Cricket News:ಟಿ20 ವಿಶ್ವಕಪ್ ನಲ್ಲಿ ಸೋಲು ಕಂಡ ಬಳಿಕ ಈಗಲಾದರೂ ಒಳ್ಳೆಯ ನಿರ್ಧಾರ ತೆಗೆದುಕೊಂಡ್ರಲ್ಲ; ಟಾಪ್ 5 ಆಟಗಾರರು ತಂಡದಿಂದ ಹೊರಕ್ಕೆ ಯಾರ್ಯಾರು ಗೊತ್ತೇ??

Cricket News: ಭಾರತ ತಂಡ ವಿಶ್ವಕಪ್ ಟಿ 20ಯಲ್ಲಿ(T20 World Cup 2022) ಸೆಮಿ ಫೈನಲ್ (semi-final)  ಹಂತದವರೆಗೆ ತಲುಪಿ ಇಂಗ್ಲೆಂಡ್ (England)ವಿರುದ್ಧ ಹೀನಾಯ ಸೋಲನ್ನ ಕಂಡು ಮನೆಗೆ ಮರಳಿತು ಇದು ಸಿಕ್ಕಾಪಟ್ಟೆ ಚರ್ಚೆಗೆ ಗ್ರಹಸವಾಗಿತ್ತು ಅಲ್ಲದೆ ಕ್ರಿಕೆಟ್ ಅಭಿಮಾನಿಗಳು ಭಾರತ ತಂಡದ ವಿರುದ್ಧ ಕಿಡಿ ಕಾರಿದ್ದಾರೆ. ಸಮರ್ಥವಾದ ಪ್ಲೇಯರ್ಸ್ (Players)  ಅನ್ನು ಇಟ್ಕೊಂಡು ಆಟ ಆಡಲ್ಲ ಅಂತ ಚೀಮಾರಿ ಹಾಕಿದ್ರು. ಇದೆಲ್ಲವನ್ನ ಗಮನಿಸಿದ ಬಿಸಿಸಿಐ(BCCI) ಇದೀಗ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ.

ಹೌದು ಬಿಸಿಸಿಐ ಆಯ್ಕೆ ಮಾಡಿದ 11 ಪ್ಲೇಯಿಂಗ್ ನಲ್ಲಿ ಯಾರು ಸಮರ್ಥವಾಗಿ ಇಲ್ಲ ಎನ್ನುವ ಮಾತುಗಳು ಈಗಾಗಲೇ ಕೇಳಿ ಬರುತ್ತಿವೆ. ಸ್ಕಿನ್ ಮಾಂತ್ರಿಕ ಯಜುವೇಂದ್ರ ಚಾಹಲ್ (Yazuvendra Chahal) ಅವರಿಗೆ ಆಟ ಆಡೋದಕ್ಕೆ ಸರಿಯಾದ ಅವಕಾಶ ಸಿಕ್ಕಿಲ್ಲ. ಒಂದು ವರ್ಷದಿಂದ ರವಿಚಂದ್ರನ್ (Ravichandran ashvin) ಅಶ್ವಿನ್ ಮತ್ತು ಮೊಹಮ್ಮದ್ ಶಮಿ (Mohammad shami) ಅವರಿಗೂ ಕೂಡ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವುದಕ್ಕೆ ಅವಕಾಶ ನೀಡಿಲ್ಲ. ಇನ್ನು ಟಿ ಟ್ವೆಂಟಿ ಮ್ಯಾಚ್ ನಲ್ಲಿ ಮುಂದೆ ಯಾವ ಆಟಗಾರರು ತಂಡದಿಂದ ಹೊರಗೆ ಉಳಿಯಬಹುದು ಎನ್ನುವ ಚರ್ಚೆ ಶುರುವಾಗಿದೆ ಈಗಾಗಲೇ ಈ ಐದು ಹೆಸರುಗಳು ಕೇಳಿಬಂದಿದೆ.

ಅಕ್ಷರ್ ಪಟೇಲ್: (Akshr Patel) ರವೀಂದ್ರ ಜಡೆಜಾ ಅವರಿಗೆ (Ravindra Jadeja) ಗಾಯ ವಾದ ನಂತರ ಅಕ್ಷಯ್ ಪಟೇಲ್ ಅವರನ್ನ ಟೀಮ್ ಇಂಡಿಯಾಕೆ ಸೇರಿಸಿಕೊಳ್ಳಲಾಗಿತ್ತು ಆಸ್ಟ್ರೇಲಿಯಾ (australia)  ಸೀರೀಸ್ ನಲ್ಲಿ ಎಂಟು ವಿಕೆಟ್ ಪಡೆದು 6.30 ಏಕಾನಮಿಯಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದರು. ಅದೇ ಟಿ20 ವಿಶ್ವಕಪ್ ನಲ್ಲಿ ಮಾತ್ರ ಕಳಪೆ ಪ್ರದರ್ಶನ ನೀಡಿದ್ದಾರೆ ಕೇವಲ ಮೂರು ವಿಕೆಟ್ ಪಡೆದಿದ್ದು ಬ್ಯಾಟಿಂಗ್ ನಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ ಹಾಗಾಗಿ ಮುಂದಿನ ನ್ಯೂಜಿಲ್ಯಾಂಡ್ (New Zealand) ಸೀರೀಸ್ ನಲ್ಲಿ ಇವರಿಗೆ ಅವಕಾಶ ನೀಡುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ ಬಹುಶಃ ಅಕ್ಷಯ ಪಟೇಲ್ ಅವರ ಕರಿಯರ್ ಇಲ್ಲಿಗೆ ಮುಗಿಯಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: T20 World Cup:ವಿಶ್ವಕಪ್ ಸೋಲಿಗೆ ಇವರೇ ಕಾರಣ ಮೊದಲು ಅವರನ್ನು ತಂಡದಿಂದ ಹೊರಹಾಕಿ ಎಂದ ಫ್ಯಾನ್ಸ್; ಕ್ರಿಕೆಟ್ ಪ್ರೇಮಿಗಳ ವಿಮರ್ಶೆ ಹೇಗಿದೆ ಗೊತ್ತೇ?

ಮೊಹಮ್ಮದ್ ಶಮಿ: ಮೊಹಮ್ಮದ್ ಶಮಿ(Mohammad shami) ಯನ್ನು ಕೂಡ ಜಸ್ಪ್ರಿತ ಬುಮ್ರ (Jaspreet bumrah) ಅವರಿಗೆ ಇಂಜುರಿ ಆದ ಕಾರಣ ಬಿಸಿಸಿಐ ಸೆಲೆಕ್ಟ್ ಮಾಡಿದ್ದು ಇವರು ಕೂಡ ಮೊನ್ನೆ ನಡೆದ ವಿಶ್ವಕಪ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಒಂದು ವರ್ಷದ ಬಳಿಕ ಮತ್ತೆ ಕಂಬ್ಯಾಕ್ ಮಾಡಿದ್ದ ಶಮಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಯನ್ನು ಹೊಸಿ ಮಾಡಿದ್ರು ಹಾಗಾಗಿ ಅವರನ್ನು ಮುಂದಿನ ಟೂರ್ನಿಂದ ದೂರ ಇಡುವ ಸಾಧ್ಯತೆ ಇದೆ.

ದಿನೇಶ್ ಕಾರ್ತಿಕ್(Denesh Kartik) ನ್ಯಾಷನಲ್ ಟೀಮ್ (National Team)  ನಿಂದ ದೂರ ಇರುವ ದಿನೇಶ್ ಕಾರ್ತಿಕ್ ಅವರನ್ನ ಐಪಿಎಲ್ ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಕಾರಣಕ್ಕಾಗಿ ಮತ್ತೆ ಆಯ್ಕೆ ಮಾಡಲಾಗಿತ್ತು ರ್‌ಸಿಬಿ ಪರವಾಗಿ ಆಡಿದ ದಿನೇಶ್ ಕಾರ್ತಿಕ್ 330 ರನ್ ಗಳನ್ನು ಐಪಿಎಲ್ ನಲ್ಲಿ ಪಡೆದಿದ್ದರು ಆದರೆ ವಿಶ್ವಕಪ್ ನಲ್ಲಿ ಮಾತ್ರ ದಿನೇಶ್ ಕಾರ್ತಿಕ್ ಆಟ ಅತ್ಯಂತ ಗಳಿಸಿದರು ಹಾಗಾಗಿ ಮುಂದಿನ ಟೂರ್ನಿಯಿಂದಲೂ ಕೂಡ ಇವರನ್ನ ಹೊರಗೆ ಇಡುವ ಸಾಧ್ಯತೆ ಹೆಚ್ಚಾಗಿ ಕೇಳಿ ಬರುತ್ತಿದೆ.

ರೋಹಿತ್ ಶರ್ಮಾ: (Rohit Sharma) ಒಬ್ಬ ಕ್ಯಾಪ್ಟನ್ (captain) ಆಗಿ ಭಾರತ ತಂಡದಲ್ಲಿ ಉತ್ತಮ ಇಂಡಿಂಗ್ಸ್ ಆಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ ಈ ಹಿಂದೆ ಟಿ 20 ಪಂದ್ಯದಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ರೋಹಿತ್ ಈ ವರ್ಷ ಮಾತ್ರ ಟಿ20 ವಿಶ್ವಕಪ್ ನಲ್ಲಿ ಅತ್ಯಂತ ನೀರಸ ವಾಗಿ ಆಟ ಆಡಿದ್ದಾರೆ. ಆರು ಪಂದ್ಯಗಳಲ್ಲಿ ಕೇವಲ 116 ಗಳಿಸಿ ಕಳಪೆ ಪ್ರದರ್ಶನ ನೀಡಿದ್ದಾರೆ. ಇದೀಗ ರೋಹಿತ ಶರ್ಮಾ ಅವರನ್ನು ಕೂಡ ತಂಡದಿಂದ ಹೊರಗಿಡಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.

ರವಿಚಂದ್ರನ್ ಅಶ್ವಿನ್: (Ravichandran Ashwin)  ಲೆಜೆಂಡ್ ಆಟಗಾರ ರವಿಚಂದ್ರನ್ ಅಶ್ವಿನಿ ಟಿ20 ಮಾತ್ರ ಉತ್ತಮ ಪ್ರದರ್ಶನ ನೀಡಲಿಲ್ಲ ಅವರನ್ನು ಸೆಲೆಕ್ಟ್ ಮಾಡಿದ್ದೀವೋ ಎನ್ನುವಷ್ಟು ನೀರಸವಾಗಿ ಅಡಿದ್ರು. ವಿಶ್ವ ಕಪ್ ಟಿ ಟ್ವೆಂಟಿಯಲ್ಲಿ ಅಶ್ವಿನ್ ಪಡೆದಿದ್ದು ಕೇವಲ ಆರು ವಿಕೆಟ್ ಗಳು ಇವರ ಈ ಸೋಲು ಮುಂದಿನ ಪಂದ್ಯಗಳಿಂದ ಇವರನ್ನು ಹೊರಗೆ ಇಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನೂ ಓದಿ: https://karunaadavaani.com/index.php/2022/11/12/cricket-news-bcci-will-make-changes-in-team-india/

Comments are closed.