Kannada Astrology: ಶುರುವಾಯಿತು ದಶಕಗಳ ನಂತರ ಮಹಾಲಕ್ಷ್ಮಿ ರಾಜಯೋಗ ಈ ನಾಲ್ಕು ರಾಶಿಯವರನ್ನು ಹುಡುಕಿಕೊಂಡು ಬರುತ್ತೆ ಹಣ – ಅಧಿಕಾರ; ರಾಜಯೋಗ ಇರುವ ಆ ರಾಶಿಗಳು ಯಾವು ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಹೊಸ ವರ್ಷ(New Year) ಅಂದರೆ 2023ರ ವರ್ಷವೂ ಬಹಳ ಮಹತ್ವವನ್ನು ಹೊಂದಿದೆ ಯಾಕಂದ್ರೆ ಈ ವರ್ಷ ಅನೇಕ ಗ್ರಹಗಳ ಚಲನೆಗಳಲ್ಲಿ ಬದಲಾವಣೆಗಳು ಆಗುತ್ತವೆ. ಶನಿ ಶುಕ್ರ ಸೂರ್ಯ ಎಲ್ಲಾ ಗ್ರಹಗಳ ಬದಲಾವಣೆ ಹಾಗೂ ಸಂಯೋಗ ಆಯಾ ರಾಶಿಗಳ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮ ಬೀರಲಿದೆ. ಈ ವರ್ಷ, ಫೆಬ್ರುವರಿ 15 ರಂದು ಶುಕ್ರನು ಉಚ್ಚ ರಾಶಿಯಾದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮಹಾಲಕ್ಷ್ಮಿ ರಾಜಯೋಗ ಆರಂಭವಾಗಲಿದೆ.  ಈ ಬದಲಾವಣೆಗಳಿಂದ ಕೆಲವು ರಾಶಿಯವರ ಜೀವನದಲ್ಲಿ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ವಾರ್ಷಿಕ ಯಾವ ನೋಡೋಣ ಬನ್ನಿ.

ಕರ್ಕಾಟಕ ರಾಶಿ

ಮಹಾಲಕ್ಷ್ಮಿ ರಾಜಯೋಗದಿಂದ ಈ ರಾಶಿಯವರಿಗೆ ಹೆಚ್ಚಿನ ಲಾಭ ಸಿಗಲಿದೆ. ಯೋಜಿತ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಇನ್ನೂ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಈ ಸಮಯದಲ್ಲಿ ಉತ್ತಮ ಸುದ್ದಿ ಕೇಳಿಸಿಕೊಳ್ಳಬಹುದು ಯಾವುದಾದರೂ ಹಳೆಯ ಹೂಡಿಕೆ ಮಾಡಿದ್ರೆ ಅದರಿಂದಲೂ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ.

ಕನ್ಯಾ ರಾಶಿ

ಮಹಾಲಕ್ಷ್ಮಿ ರಾಜಯೋಗದಿಂದ ಆರ್ಥಿಕ ಮತ್ತು ವೈವಾಹಿಕ ಜೀವನದಲ್ಲಿ ಸಾಕಷ್ಟು ಲಾಭದಾಯಕವಾಗಲಿದೆ ನಿಮ್ಮ ರಾಶಿಯಿಂದ 7ನೇ ಮನೆಯಲ್ಲಿ ಈ ಯೋಗವು ರೂಪಗೊಳ್ಳುತ್ತದೆ. ಈ ಸಮಯದಲ್ಲಿ ಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ದೊರೆಯುತ್ತದೆ ಕುಟುಂಬದ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಮಿಥುನ ರಾಶಿ

ಮಹಾಲಕ್ಷ್ಮಿ ರಾಜಯೋಗ ಮಿಥುನ ರಾಶಿಯವರ ವೃತ್ತಿ ಹಾಗೂ ವ್ಯವಹಾರದ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಈ ವರ್ಷ ಸಂಪೂರ್ಣ ಒಳ್ಳೆಯದೇ ಆಗುತ್ತದೆ ಈ ಜಾತಕದ 10ನೇ ಮನೆಯಲ್ಲಿ ಯೋಗ ರೂಪಗೊಳ್ಳುತ್ತದೆ ಹಾಗಾಗಿ ವ್ಯಾಪಾರದಲ್ಲಿ ಅನಿರೀಕ್ಷಿತ ಯಶಸ್ಸು ಕಾಣುತ್ತೀರಿ ಆದಾಯ ಇದ್ದಕ್ಕಿದ್ದ ಹಾಗೆ ಹೆಚ್ಚಾಗುತ್ತದೆ ಯಾವುದೇ ಕೋರ್ಟ್ ಕೇಸ್ ಇದ್ದರೂ ಅದರಲ್ಲಿ ಜಯ ಪಕ್ಕಾ.

ಕುಂಭ ರಾಶಿ

ಮಹಾಲಕ್ಷ್ಮಿ ರಾಜಯೋಗ ಕುಂಭ ರಾಶಿಯ ಎರಡನೇ ಮನೆಯಲ್ಲಿ ರೂಪಗೊಳ್ಳುವುದರಿಂದ ಈ ಸಮಯದಲ್ಲಿ ಕುಂಭ ರಾಶಿಯ ಜನ ಹೆಚ್ಚು ಆರ್ಥಿಕವಾಗಿ ಸಬಲರಾಗುತ್ತಾರೆ. ವ್ಯಾಪಾರದಲ್ಲಿ ಸಾಕಷ್ಟು ಲಾಭವಾಗುತ್ತದೆ. ಇನ್ನು ಹೊಸ ವಾಹನ ಖರೀದಿ ಮಾಡಲು ಯೋಚಿಸುತ್ತಿದ್ದರೆ ಇದು ಸೂಕ್ತವಾದ ಸಮಯ.

Comments are closed.