Kannada Serial: ‘ತ್ರಿಪುರ ಸುಂದರಿ’ಯಾಗಿ ಮಿಂಚಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್; ಏನಿದು ಹೊಸ ಟಾಸ್ಕ್?

Kannada Serial: ಸದ್ಯ ಕಲರ್ಸ್ ಕನ್ನಡ (Colours kannada) ವಾಹಿನಿಯ ಕಲರ್ಸ್ ಹೆಚ್ಚಿಸಿದ್ದು ಬಿಗ್ ಬಾಸ್ (Bigg Boss) ಸೀಸನ್ ಪ್ರತಿ ಸೀಸನ್ ಅಂತೆ ಬಿಗ್ ಬಾಸ್ ಸೀಸನ್ ೯ ಕೂಡ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಬಿಗ್ ಬಾಸ್ ಸೀಸನ್ 9 (Bigg Boss Season-9)  ಇನ್ನೇನು ಅಂತ್ಯವಾಗಲಿದೆ. ಆ ಹಿನ್ನೆಲೆಯಲ್ಲಿ ಹೊಸ ಧಾರವಾಹಿಗಳ ಆಗಮನ ಆಗಲಿದೆ.

ಹೌದು, ಬಿಗ್ ಬಾಸ್ ಸೀಸನ್ 9 ಆರಂಭ ಆಗುತ್ತಿದ್ದ ಹಾಗೆ ಒಂದೆರಡು ಧಾರಾವಾಹಿಗಳನ್ನು ವೈನ್ಡ್ ಅಪ್ (Wind up)  ಮಾಡಲಾಗಿತ್ತು ಇದೀಗ ಬಿಗ್ ಬಾಸ್ ಮುಗಿದ ಮೇಲೆ ಕೆಲವು ಧಾರಾವಾಹಿಗಳು ತೆರೆಯ ಮೇಲೆ ಬರಲಿವೆ. ಅವುಗಳಲ್ಲಿ ಒಂದು ’ತ್ರಿಪುರ ಸುಂದರಿ’(Tripura Sundari) ಧಾರಾವಾಹಿ ಈ ಧಾರಾವಾಹಿಯಲ್ಲಿ ತ್ರಿಪುರ ಸುಂದರಿಯಾಗಿ ಕಂಗೊಳಿಸಲಿದ್ದಾರೆ ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ (Divya Suresh).

ಹೌದು ಬಿಗ್ ಬಾಸ್ ಸೀಸನ್ ಎಂಟರ ವಿನ್ನರ್ ಮಂಜು ಪಾವಗಡ (Manju Pavgada) ಅವರ ಜೊತೆಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ಸ್ಪರ್ಧಿ ದಿವ್ಯ ಸುರೇಶ್. ಬಿಗ್ ಬಾಸ್ ಮೂಲಕವೇ ಖ್ಯಾತರಾದ ದಿವ್ಯ ಸುರೇಶ್ ದೊಡ್ಮನೆಯಲ್ಲಿ ಸಾಕಷ್ಟು ಟಾಸ್ಕ್ (Task) ಗಳ ಮೂಲಕ ಹಾಗೂ ತಮ್ಮ ವಿಶೇಷ ಪ್ರತಿಭೆಯ ಮೂಲಕ ಜನರನ್ನ ರಂಜಿಸಿದ್ರು. ಇದೀಗ ಹೊಸದೊಂದು ಧಾರಾವಾಹಿ ಮೂಲಕ ಜನರ ಎದುರು ಬರಲಿದ್ದಾರೆ ದಿವ್ಯ ಸುರೇಶ್.

ತ್ರಿಪುರ ಸುಂದರಿಯಾಗಿ ದಿವ್ಯ ಸುರೇಶ್;

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 9 ಮುಗಿಯುತ್ತಿದ್ದ ಹಾಗೆ ತ್ರಿಪುರ ಸುಂದರಿ ಧಾರಾವಾಹಿ ಪ್ರಸಾರವಾಗಬಹುದು ದಿವ್ಯ ಸುರೇಶ್ ಮುಖ್ಯ ಭೂಮಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ತ್ರಿಪುರ ಸುಂದರಿ ಧಾರಾವಾಹಿ ಪ್ರಸಾರವಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಇದೀಗ ಈ ಧಾರಾವಾಹಿಯ ಪ್ರಮುಖ ಬಿಡುಗಡೆ ಆಗಿದ್ದು ದಿವ್ಯ ಸುರೇಶ್ ಅವರ ಕಣ್ಣುಗಳನ್ನು ಮಾತ್ರ ರಿವೀಲ್ ಮಾಡಿದ್ದಾರೆ ಆದರೆ ಈ ಧಾರಾವಾಹಿಯಲ್ಲಿ ತ್ರಿಪುರ ಸುಂದರಿಯಾಗಿ ಕಂಗೊಳಿಸುತ್ತಾ ಇರುವವರು ಮಾತ್ರ ದಿವ್ಯ ಸುರೇಶ್ ಅನ್ನೋದು ರಿವಿಲ್ ಆಗಿದೆ.

ಸಕ್ಕತ್ ಫೀಟ್ ಅಂಡ್ ಫೈನ್ ಆಗಿರುವ ದಿವ್ಯ ಸುರೇಶ್ ಈ ಹಿಂದೆ ಪ್ರೇಮಲೋಕ, ಜೋಡಿಹಕ್ಕಿ, ನನ್ನ ಹೆಂಡತಿ ಎಂ ಬಿ ಬಿ ಎಸ್ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ ನ ಬಳಿಕ ಸಿನಿಮಾ ಅಭಿನಯದಲ್ಲಿ ದಿವ್ಯ ಸುರೇಶ್. ಈ ನಡುವೆ ಕುಡಿದು ಗಲಾಟೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಕಾಂಟ್ರವರ್ಸಿ ಕೂಡ ಮೈಮೇಲೆ ಎಳೆದುಕೊಂಡಿದ್ದರು.

ಇದೀಗ ದಿವ್ಯ ಸುರೇಶ್ ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ದೇವ ಕನ್ಯೆ ಪಾತ್ರ ನಿಭಾಯಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇನ್ನು ಧಾರಾವಾಹಿ ತಂಡ ರಿವೀಲ್ ಮಾಡಿಲ್ಲ ಸದ್ಯ ತ್ರಿಪುರ ಸುಂದರಿ ದಿವ್ಯ ಸುರೇಶ್ ಧಾರಾವಾಹಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.

Comments are closed.