Vishnu Dada: ವಿಷ್ಣುವರ್ಧನ್ ನಾನ್ ವೆಜ್ ತಿನ್ನೋಕೆ ಸ್ಟಾರ್ಟ್ ಮಾಡೋದಕ್ಕೆ ನಿಜವಾದ ಕಾರಣ ಯಾರು ಗೊತ್ತಾ? ನಂಬೋದಕ್ಕೇ ಸಾಧ್ಯ ಇಲ್ಲ ನೋಡಿ!

Vishnu Dada: ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪಂಚಭಾಷೆಗಳಲ್ಲಿ ಕೂಡ 200 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವಂತಹ ನಮ್ಮ ಹೆಮ್ಮೆಯ ಕಲಾವಿದ ಅಂದ್ರೆ ಅದು ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರು. ಸಾಕಷ್ಟು ಪಾರಭಾಷೆಗಳಲ್ಲಿ ಅವಕಾಶ ಹುಡುಕಿಕೊಂಡು ಬಂದರೂ ಕೂಡ ನಮ್ಮ ವಿಷ್ಣುವರ್ಧನ್ ರವರು ಕನ್ನಡ ಭಾಷೆಯನ್ನು ಬಿಟ್ಟು ಹೋಗಲಿಲ್ಲ ಕೇವಲ ಅಲ್ಲಿ ಹೋಗಿ ನಟನೆ ಮಾಡಿ ಬಂದಿದ್ದರು. ಈ ಮೂಲಕ ಕನ್ನಡ ಚಿತ್ರರಂಗದ ಬಾವುಟವನ್ನು ಬೇರೆ ಭಾಷೆಗಳಲ್ಲಿ ಕೂಡ ನೆಟ್ಟು ಬರುವಂತಹ ಕೆಲಸವನ್ನು ಆ ಕಾಲದಲ್ಲಿಯೇ ಅವರು ಮಾಡಿದರು. ಕನ್ನಡ ಭಾಷೆಯ ಹಾಗೂ ಕನ್ನಡ ಸಿನಿಮಾದ ಗತ್ತನ್ನು ಬೇರೆ ಭಾಷೆಯಲ್ಲಿ ಕೂಡ ಪಸರಿಸಿದಂತಹ ಪ್ರತಿಭೆ ಅವರು.

ಇನ್ನೊಂದು ಪ್ರಮುಖ ಹಾಗೂ ವಿಶೇಷವಾದ ವಿಚಾರ ಅಂತ ಅಂದ್ರೆ ವಿಷ್ಣುವರ್ಧನ್ ರವರು ಚಿಕ್ಕವಯಸ್ಸಿನಿಂದಲೇ ಚಿಕನ್ ಅನ್ನು ಸೇವಿಸಿಕೊಂಡು ಬರ್ತಾ ಇದ್ರು ಆದರೆ ಅವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರಾಗಿದ್ದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕಾಗಿರುವಂತಹ ರಾಜೇಂದ್ರ ಸಿಂಗ್ ಬಾಬು ಅವರು ವಿಷ್ಣುವರ್ಧನ್ ರವರ ಬಾಲ್ಯದ ಗೆಳೆಯರಾಗಿದ್ದರು. ಹೀಗಾಗಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು ಕೆಲವೊಂದು ಮಾಹಿತಿಗಳನ್ನು ಕೂಡ ಅವರು ಹೊರ ಹಾಕಿದ್ದಾರೆ. ಚಿಕ್ಕಂದಿನಿಂದಲೆ ನಮ್ಮ ಮನೆಗೆ ಬಂದಾಗ ಚಿಕನ್ ತಿನ್ನುತ್ತಿದ್ದ ಆದರೆ ಅವರಪ್ಪ ಬೇಡ ಅಂದ್ರು ಕೂಡ ಹಠ ಮಾಡಿ ತಿನ್ನುತ್ತಿದ್ದ. ಅದಾದ್ಮೇಲೆ ಭಾರತೀಯ ಅವರನ್ನು ಮದುವೆಯಾದ ಮೇಲೆ ಅವರು ಚೆನ್ನಾಗಿ ಫಿಶ್ ಸೇರಿದಂತೆ ಮಾಂಸಹಾರ ಅಡುಗೆ ಚೆನ್ನಾಗಿ ಮಾಡುತ್ತಿದ್ದರು ನಾವೆಲ್ಲರೂ ಹೋಗಿ ಊಟ ಮಾಡುತ್ತಿದ್ವಿ ಅನ್ನೋದನ್ನ ಕೂಡ ರಾಜೇಂದ್ರ ಸಿಂಗ್ ಬಾಬು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ.

ಅವರು ಹೇಳುವ ಪ್ರಕಾರ ಆರು ತಿಂಗಳ್ಗಳ ಕಾಲ ವಿಷ್ಣುವರ್ಧನ್ ರವರು ಮಾಂಸಹರ ಸೇವನೆ ಮಾಡಿದರೆ ಉಳಿದ ಸಮಯ ಅವರು ಮಾಂಸಹಾರವನ್ನು ಸಂಪೂರ್ಣವಾಗಿ ತ್ಯಜಿಸುತ್ತಿದ್ದರು ಎಂಬುದಾಗಿ ಕೂಡ ಹೇಳ್ತಾರೆ. ತಮ್ಮ ಫಿಟ್ನೆಸ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಕೊಂಡು ಚಾಕ್ಲೇಟ್ ಹೀರೋ ರೀತಿಯಲ್ಲಿ ಮಹಿಳೆಯರ ನೆಚ್ಚಿನ ಹೀರೋ ಆಗಿ ಕೂಡ ವಿಷ್ಣುವರ್ಧನ್ ಕಾಣಸಿಕೊಂಡಿರುವುದನ್ನ ನೆನಪಿಸಿಕೊಳ್ಳುವಂತಹ ರಾಜೇಂದ್ರಸಿಂಗ್ ಬಾಬು ಕೆಲವು ಸಿನಿಮಾಗಳಲ್ಲಿ ವಿಷ್ಣುವರ್ಧನ್ ರವರು ಮಾಂಸಹಾರವನ್ನು ಸೇವಿಸುವಂತಹ ದೃಶ್ಯಗಳಲ್ಲಿ ನಟಿಸಿರುವುದನ್ನು ಕೂಡ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತಾರೆ.

ತಮ್ಮ ಕೊನೆಯ ದಿನಗಳಲ್ಲಿ ಸಂಪೂರ್ಣವಾಗಿ ಆಧ್ಯಾತ್ಮಿಕದ ಕಡೆಗೆ ಮುಖ ಮಾಡುವಂತಹ ವಿಷ್ಣುವರ್ಧನ್ ರವರು ಎಲ್ಲವನ್ನು ಕೂಡ ಸಂಪೂರ್ಣವಾಗಿ ತ್ಯಜಿಸುತ್ತಾರೆ ಎಂಬುದು ಕೂಡ ಇಲ್ಲಿ ತಿಳಿದು ಬರುತ್ತದೆ. ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಕಲಾವಿದರಲ್ಲಿ ವಿಷ್ಣುವರ್ಧನ್ ರವರು ಖಂಡಿತವಾಗಿ ಸದಾ ಕಾಲ ಚಿರಸ್ಥಾಯಿ ಆಗಿರುತ್ತಾರೆ. ನಿನ್ನೆಯಷ್ಟೇ ಅವರ 74ನೇ ಜನ್ಮದಿನದ ಸ್ಮರಣೆ ನಡೆದಿದೆ. ಅವರನ್ನು ಅಭಿಮಾನಿಗಳು ಅವರ ವಿಶೇಷ ದಿನದ ಸಂದರ್ಭದಲ್ಲಿ ಆರಾಧಿಸುವಂತಹ ಅಭಿಮಾನಿ ಸ್ಟುಡಿಯೋದಲ್ಲಿ ಈಗ ಹೊಸ ವಿವಾದ ಪ್ರಾರಂಭವಾಗಿದ್ದು ಕನ್ನಡ ಚಿತ್ರರಂಗದಲ್ಲಿ ಮತ್ತೆ ಈ ವಿಚಾರದಲ್ಲಿ ಚರ್ಚೆಗಳು ಪ್ರಾರಂಭ ಆಗುವಂತಹ ಸೂಚನೆ ಕಂಡುಬರುತ್ತಿದೆ.

Comments are closed.