೆ ಹೋಗುವ ಹಾಗೆ ಆಗಬೇಕು ಈ ರೀತಿ ಶಿಕ್ಷಣದಲ್ಲಿ ಬೆಳವಣಿಗೆ ಕಂಡರೆ ಪ್ರತಿಯೊಂದು ದೇಶ ಕೂಡ ಅಭಿವೃದ್ಧಿಯಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಉತ್ತರ ಪ್ರದೇಶದ (Uttara Pradesh) ಮುಖ್ಯಮಂತ್ರಿಗಳಾಗಿರುವ ಯೋಗಿ ಆದಿತ್ಯನಾಥ್ (Yogi Adityanath)  ಅವರು, ತಮ್ಮ ರಾಜ್ಯದಲ್ಲಿ ಬಡ ಮಕ್ಕಳಿಗೆ ಅನಾಥರಿಗೆ ಹಾಗೂ ಕಾರ್ಮಿಕರಿಗೆ ಶಿಕ್ಷಣ ಸೌಲಭ್ಯ ನೀಡುವುದರ ಜೊತೆಗೆ ಉತ್ತಮ ಸೌಲಭ್ಯಗಳಿರುವ ವಸತಿ ಶಾಲೆಯನ್ನು ಕೂಡ ಆರಂಭಿಸಿದ್ದರೆ. ಇದನ್ನೂ ಓದಿ: Petrol Pumps Frauds: ನಿಮಗೆ ಗೊತ್ತಿಲ್ಲದ ಹಾಗೆ ಪೆಟ್ರೋಲ್ ಬಂಕ್ ನಲ್ಲಿ ಭಾರಿ ಮೊಸ ಆಗಬಹುದು ಎಚ್ಚರ; ತಿಳಿದುಕೊಳ್ಳೋಕೆ ಇಲ್ಲಿದೆ ಸುಲಭ ಟ್ರಿಕ್ಸ್!

ಅಟಲ್ ವಸತಿ ಶಾಲೆ ನಿರ್ಮಾಣ:

ಉತ್ತರಪ್ರದೇಶದ 18 ಜಿಲ್ಲೆಗಳಲ್ಲಿ ಅಟಲ್ ವಸತಿ ಶಾಲೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ 16 ಜಿಲ್ಲೆಗಳಲ್ಲಿ ಈಗಾಗಲೇ ಕಾಮಗಾರಿ ಕೂಡ ಪೂರ್ಣಗೊಂಡಿದ್ದು ಅಗಸ್ಟ್ ತಿಂಗಳ ಕೊನೆಯ ಒಳಗೆ 6ನೇ ತರಗತಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ 1189.88 ಕೋಟಿ ವೆಚ್ಚವಾಗಲಿದೆ. 6 ರಿಂದ 12ನೇ ತರಗತಿಯವರೆಗೆ ಈ ಶಾಲೆಯಲ್ಲಿ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ವಸತಿ ಕೂಡ ಪಡೆಯಬಹುದು. ಅಟಲ್ ವಸತಿ ಶಾಲೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಪ್ರಕ್ರಿಯೆ ಪೂರ್ಣಗೊಂಡಿದೆ. ಶಾಲೆಗೆ ಅಗತ್ಯವಿರುವ ಪೀಠೋಪಕರಣಗಳು ವಸತಿಗೆ ಬೇಕಾಗಿರುವ ಸೌಲಭ್ಯ ಇಲ್ಲವನ್ನು ಕೂಡ ಹೊಂದಿಸಲಾಗಿದ್ದು ಸದ್ಯದಲ್ಲಿಯೇ ಉಚಿತ ಹಾಸ್ಟೆಲ್ ಸೌಲಭ್ಯವಿರುವ ಅಟಲ್ ವಸತಿ ಶಾಲೆ ಆರಂಭವಾಗಲಿದೆ.

ಅತ್ಯುತ್ತಮ ವಸತಿ ಮಾತ್ರವಲ್ಲದೆ ಮಕ್ಕಳಿಗೆ ಶೈಕ್ಷಣಿಕ ಪಠ್ಯಕ್ರಮಕ್ಕೆ ಅನುಕೂಲವಾಗುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಂಪ್ಯೂಟರ್ ಲ್ಯಾಬ್ ಗಳು, ಸೈನ್ಸ್ ಲ್ಯಾಬ್ ಗಳು, ಗಣಿತ ಲ್ಯಾಬ್ ಗಳು, ಅಟಲ್ ಥಿಂಕಿಂಗ್ ಪ್ರಯೋಗಾಲಯ, ಎಕ್ಸ್ಪೆರಿಮೆಂಟಲ್ ಲ್ಯಾಬ್ ಹೀಗೆ ಮಕ್ಕಳಿಗೆ ಅನುಕೂಲವಾಗುವ ಎಲ್ಲಾ ತಂತ್ರಜ್ಞಾನಗಳನ್ನು ಕೂಡ ಈ ಶಾಲೆಯಲ್ಲಿ ಕೊಡಲಾಗಿದ್ದು ಹಾಸ್ಟೆಲ್ ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ನಮ್ಮ ರಾಜ್ಯದಲ್ಲಿಯೂ ಕೂಡ ಬಡ ವರ್ಗದ ಮಕ್ಕಳು ಓದಲು ಹಾಗೂ ಉಳಿದುಕೊಳ್ಳಲು ಅನುಕೂಲವಾಗುವಂತಹ ಅಟಲ್ ವಸತಿ ಶಾಲೆಗಳ ಅಭಿವೃದ್ಧಿಯಾಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: RBI: ಅಗಸ್ಟ್ 10 ರಿಂದ ಜಾರಿಗೆ ಬರಲಿದೆ ಆರ್ ಬಿ ಐ ಹೊಸ ನಿಯಮ: ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡವರಿಗೆ ಹೊಡೆಯಲಿದೆ ಜಾಕ್ ಪಾಟ್: ಏನು ಗೊತ್ತೇ?

Comments are closed.