Bigg Boss:ಬಿಗ್ ಬಾಸ್ ಸೀಸನ್ 11 ಕ್ಕೆ ಹೋಸ್ಟ್ ಯಾರು ಕಂಟೆಸ್ಟೆಂಟ್ಗಳು ಯಾರು? ಹೊರಬಿತ್ತು ನೋಡಿ ಸಂಪೂರ್ಣ ಮಾಹಿತಿ!

Bigg Boss:ಈ ಬಾರಿಯ ಬಿಗ್ ಬಾಸ್ ಬಗ್ಗೆ ಪ್ರಾರಂಭ ಆಗುವುದಕ್ಕಿಂತ ಮುಂಚೆನೇ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುವುದಕ್ಕೆ ಪ್ರಾರಂಭವಾಗಿತ್ತು. ಅದರಲ್ಲೂ ವಿಶೇಷವಾಗಿ ಕಿಚ್ಚ ಸುದೀಪ್ ರವರ ಬಗ್ಗೆ ಈ ಬಾರಿ ಬಿಗ್ ಬಾಸ್ ಅನ್ನು ಅವರು ನಿರೂಪಣೆ ಮಾಡ್ತಾ ಇಲ್ಲ ಅನ್ನುವುದಾಗಿ ಕೂಡ ಸುದ್ದಿಗಳು ಕೇಳಿ ಬಂದಿದ್ದವು. ಈಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಹೈದರಾಬಾದ್ ನಲ್ಲಿ ಮುಂದಿನ ಬಿಗ್ ಬಾಸ್ ಕಾರ್ಯಕ್ರಮದ ಪ್ರೋಮೋ ಚಿತ್ರೀಕರಣ ಈಗಾಗಲೇ ಪೂರ್ತಿಯಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಈ ಕಾರ್ಯಕ್ರಮದಲ್ಲಿ ನಿರೂಪಕರು ಯಾರು ಹಾಗೂ ಸ್ಪರ್ಧಿಗಳು ಯಾರಿರಬಹುದು ಎನ್ನುವಂತಹ ಚಿತ್ರಣ ರಿವೀಲ್ ಆಗಿದೆ ಎನ್ನುವಂತಹ ಮಾಹಿತಿ ಸಿಕ್ಕಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ವಿವರವನ್ನು ಪಡೆದುಕೊಳ್ಳೋಣ.

ಮೊದಲಿಗೆ ನಿರೂಪಕರ ವಿಚಾರದ ಬಗ್ಗೆ ಮಾತನಾಡುವುದಾದರೆ ಪ್ರೊಮೋ ಚಿತ್ರೀಕರಣದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರೆ ಕಾಣಿಸಿಕೊಂಡಿರುವುದರಿಂದಾಗಿ ನಿರೂಪಕರ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಅನ್ನೋದನ್ನು ಇಲ್ಲಿ ನಾವು ಕಾಣಬಹುದಾಗಿದೆ. ಇನ್ನು ಸ್ಪರ್ಧಿಗಳ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ಕೂಡ ಸಾಕಷ್ಟು ಕುತೂಹಲಕಾರಿ ಅಂಶಗಳು ಕಂಡು ಬಂದಿದ್ದು ಆ ಸ್ಪರ್ಧಿಗಳು ಯಾರೆಲ್ಲ ಅನ್ನೋದನ್ನ ತಿಳಿಯೋಣ ಬನ್ನಿ.

ಮೊದಲಿಗೆ ತುಕಾಲಿ ಸಂತೋಷ ರವರ ಪತ್ನಿ ಮಾನಸ ಎಂಬುದಾಗಿ ತಿಳಿದುಬಂದಿದೆ. ಕಾಮಿಡಿ ನಟ ಚಂದ್ರಪ್ರಭ, ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿರುವಂತಹ ಭೂಮಿಕ ಬಸವರಾಜ್ ಹಾಗೂ ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾಗಿರುವ ಎಸ್ ನಾರಾಯಣ್ ಅವರ ಮಗ ಪಂಕಜ್ ಕೂಡ ಈ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವಂತಹ ಮಾಹಿತಿಗಳು ಕೂಡ ಕೇಳಿ ಬರುತ್ತಿವೆ. ಅಂತರಪಟ ಧಾರವಾಹಿಯ ಹೀರೋಯಿನ್ ಆಗಿರುವ ತನ್ವಿಯ ಬಾಲ್ರಾಜ್, ಶನಿ ಧಾರವಾಹಿಯ ನಟ ಸುನಿಲ್, ಕೆಂಡಸಂಪಿಗೆ ಆಕಾಶ್, ಮಜಾ ಭಾರತ ರಾಘವೇಂದ್ರ, ಬೃಂದಾವನದ ವರುಣ್ ಆರಾಧ್ಯ ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಅಕ್ಟೋಬರ್ ತಿಂಗಳಿನಲ್ಲಿ ಬಿಗ್ ಬಾಸ್ 11ನೇ ಸೀಸನ್ ಪ್ರಾರಂಭ ಆಗಲಿದೆ ಎನ್ನುವ ಮಾಹಿತಿ ಕೇಳಿ ಬರುತ್ತಿದ್ದು ಯಾರೆಲ್ಲಾ ಸ್ಪರ್ಧಿಗಳಾಗಿ ದೊಡ್ಮನೆಗೆ ಹೋಗಲಿದ್ದಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ನಾವು ಕಾದು ನೋಡಬೇಕಾಗಿದೆ.

ಒಟ್ಟಾರೆ ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಕಾರಣಗಳಿಗಾಗಿ ಕುತೂಹಲವನ್ನು ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಈಗಾಗಲೇ ಬಿಗ್ ಬಾಸ್ ಪ್ರೇಕ್ಷಕರು ಮಾತನಾಡಿಕೊಳ್ಳಲು ಪ್ರಾರಂಭ ಮಾಡಿದ್ದಾರೆ. ಕೊನೆವರೆಗೂ ಕೂಡ ವಾಹಿನಿ ಯಾವೆಲ್ಲ ಸ್ಪರ್ಧಿಗಳು ಮನೆಯ ಒಳಗೆ ಹೋಗುತ್ತಿದ್ದಾರೆ ಎನ್ನುವುದನ್ನು ಗೌಪ್ಯವಾಗಿಯೇ ಇಟ್ಟುಕೊಳ್ಳುತ್ತದೆ. ಹೀಗಾಗಿ ಯಾರೆಲ್ಲಾ ಬಿಗ್ ಬಾಸ್ ಮನೆಗೆ ಈ ಬಾರಿ ಹೋಗಬಹುದು ಅನ್ನೋದನ್ನ ಇನ್ನೇನು ಕೆಲವೇ ತಿಂಗಳುಗಳಲ್ಲಿ ನಾವು ಕಾಣಬಹುದಾಗಿದೆ.

Comments are closed.