Rocking Star Yash: ಇಷ್ಟು ವರ್ಷದ ನಂತ್ರ ಕಡೆಗೂ ಒಲಿತು ಈ ನಟಿಗೆ ಅದೃಷ್ಟ; ಯಶ್ ನಟನೆಯ ಟಾಕ್ಸಿಕ್ ಸಿನಿಮಾಕ್ಕೆ ಬೆಂಗಳೂರಿನ ಈ ಹುಡುಗಿನೇ ನಾಯಕಿಯಂತೆ!

Rocking Star Yash: ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ನಟ ಆಗಿರುವಂತಹ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಸಿನಿಮಾವನ್ನ ಮಲಯಾಳಂ ಚಿತ್ರರಂಗದ ನಿರ್ದೇಶಕಿ ಆಗಿರುವಂತಹ ಇದು ಗೀತು ಮೋಹನ್ ದಾಸ್ ರವರು ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಪ್ಡೇಟ್ಗಳು ಗಾಳಿ ಸುದ್ದಿಯ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.

ಇತ್ತೀಚಿಗಷ್ಟೇ ಈ ಸಿನಿಮಾದಿಂದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಕರೀನಾ ಕಪೂರ್ ಅವರು ಹೊರಗೆ ಹೋಗಿದ್ದಾರೆ ಎಂಬುದಾಗಿ ಸುದ್ದಿ ಕೇಳಿ ಬಂದಿತ್ತು. ಆದರೆ ಈಗ ಕೇಳಿ ಬಂದಿರುವಂತಹ ಮತ್ತೊಂದು ಸುದ್ದಿಯಲ್ಲಿ ನಾಯಕಿಯ ಬದಲಾವಣೆ ಆಗ್ತಿದೆ ಎಂಬುದಾಗಿ ಕೇಳಿ ಬಂದಿದ್ದು ಬನ್ನಿ ಇದರ ಬಗ್ಗೆ ಸುದ್ದಿಯನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ರಾಕಿ ಭಾಯ್ ಗೆ ಮುಂದಿನ ಸಿನಿಮಾದಲ್ಲಿ ಬೆಂಗಳೂರಿನ ಮೂಲದ ನಾಯಕಿ!

ಕೆಜಿಎಫ್ ಚಾಪ್ಟರ್ 2 ಸಿನಿಮಾದ ಬಿಡುಗಡೆಯಾಗಿ ಎರಡು ವರ್ಷದ ನಂತರ ಟಾಕ್ಸಿಕ್ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಲಾಗಿದ್ದು ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಅಭಿಮಾನಿಗಳಲ್ಲಿದೆ. ಕೆಜಿಎಫ್ ಸೀರೀಸ್ ಮೂಲಕ ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಹಾಗೂ ವಿದೇಶಗಳಲ್ಲಿ ಕೂಡ ದೊಡ್ಡ ಮಟ್ಟದ ಮಾರ್ಕೆಟ್ ವ್ಯಾಲ್ಯೂ ಹೊಂದಿದ್ದಾರೆ ಹೀಗಾಗಿ ಅವರ ಮುಂದಿನ ಸಿನಿಮಾ ಅಂದ್ರೆ ಟಾಕ್ಸಿಕ್ ಸಾಕಷ್ಟು ನಿರೀಕ್ಷೆ ಹಾಗೂ ಬೇಡಿಕೆಯನ್ನು ಹೊಂದಿರುತ್ತದೆ ಅನ್ನೋದನ್ನ ನೀವೆಲ್ಲರೂ ತಿಳಿದುಕೊಳ್ಳಬೇಕಾಗಿರುತ್ತದೆ.

ಕಿಯಾರಾ ಅದ್ವಾನಿ ಅವರನ್ನು ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು ಎಂಬುದಾಗಿ ಇತ್ತೀಚಿಗಷ್ಟೇ ತಿಳಿದು ಬಂದಿತ್ತು. ಆದರೆ ಈಗ ಕೇಳಿ ಬರುತ್ತಿರುವಂತಹ ಲೇಟೆಸ್ಟ್ ಸುದ್ದಿಗಳ ಪ್ರಕಾರ ಸಿನಿಮಾಗೆ ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ಸ್ಟಾರ್ ಆಗಿರುವ ನಯನತಾರಾ ಅವರು ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸಿನಿಮಾ ತಂಡ ಅವರನ್ನು ಈ ಬಗ್ಗೆ ಅಪ್ರೋಚ್ ಮಾಡಿದೆ ಎನ್ನುವ ಮಾಹಿತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿ ಕಂಡು ಬರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಟಾಕ್ಸಿಕ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಬಂಡವಾಳದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು ರಾಕಿಂಗ್ ಸ್ಟಾರ್ ಯಶ್ ಕೂಡ ಸಿನಿಮಾದ ಸಹ ನಿರ್ಮಾಪಕರಾಗಿದ್ದಾರೆ.

ಹೀಗಾಗಿ ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರಲಿದೆ ಹಾಗೂ ಎಷ್ಟು ಕಲೆಕ್ಷನ್ ಮಾಡಲಿದೆ ಎನ್ನುವ ಬಗ್ಗೆ ನಿರೀಕ್ಷಿಗಳು ಹೆಚ್ಚಾಗಿವೆ. ಈಗಾಗಲೇ ಕನ್ನಡ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕರೆದೊಯ್ಯುವಂತಹ ಸಿನಿಮಾವನ್ನು ನೀಡಿರುವಂತಹ ಯಶ್ ಈ ಸಿನಿಮಾದ ಮೂಲಕ ಅದೇ ಕೆಲಸ ಮಾಡ್ತಾರೆ ಅನ್ನೋದೇ ಪ್ರತಿಯೊಬ್ಬರ ನಂಬಿಕೆಯಾಗಿದೆ.

Comments are closed.