Govt. Information: ಉಚಿತ ಬೈಕ್ / ದ್ವಿಚಕ್ರ ವಾಹನ ಪಡೆಯಲು ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನಾಂಕ ಈ ಕೂಡಲೇ ಅರ್ಜಿ ಹಾಕಿ!

Govt. Information ವಿಕಲಚೇತನ (disabled) ರಿಗೆ ಹಾಗೂ ಹಿಂದಿ ನಾಗರಿಕರ ಸಬಲೀಕರಣ ಇಲಾಖೆಯಿಂದ 2022 23ನೇ ಸಾಲಿನಲ್ಲಿ ಕುಟುಂಬದ ವಾರ್ಷಿಕ ವರಮಾನ ಎರಡು ಲಕ್ಷಕ್ಕಿಂತ ಕಡಿಮೆ ಇದ್ದರೆ ಹಾಗೂ 20 ರಿಂದ 60 ವರ್ಷ ವಯಸ್ಸಿನವರಾಗಿದ್ದು ತೀವ್ರ ದೈಹಿಕ ವಿಕಲಚೇತನತೆಯನ್ನು ಅನುಭವಿಸುತ್ತಿದ್ದರೆ, ಅಂಥವರಿಗೆ ಉದ್ಯೋಗ ಸ್ಥಳಕ್ಕೆ ಕಾಲೇಜುಗಳಿಗೆ ಹೋಗಲು ಅನುಕೂಲವಾಗುವಂತೆ ಯಂತ್ರ ಚಾಲಿತ ದ್ವಿಚಕ್ರ ವಾಹನವನ್ನು ನೀಡಲಾಗುವುದು.

ಇದೀಗ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಅರ್ಹ ದೈಹಿಕ ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲು ನಾಳೆ ಕೊನೆಯ ದಿನಾಂಕ (25 ಡಿಸೆಂಬರ್) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಆಯಾ ತಾಲೂಕು ಪಂಚಾಯತ್ ಕಚೇರಿಯಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಬಳಿ ದಾಖಲಾತಿ ಸರಿ ಇರುವುದನ್ನೂ ಖಚಿತಪಡಿಸಿಕೊಳ್ಳಬೇಕು. ಅರ್ಜಿ ಫಾರಂ ಮತ್ತು ಹೆಚ್ಚಿನ ಮಾಹಿತಿಗಾಗಿ ತಾಲೂಕು ಪಂಚಾಯಿತಿ ನಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಬಳಿ ಮಾಹಿತಿ ಸಂಗ್ರಹಿಸಿಕೊಳ್ಳಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: IPL 2023: ಆರ್‌ಸಿಬಿ ತಂಡ ಸೇರಿದ ಮೂರು ಸ್ಟಾರ್ ಪ್ಲೇಯರ್ಸ್; ಕನ್ನಡಿಗರನ್ನ ಸೈಡ್ ಲೈನ್ ಮಾಡಿದ್ಯಾ ಆರ್ಸಿಬಿ ತಂಡ?

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು

ಭಾರತದ ಪ್ರಜೆಯಾಗಿರಬೇಕು.

ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಾಗಿರಬೇಕು

20 ರಿಂದ 60 ವರ್ಷದ ವಯೋಮಾನದ ಒಳಗಿನವರಾಗಿರಬೇಕು.

ಶೇಕಡ 75 ಕ್ಕಿಂತ ಹೆಚ್ಚಿನ ವಿಕಲತೆ ಹೊಂದಿದ್ದು ಸೊಂಟದ ಕೆಳಗೆ ಅಂದರೆ ಎರಡು ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡಿರುವ ಎರಡು ಕೈಗಳ ಸ್ವಾಧೀನ ಇಲ್ಲದೆ ಇರುವ ಹಾಗೂ ಇತರ ಎಲ್ಲ ರೀತಿಯಲ್ಲಿಯೂ ಸದೃಢರಾಗಿರುವವರು ದ್ವಿಚಕ್ರ ವಾಹನ ಉಚಿತವಾಗಿ ಪಡೆಯಲು ಅರ್ಹರಾಗಿರುತ್ತಾರೆ.

ಸೌಲಭ್ಯ ಪಡೆಯಲು ಇಚ್ಚಿಸುವವರು ದ್ವಿಚಕ್ರ ವಾಹನ ಚಾಲನೆ ಮಾಡುವ ಪರವಾನಿಗೆ ಪತ್ರ ಹೊಂದಿರಬೇಕು.

ವಿಕಲಚೇತನ ಗುರುತಿನ ಚೀಟಿ ಕಡ್ಡಾಯವಾಗಿ ಇರಬೇಕು.

ಈ ಹಿಂದೆ ಅರ್ಜಿ ಸಲ್ಲಿಸಿದವರು ಕೂಡ ಆನ್ಲೈನ್ ಮೂಲಕ ಮತ್ತೊಮ್ಮೆ ಅರ್ಜಿ ಸಲ್ಲಿಸುವುದು ಕಡ್ಡಾಯ.

Comments are closed.