Sandalwood: ಮತ್ತೊಂದು ಅದ್ಧೂರಿ ಮದುವೆಗೆ ಸಾಕ್ಷಿಯಾಗುತ್ತಾ ಸ್ಯಾಂಡಲ್ ವುಡ್? ಚಾಕೋಲೆಟ್ ವಿಲನ್ ನನ್ನು ವರಿಸಲಿದ್ದಾರಾ ಹರಿಪ್ರಿಯಾ?

Sandalwood: ಸ್ಯಾಂಡಲ್ ವುಡ್ ನಲ್ಲಿ ಇದೀಗ ಒಬ್ಬರಾದ ಮೇಲೆ ಒಬ್ಬರು ನಿಶ್ಚಿತಾರ್ಥ, ಮದುವೆಯ ಸಂಭ್ರಮದಲ್ಲಿದ್ದಾರೆ. ಇತ್ತಿಚೆಗಷ್ಟೆ ಗಟ್ಟಿಮೇಳ ಧಾರವಾಹಿ (Serial) ಖ್ಯಾತಿಯ ಪ್ರಿಯಾ ಆಚಾರ್ ಹಾಗೂ ಪಾರು ಧಾರವಾಹಿ ಖ್ಯಾತಿಯ ಸಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೆ ಪಾರು ಧಾರಾವಾಹಿಯ ನಾಯಕ ನಟ ಶರತ್ ಭಾರಧ್ವಾಜ ಕೂಡ ನಿನ್ನೆಯಷ್ಟೆ ಸಾಫ್ಟವೇರ್ ಉದ್ಯೋಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಟಿ ಅದಿತಿ ಪ್ರಭುದೇವ ಅವರು ಇಂದು ವಿವಾಹವಾಗುತ್ತಿದ್ದಾರೆ. ಹೀಗಿರುವಾಗಲೇ ಹರಿಪ್ರಿಯಾ ಅವರು ಕೂಡ ಇದೀಗ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ತಾವು ಪ್ರೀತಿಸಿದ ಹುಡುಗನನ್ನೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

JYO 1 | Live Kannada News
Sandalwood: ಮತ್ತೊಂದು ಅದ್ಧೂರಿ ಮದುವೆಗೆ ಸಾಕ್ಷಿಯಾಗುತ್ತಾ ಸ್ಯಾಂಡಲ್ ವುಡ್? ಚಾಕೋಲೆಟ್ ವಿಲನ್ ನನ್ನು ವರಿಸಲಿದ್ದಾರಾ ಹರಿಪ್ರಿಯಾ? https://sihikahinews.com/haripriya-marriage-with-vasishta-simha/

ಹೌದು, ಹರಿಪ್ರಿಯಾ (Haripriya) ಅವರು ಕನ್ನಡದ ಚಾಕೋಲೇಟ್ ವಿಲನ್ ಎಂದೇ ಖ್ಯಾತರಾದ ವಸಿಸ್ಠಸಿಂಹ ಅವರನ್ನು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದೆ. ಇತ್ತಿಚೆಗಷ್ಟೆ ಹರಿಪ್ರಿಯಾ ಅವರು ಮೂಗು ಚುಚ್ಚಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಹರಿಪ್ರಿಯಾ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಹರಿಪ್ರಿಯಾ ಅವರದು ಲವ್ ಮ್ಯಾರೇಜ್. ಹರಿಪ್ರಿಯಾ ಹಾಗೂ ವಸಿಸ್ಠಸಿಂಹ ಅವರು ಬಹಳ ಆಪ್ತರಾಗಿದ್ದಾರೆ. ಆಗಾಗ ಡಾನ್ಸ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತ ಇರುತ್ತಾರೆ. ಆದರೆ ಈ ಜೋಡಿ ತಾವು ಪ್ರೀತಿಯಲ್ಲಿ ಬಿದ್ದ ವಿಚಾರವನ್ನು ಮಾತ್ರ ಗುಟ್ಟಾಗಿಯೇ ಇಟ್ಟಿದ್ದರು. ಇತ್ತಿಚೆಗೆ ಮೂಗು ಚುಚ್ಚಿಸಿಕೊಳ್ಳುವ ಸಂದರ್ಭದಲ್ಲಿ ವಸಿಸ್ಠಸಿಂಹ ಅವರು ಹರಿಪ್ರಿಯಾ ಅವರ ಜೊತೆಗಿದ್ದರು. ಅಲ್ಲದೆ ಮದುವೆಗಾಗಿಯೇ ದುಬೈನಲ್ಲಿ ಶಾಪಿಂಗ್ ಕೂಡ ಮಾಡಿದ್ದಾರೆ ಎನ್ನುವ ವಿಚಾರ ಇದೀಗ ತಿಳಿದುಬಂದಿದೆ. ಹರಿಪ್ರಿಯಾ ಹಾಗೂ ವಸಿಸ್ಠಸಿಂಹ (Vasishta simha) ಅವರು ಇನ್ನು ಒಂದು ತಿಂಗಳೊಳಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ವಿಚಾರವಾಗಿ ಯಾವುದೇ ಅಧಿಕೃತ ಮಾಹಿತಿ ಇನ್ನು ಹೊರಬಿದ್ದಿಲ್ಲ.

ಹರಿಪ್ರಿಯಾ ಅವರು ಯಾವುದೇ ಗಾಡ್ ಫಾದರ್ ಸಹಾಯವಿಲ್ಲದೆ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಂತಿದ್ದಾರೆ. ಈಗ ಕನ್ನಡದ ಬ್ಯುಸಿ ಇರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಈ ಹಂತಕ್ಕೆ ಬೆಳೆಯಲು ಅವರು ತುಂಬಾನೇ ಕಷ್ಟ ಪಟ್ಟಿದ್ದಾರೆ. ಯಾರ ಸಹಾಯವೂ ಇಲ್ಲದೆ ಕೇವಲ ಪ್ರತಿಭೆ ಮೇಲೆ ಸ್ಟಾರ್ ನಟಿಯಾಗುವುದು ಎಂದರೆ ಸುಲಭದ ಮಾತಲ್ಲ. ಹರಿಪ್ರಿಯಾ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನ ಸ್ಟಾರ್ ನಟರ ಜೊತೆಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲಿಯೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ವಸಿಸ್ಠ ಸಿಂಹ ಸಹ ಕನ್ನಡ ಚಿತ್ರರಂಗದ ಅದ್ಬುತ ಪ್ರತಿಭೆ. ಇವರು ಹಿರೋ ಆಗಿದ್ದಕ್ಕಿಂತ ಹೆಚ್ಚು ವಿಲನ್ ಪಾತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಇವರ ಅಭಿನಯಕ್ಕೆ ಕನ್ನಡಿಗರು ಮನಸೋತಿದ್ದಾರೆ. 

ಈಗ ಈ ಜೋಡಿ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಅಭಿಮಾನಿಗಳು ಫುಲ್ ಸಂತಸದಲ್ಲಿ ಇದ್ದಾರೆ. ಒಳ್ಳೆಯ ಜೋಡಿ ಎಂದು ಕಮಿಂಟ್ ಮಾಡುತ್ತಿದ್ದಾರೆ. ಇನ್ನೇನಿದ್ದರೂ ಈ ಜೋಡಿಯಿಂದ ಅಧಿಕೃತವಾಗಿ ಮಾಹಿತಿ ಹೊರಬೀಳಬೇಕು ಅಷ್ಟೆ.

Comments are closed.