Kannada Astrology: ಅಬ್ಬಾ ಕೊನೆಗೂ ಶುರುವಾಗುತ್ತಿದೆ ಲಕ್ಷ್ಮಿ ನಾರಾಯಣ ಯೋಗ; ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಅದೃಷ್ಟ ಇನ್ನು ಶುರು!

Kannada Astrology: ಪ್ರತಿ ತಿಂಗಳು ಒಂದಲ್ಲ ಒಂದು ಗ್ರಹ ತನ್ನ ರಾಶಿಯಿಂದ ಬೇರೆ ರಾಶಿಗೆ ಪಥ ಬದಲಾವಣೆ ಆಗುತ್ತೆ ಅನ್ನೋದು ಜ್ಯೋತಿಷ ಶಾಸ್ತ್ರದಲ್ಲಿಯೂ ಕೂಡ ಹೇಳಲಾಗಿದೆ. ಗ್ರಹಗಳ ಈ ಬದಲಾವಣೆ ಜಗತ್ತಿನಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ಅದರಲ್ಲಿಯೂ ಜನರ ಜೀವನದ ಮೇಲೆ ವಿಶೇಷವಾದ ಪ್ರಭಾವವನ್ನು ಬೀರಬಹುದು. ಜ್ಯೋತಿ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿ ಪ್ರತಿಯೊಂದು ಗ್ರಹಗಳಿಗೆ ಸಂಬಂಧಿಸಿದ ಫೆಬ್ರುವರಿ 2023ರಲ್ಲಿ ಕೆಲವು ಗ್ರಹಗಳು ತಮ್ಮ ಮತವನ್ನು ಬದಲಾಯಿಸುತ್ತವೆ. ಈ ಗ್ರಹಗಳ ಪಥ ಬದಲಾವಣೆಯಿಂದ ಕುಂಭ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗ ಆಗಲಿದೆ. ಇದರಿಂದ ಲಕ್ಷ್ಮೀನಾರಾಯಣ ರಾಜಯೋಗ ರೂಪಗೊಳ್ಳಲಿದೆ ಎಂದು ವೈದಿಕ ಜ್ಯೋತಿ ಶಾಸ್ತ್ರ ಹೇಳುತ್ತದೆ. ಈ ರೀತಿ ರಾಜಯೋಗ ರೂಪಗೊಂಡಾಗ ಕೆಲವು ರಾಶಿಗಳ ಮೇಲೆ ಉತ್ತಮವಾದ ಪರಿಣಾಮ ಬೀರಲಿದೆ ಅದರಲ್ಲೂ ಈ ಮೂರು ರಾಶಿಗಳ ಜಾತಕದವರು ಮಾತ್ರ ಇನ್ನು ಮುಂದೆ ಬರಿಯ ಒಳ್ಳೆಯ ದಿನಗಳನ್ನು ನೋಡುತ್ತಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವವು ನೋಡೋಣ ಬನ್ನಿ.

ವೃಶ್ಚಿಕ ರಾಶಿ;

ಈ ರಾಶಿಯ 4ನೇ ಭಾಗದಲ್ಲಿ ಅಂದ್ರೆ ಚತುರ್ಥ ಭಾವದಲ್ಲಿ ಲಕ್ಷ್ಮಿ ನಾರಾಯಣ ರಾಜಯೋಗ ರೂಪಗೊಳ್ಳಲಿದೆ. ಚತುರ್ಥ ಭಾವ ದೈಹಿಕ ಸಂತೋಷಕ್ಕೆ ಹೆಸರಾಗಿರುವಂತದ್ದು ಹಾಗಾಗಿ ಈ ರಾಶಿಯವರಿಗೆ ಈ ಯೋಗವು ವಿಶೇಷ ಫಲವನ್ನು ನೀಡಲಿದೆ ಇಂಥವರಿಗೆ ತಾಯಿ ಬೆಂಬಲ ಸಿಗುತ್ತೆ ಹಣದ ವಿಷಯದಲ್ಲಿ ಅಂತೂ ಸಾಕಷ್ಟು ಲಾಭವಿದೆ ಇನ್ನು ಸಂಗಾತಿಯೊಂದಿಗೆ ದೈಹಿಕ ಸಂತೋಷ ಕೂಡ ಸಿಗುತ್ತದೆ ಆಸ್ತಿ ಹಾಗು ವಾಹನ ಖರೀದಿಸುವ ಸಾಧ್ಯತೆ ಹೆಚ್ಚು.

ಸಿಂಹ ರಾಶಿ;

ಬುಧ ಹಾಗೂ ಶುಕ್ರನ ಸಂಯೋಗದಿಂದ ರೂಪಗೊಳ್ಳುವ ಲಕ್ಷ್ಮೀನಾರಾಯಣ ರಾಜಯೋಗ ಸಿಂಹ ರಾಶಿಯವರಿಗೆ ವಿಶೇಷವಾದ ಫಲವನ್ನು ನೀಡುತ್ತದೆ. ಈ ರಾಶಿಯ ಸಪ್ತಮ ಭಾವದಲ್ಲಿ ರಾಜಯೋಗ ರೂಪಗೊಳ್ಳುತ್ತದೆ ಇದನ್ನ ವೈವಾಹಿಕ ಜೀವನ ಮತ್ತು ಪಾಲುದಾರಿಕೆಯ ಭಾವ ಎಂದು ಪರಿಗಣಿಸಬಹುದು. ಅಂದರೆ ಉದ್ಯೋಗಿಗಳು ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಬಹುದು. ಅದೇ ರೀತಿಯಾಗಿ ಪಾಲುಗಾರಿಕೆ ವ್ಯವಹಾರ ಮಾಡಿದರೂ ಕೂಡ ಸಾಕಷ್ಟು ಉತ್ತಮ ಲಾಭವನ್ನು ಗಳಿಸುತ್ತೀರಿ.

ಮಿಥುನ ರಾಶಿ;

ನವಮ ಭಾಗದಲ್ಲಿ ಲಕ್ಷ್ಮೀನಾರಾಯಣ ರಾಜಯೋಗ ರೂಪಗೊಳ್ಳುತ್ತೇವೆ ಎಂದು ಹೇಳಲಾಗುತ್ತೆ ಇದರ ಅರ್ಥ ಅದೃಷ್ಟ ಮತ್ತು ವಿದೇಶಿ ಸ್ಥಳ. ಅಂದರೆ ಈ ರಾಶಿಯವರಿಗೆ ಅತ್ಯುತ್ತಮ ದಿನಗಳು ಮುಂದೆ ಬರಲಿವೆ. ಉದ್ಯೋಗ ಮಾಡುತ್ತಿರುವವರಿಗೆ ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಭಡ್ತಿ ಒದಗಿ ಬರಲಿದೆ. ಇನ್ನು ಮಿಥುನ ರಾಶಿಯವರು ಯಾವ ಕೆಲಸಕ್ಕೆ ಕೈ ಹಾಕಿದರು ರಾಜಯೋಗ ಎನ್ನುವಂತೆ ಯಶಸ್ಸನ್ನ ಪಡೆಯುತ್ತಾರೆ. ಸರ್ಕಾರಿ ಉದ್ಯೋಗಗಳಿಗಾಗಿ ತಯಾರಿ ನಡೆಸುತ್ತಿದ್ದರೆ ಉದ್ಯೋಗ ಸಿಗುವ ಸಾಧ್ಯತೆ ಇದೆ.

Comments are closed.