Kannada Serial: ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಕೊಟ್ಟ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ!

Kannada Serial: ಲಕ್ಷ್ಮೀ ಬಾರಮ್ಮ ಖ್ಯಾತಿಯ ಜೋಡಿ ಆಗಿರುವಂತಹ ಕವಿತಾ ಗೌಡ ಹಾಗೂ ಚಂದನ್ ಇಬ್ರು ಕೂಡ ಪ್ರೀತಿಸಿ ಮದುವೆ ಆಗಿರುವಂತಹ ವಿಚಾರ ನಿಮಗೆಲ್ಲರಿಗೂ ತಿಳಿದಿರುವುದು. ಹೋಟೆಲ್ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಒಂದಕ್ಕಿಂತ ಹೆಚ್ಚು ಹೋಟೆಲ್ ಗಳನ್ನು ಓಪನ್ ಮಾಡಿರುವುದು ಕೂಡ ನಿಮ್ಮ ಕಣ್ಣ ಮುಂದಿದೆ. ಅದಕ್ಕಿಂತಲೂ ಮಿಗಿಲಾಗಿ ಈ ದಂಪತಿಗಳು ಇಬ್ಬರು ಮೊದಲ ಬಾರಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಸುದ್ದಿಯನ್ನು ಕೇಳಿರುವಂತಹ ಇಬ್ಬರ ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.

ಗುಡ್ ನ್ಯೂಸ್ ನೀಡಿದ ಕವಿತಾ ಗೌಡ ಹಾಗೂ ಚಂದನ್ ಗೌಡ ದಂಪತಿಗಳು!

ಕವಿತಾ ಗೌಡ ಹಾಗೂ ಚಂದನ್ ಗೌಡ ಇಬ್ಬರಿಗೂ ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿ ಸಾಕಷ್ಟ್ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹಾಗೂ ಅಭಿಮಾನಿ ಬಳಗವನ್ನು ನೀಡಿದೆ. ಇವ್ರಿಬ್ರೂ ಪ್ರೀತಿಸುತ್ತಿದ್ದಾರೆ ಅನ್ನೋದು ಮದುವೆ ಆಗುವ ಸಮಯದವರೆಗೂ ಕೂಡ ಯಾರೊಬ್ಬರಿಗೂ ತಿಳಿದಿರಲಿಲ್ಲ. ಸೈಲೆಂಟ್ ಆಗಿಯೇ ಮದುವೆಯಾದ ಈ ಜೋಡಿ ತಮ್ಮ ಮದುವೆ ವಿಚಾರವನ್ನು ಕೂಡ ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿತ್ತು.

ಇದಾದ ನಂತರ ಚಂದನ್ ಗೌಡ ಅವರು ಹೋಟೆಲ್ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಕಿಚ್ಚ ಸುದೀಪ್ ರವರೆ ಈ ಹೋಟೆಲ್ಗಳನ್ನು ಬಂದು ಉದ್ಘಾಟನೆ ಮಾಡಿರುವುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ಈಗ ಸೋಶಿಯಲ್ ಮೀಡಿಯಾದಲ್ಲಿ ದಂಪತಿಗಳಿಬ್ಬರೂ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವಂತಹ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದು ಅಭಿಮಾನಿಗಳು ಪ್ರತಿಯೊಬ್ಬರೂ ಕೂಡ ಕಾಮೆಂಟ್ ನಲ್ಲಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಮದುವೆಯಾಗಿದ್ದ ಈ ದಂಪತಿ ಕೊನೆಗೂ ಗುಡ್ ನ್ಯೂಸ್ ನೀಡಿರುವುದು ಇವರ ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ.

ಹೋಟೆಲ್ ಉದ್ಯಮ ಸೇರಿದಂತೆ ನಟನೆಯಲ್ಲಿ ಕೂಡ ಚಂದನ್ ಗೌಡ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಎರಡು ದೋಣಿಯ ಮೇಲೆ ಜವಾಬ್ದಾರಿಯುತವಾಗಿ ಕಾಲಿಟ್ಟುಕೊಂಡು ಬರುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಈಗ ಆ ಜವಾಬ್ದಾರಿ ಗೆ ತಂದೆ ಆಗುವಂಥ ಜವಾಬ್ದಾರಿ ಕೂಡ ಸೇರ್ಪಡೆಯಾಗುತ್ತಿದೆ. ಕವಿತಾ ಗೌಡ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಹೊಂದಿದ್ದು ಹಾಗಾಗ ತಮ್ಮ ವೈಯಕ್ತಿಕ ಜೀವನದ ಕುರಿತಂತೆ ಹಾಗೂ ಕೆಲವೊಂದು ಸಂತೋಷದ ಘಟನೆಗಳನ್ನು ಫೋಟೋ ಹಾಗೂ ವಿಡಿಯೋದ ಮುಖಾಂತರ ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಕವಿತಾ ಗೌಡ ಹಂಚಿಕೊಳ್ಳುತ್ತಿರುತ್ತಾರೆ. ಇದೇ ರೀತಿಯಲ್ಲಿ ಈಗ ತಮ್ಮ ಜೀವನದ ಪ್ರಮುಖ ಘಟನೆಯನ್ನು ಕೂಡ ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Comments are closed.