Jio Offers:ಹೊಸ ವರ್ಷಕ್ಕಾಗಿಯೇ ಭರ್ಜರಿ ಆಫರ್ ಬಿಡುಗಡೆಗೊಳಿಸಿದ ಜಿಯೋ: ಎಷ್ಟು ಕಡಿಮೆಗೆ ಏನೆಲ್ಲಾ ಫ್ರೀ ಸಿಗುತ್ತದೆ ಗೊತ್ತೇ??

Jio Offers:ಭಾರತದಲ್ಲಿ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ವಿಪರೀತ ಸ್ಪರ್ಧೆ ಇದೆ. ಇದು ಟೆಲಿಕಾಂ ಕ್ಷೇತ್ರವನ್ನೂ ಬಿಟ್ಟಿಲ್ಲ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಎಲ್ಲ ಟೆಲಿಕಾಂ ಕಂಪನಿಗಳು ಒಂದಲ್ಲ ಒಂದು ಹೊಸ ಯೋಜನೆ ಘೋಷಣೆ ಮಾಡುತ್ತಲೇ ಇರುತ್ತವೆ. ಇದರಲ್ಲಿ ಜಿಯೋ ಕಂಪನಿ ಒಂದು ಹೆಜ್ಜೆ ಮುಂದೆ ಇದೆ ಎಂದು ಹೇಳಬಹುದು. ಹಾಗಾಗಿಯೇ ಜಿಯೋ ಇಂದು ನಂ.1 ಸ್ಥಾನದಲ್ಲಿದೆ. ಇದನ್ನೂ ಓದಿ:Solar Stove: ಈ ಸ್ಟವ್ ಉರಿಯೋದಕ್ಕೆ ಇಂಧನವೂ ಬೇಡ, ಗ್ಯಾಸ್ ಬೇಡ ಅಷ್ಟೇ ಯಾಕೆ ವಿದ್ಯುತ್ ಕೂಡ ಬೇಡ; ಯಾವುದು ಗೊತ್ತಾ ಆ ಅಗ್ಗದ ಚಮತ್ಕಾರಿ ಒಲೆ?

ಜಿಯೋ ಸಂಸ್ಥೆಯು ಹೊಸ ವರ್ಷದ ಕೊಡುಗೆಯಾಗಿ ಹ್ಯಾಪಿ ನ್ಯೂ ಇಯರ್-2023 ಕ್ಕೆ 2023 ರೂ.ನ ಹೊಸ ಯೋಜನೆಯನ್ನು ಘೋಷಣೆ ಮಾಡಿದೆ. ಇದನ್ನು ರಿಚಾರ್ಜ್ ಮಾಡಿಸುವ ಮೊದಲು ಈ ಯೋಜನೆ ಎನೆಲ್ಲ ಸೌಲಭ್ಯಗಳನ್ನು ಒಳಗೊಂಡಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇದನ್ನೂ ಓದಿ:Smart Phone Offer: ಕ್ರಿಸ್ ಮಸ್ ಗೆ ಹೊಸ ಫೋನ್ ಗಿಪ್ಟ್ ಕೊಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್ ಆಫರ್, 17,000ರೂ. ಗಳ ಮೊಬೈಲ್ ಕೊಳ್ಳಿ ಕೇವಲ 999ರೂ. ಗಳಿಗೆ!

2023 ರ ಸ್ವಾಗತಕ್ಕಾಗಿ ಜಿಯೋ ಸಂಸ್ಥೆಯು ಘೋಷಣೆ ಮಾಡಿರುವ 2023 ರೂ.ನ ಈ ಪ್ಲಾನ್ 252 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಗ್ರಾಹಕರು ಪ್ರತಿದಿನ 2.5 ಜಿಬಿ ಇಂಟರ್ನೆಟ್, ಅನಿಯಮಿತ ಕರೆಗಳು, ಪ್ರತಿದಿನ 1೦೦ ಎಸ್ಎಂಎಸ್ ಸೌಲಭ್ಯ ಪಡೆಯಲಿದ್ದಾರೆ. ಈ ಪ್ಲಾನ್ ಅಡಿಯಲ್ಲಿ ಗ್ರಾಹಕರು ಒಟ್ಟಾರೆ 630 ಜಿಬಿ ಇಂಟರ್ನೆಟ್ ಸೌಲಭ್ಯ ಪಡೆಯಲಿದ್ದಾರೆ. ಜಿಯೋ ಇತರೆ ಪ್ರಿಪೇಯ್ಡ್ ಯೋಜನೆಗಳಂತೆ ಈ ಯೋಜನೆಯಲ್ಲಿಯೂ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಸಿನೆಮಾ ಸೇರಿದಂತೆ ಜಿಯೋನ ಎಲ್ಲ ಸೂಟ್ ಅಪ್ಲಿಕೇಶನ್ಗಳನ್ನು ಬಳಸಬಹುದು. ಆದರೆ ಈ ಪ್ಲಾನ್ನಲ್ಲಿ ನೀವು ಯಾವುದೇ ಓಟಿಟಿ ಚಂದಾದಾರಿಕೆ ಪಡೆಯಲು ಸಾಧ್ಯವಿಲ್ಲ.


2,999 ರೂ.ಗೆ ಜಿಯೋ ವಾರ್ಷಿಕ ರಿಚಾರ್ಜ್ ಪ್ಲಾನ್

2023 ರಲ್ಲಿ ನೀವು ವಾರ್ಷಿಕವಾಗಿ ಬಳಸಬಹುದಾದ 2,999 ರೂ.ನ ರಿಚಾರ್ಜ್ ಪ್ಲಾನ್ ಕೂಡ ಹಾಕಿಸಿಕೊಳ್ಳಬಹುದು. ಇದರ ವ್ಯಾಲಿಡಿಡಿ 365 ದಿನಗಳು. ಈ ಯೋಜನೆಯಲ್ಲಿಯೂ ಗ್ರಾಹಕರು ಪ್ರತಿದಿನ 2.5 ಜಿಬಿ ಇಂಟರ್ನೆಟ್, ಅನಿಯಮಿತ ಉಚಿತ ಕರೆಗಳು ಹಾಗೂ 1೦೦ ಎಸ್ಎಂಎಸ್ ಸೌಲಭ್ಯ ಪಡೆಯಲಿದ್ದಾರೆ.
749 ರೂ.ಗೆ ತ್ರೈಮಾಸಿಕ ರೀಚಾರ್ಜ್ ಪ್ಲಾನ್
ಜಿಯೋ ಸಂಸ್ಥೆ ಇತ್ತಿಚೆಗಷ್ಟೇ 9೦ ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿತ್ತು. ಈ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 2 ಜಿಬಿ ಇಂಟರ್ನೆಟ್ನಂತೆ 9೦ ದಿನದಲ್ಲಿ 180 ಜಿಬಿ ಇಂಟರ್ನೆಟ್, ಅನಿಯಮಿತ ಕರೆಗಳು, ಪ್ರತಿದಿನ 1೦೦ ಎಸ್ಎಂಎಸ್ ಸೌಲಭ್ಯ ಪಡೆಯಲಿದ್ದಾರೆ. ಇದರಲ್ಲಿಯೂ ಜಿಯೋ ಸಿನೆಮಾ, ಜಿಯೋ ಮ್ಯೂಸಿಕ್ ಸೇರಿದಂತೆ ಜಿಯೋದ ಎಲ್ಲ ಅಪ್ಲಿಕೇಶನ್ ಉಚಿತವಾಗಿ ದೊರೆಯಲಿದೆ.

ಜಿಯೋ ಬಡ ಹಾಗೂ ಕೆಳಮಧ್ಯಮ ವರ್ಗದ ಜನರ ಕೈಗೆ ಎಟುಕುವಂತಹ ಯೋಜನೆಗಳನ್ನು ಘೋಷಣೆ ಮಾಡುವುದರಿಂದ ಇಷ್ಟು ಶೀಘ್ರಗತಿಯಲ್ಲಿ ಭಾರತದಲ್ಲಿ ನಂ.1 ಸ್ಥಾನಕ್ಕೆ ಬರಲು ಸಾಧ್ಯವಾಯಿತು. ಜಿಯೋ ಸಂಸ್ಥೆ ಆರಂಭಕ್ಕೂ ಮುನ್ನ ಉಳಿದ ಟೆಲಿಕಾಂ ಕಂಪನಿಗಳು ತಮ್ಮ ಇಷ್ಟ ಬಂದ ಪ್ಲಾನ್ಗಳನ್ನು ಘೋಷಣೆ ಮಾಡಿ ಒಂದು ರೀತಿಯಲ್ಲಿ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದವು. ಜಿಯೋ ಬಂದ ನಂತರ ಆ ಟೆಲಿಕಾಂ ಕಂಪನಿಗಳು ಸಹ ಅನಿವಾರ್ಯವಾಗಿ ಕಡಿಮೆ ಬೆಲೆಯ ಪ್ಲಾನ್ ಘೋಷಣೆ ಮಾಡುವಂತೆ ಆಗಿದೆ.

Comments are closed.