Earth: ಭೂಮಿಯ ಆಯಸ್ಸು ಮುಗಿತ ಬಂತಾ? ಇಸ್ರೋ ಅಧ್ಯಕ್ಷ ಹೇಳಿದ್ದನ್ನು ಕೇಳಿದರೆ ಎದೆ ಹೊಡ್ಕೊಳ್ಳೋದು ಗ್ಯಾರಂಟಿ!

Earth:ಇತ್ತೀಚಿನ ದಿನಗಳಲ್ಲಿ ಭೂಮಿ ಅಂತ್ಯ ಆಗುತ್ತೆ ಅನ್ನುವಂತಹ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಇಸ್ರೋ ಅಧ್ಯಕ್ಷ ಆಗಿರುವಂತಹ ಎಸ್ ಸೋಮನಾಥ್ ಅವರು ಅಪೋಫಿಸ್ ಎನ್ನುವಂತಹ ಕ್ಷುದ್ರಗ್ರಹ ಭೂಮಿಯ ಕಡೆಗೆ ಬರ್ತಾ ಇದ್ದು ಅದು ಅಪ್ಪಳಿಸಿದರೆ ಖಂಡಿತವಾಗಿ ಭೂಮಿ ಸರ್ವನಾಶ ಆಗಬಹುದು ಎನ್ನುವಂತಹ ಮಾತನ್ನು ಆಡಿದ್ದಾರೆ ಹಾಗೂ ಇದು ಭಾರತೀಯ ಹೃದಯದಲ್ಲಿ ಭ-ಯವನ್ನು ಹುಟ್ಟಿಸಿದೆ.

ಸೌರಮಂಡಲದಲ್ಲಿ ಸರಿಯಾಗಿ ನೋಡಿದ್ರೆ ಎಂತೆಂತಹ ಗ್ರಹಗಳು ನಕ್ಷತ್ರಗಳು ಹಾಗೂ ಕ್ಷುದ್ರ ಗ್ರಹಗಳ ಜೊತೆಗೆ ಏಲಿಯನ್ಸ್ಗಳು ಕೂಡ ಇವೆ ಅನ್ನುವುದಾಗಿ ವಿಜ್ಞಾನಿಗಳು ಹೇಳ್ತಾರೆ. ನಮ್ಮ ಕಣ್ಣುಗಳಿಗೆ ಕಾಣುತ್ತಿಲ್ಲ ಎಂದ ಮಾತ್ರಕ್ಕೆ ಅವುಗಳು ಇಲ್ಲ ಎಂದಲ್ಲ ಅನ್ನೋದನ್ನ ಕೂಡ ನಾವಿಲ್ಲಿ ಒಪ್ಪಿಕೊಳ್ಳಬೇಕಾಗುತ್ತದೆ. ಅಪೋಫಿಸ್ ಎನ್ನುವಂತಹ ಕ್ಷುದ್ರ ಗ್ರಹ ಕೂಡ ಇನ್ನು ಐದು ವರ್ಷಗಳಲ್ಲಿ ಭೂಮಿಯ ಹತ್ತಿರದಿಂದ ಹಾದು ಹೋಗುತ್ತದೆ ಎನ್ನುವುದನ್ನು ಕೂಡ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಹೀಗಾಗಿ ಅದರ ಮೇಲೆ ಇಸ್ರೋ ಸಂಸ್ಥೆ ಕೂಡ ಕಣ್ಣಿಟ್ಟಿದೆ ಎಂಬುದಾಗಿ ಹೇಳಿದೆ. ಆ ಕ್ಷುದ್ರಗ್ರಹದಿಂದ ಭೂಮಿಗೆ ಅಪಾಯ ಇದೆ ಅನ್ನೋದಂತು ನಿಜ ಇದಕ್ಕಾಗಿ ತಯಾರಿಯನ್ನು ನಡೆಸಿಕೊಳ್ಳುವುದಕ್ಕೆ ಕೂಡ ಪ್ರಾರಂಭ ಮಾಡಿಕೊಳ್ಳಲಾಗುತ್ತಿದೆ ಅಂತೆ.

ನಮಗಿರೋದು ಒಂದೇ ಭೂಮಿ ಹೀಗಾಗಿ ಅದನ್ನ ಉಳಿಸಿಕೊಳ್ಳುವುದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಬೇರೆ ಬಾಹ್ಯಾಕಾಶ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಕೆಲಸ ಮಾಡುವುದಕ್ಕೆ ಕೂಡ ನಾವು ಸಿದ್ದ ಎಂಬುದಾಗಿ isro ಅಧ್ಯಕ್ಷರು ಹೇಳಿಕೊಂಡಿದ್ದಾರೆ. ಅಪೋಫಿಸ್ ಎನ್ನುವಂತಹ ಕ್ಷುದ್ರ ಗ್ರಹದಿಂದ ಭೂಮಿಗೆ ಮೂರು ಪ್ರತಿಶತ ಅಪಾಯ ಇದೆ ಎಂಬುದಾಗಿ ತಿಳಿದು ಬಂದಿದ್ದು ಒಂದು ವೇಳೆ ಅದು ತಾನು ಹೋಗುವಂತಹ ದಾರಿಯನ್ನು ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿದರು ಕೂಡ ಭೂಮಿಯ ಮೇಲೆ ಬೀಳುವಂತಹ ಸಾಧ್ಯತೆ ಹೆಚ್ಚಾಗಿದೆ.

ಈ ಕ್ಷುದ್ರಗ್ರಹ ಎನ್ನುವುದು 2004ರಲ್ಲಿ ವಿಜ್ಞಾನಿಗಳ ಕಣ್ಣಿಗೆ ಬಿದ್ದಿತ್ತು ಅನ್ನೋದನ್ನ ಕೂಡ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಅಮೆರಿಕದ ನಾಸ ಸಂಸ್ಥೆ ಕೂಡ ಸಾಕಷ್ಟು ವರ್ಷಗಳಿಂದ ಈ ಕ್ಷುದ್ರಗ್ರಹದ ಬಗ್ಗೆ ಹಿಂಬಾಲಿಸಿಕೊಂಡು ಬರುತ್ತಿದ್ದು ಅದನ್ನು ಯಾವ ರೀತಿಯಲ್ಲಿ ಭೂಮಿಯಿಂದ ದೂರಕ್ಕೆ ಇರಿಸಬೇಕು ಎನ್ನುವುದರ ಬಗ್ಗೆ ಕೂಡ ಅಧ್ಯಯನ ನಡೆಸುತ್ತಿದೆ. ಭೂಮಿಯ ಮೇಲಿರುವಂತಹ ಈ ಬಾಹ್ಯಾಕಾಶ ವಿಜ್ಞಾನಿಗಳು ಯಾವ ರೀತಿಯಲ್ಲಿ ಈ ಕ್ಷುದ್ರಗ್ರಹದಿಂದ ಭೂಮಿಯನ್ನ ಸುರಕ್ಷಿತವಾಗಿ ಇರಿಸುತ್ತಾರೆ ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿಯೇ ಕಾದು ನೋಡಬೇಕಾಗಿದೆ. ಮುಂದಿನ ಐದು ವರ್ಷದ ಸಮಯ ಇದ್ದರೂ ಕೂಡ ಈ ಸುದ್ದಿ ಹೊರ ಬರುತ್ತಿದ್ದಂತೆ ಪ್ರತಿಯೊಬ್ಬರು ಕೂಡ ಆತಂಕ ಭರಿತರಾಗಿದ್ದಾರೆ.

Comments are closed.