Karnataka Politics: ಒಂದು ಕಡೆ CM ಕುರ್ಚಿಗಾಗಿ ಕಿತ್ತಾಡುತ್ತಿರುವ ಡಿಕೆ ಹಾಗೂ ಸಿದ್ದು ನಡುವೆ ಮತ್ತೊಂದು ಬಿಗ್ ವಾರ್: ಈ ಬಾರಿ ಯಾವ ವಿಚಾರಕ್ಕೆ ಗೊತ್ತೇ??

Karnataka Politics: ಇನ್ನೇನು ಎರಡು ತಿಂಗಳಳೊಳಗೆ ಕರ್ನಾಟಕ ವಿಧಾನಸಭಾ ಚುನಾವಣೆ (Karnataka assembly election) ಘೋಷಣೆಯಾಗುತ್ತದೆ. ಹಾಗಾಗಿ ರಾಜಕೀಯ ಪಕ್ಷಗಳು (Political Party) ಈಗಾಗಲೇ ತಮ್ಮ ತಾಲೀಮನ್ನು ಆರಂಭಿಸಿವೆ. ಪಾದಯಾತ್ರೆ, ರಥಯಾತ್ರೆ, ಬಸ್ ಯಾತ್ರೆ, ಸಮಾವೇಶಗಳ ಮೂಲಕ ಜನರ ಮನಸ್ಸು ಗೆಲ್ಲಲು ಶತಪ್ರಯತ್ನ ಆರಂಭಿಸಿವೆ. ಈ ನಡುವೆ ಕಾಂಗ್ರೆಸ್ನಲ್ಲಿ (Congress) ಸಿಎಂ (CM) ಖುರ್ಚಿಗಾಗಿ ಸಿದ್ದರಾಮಯ್ಯ (siddaramaiah) ಹಾಗೂ ಡಿ.ಕೆ.ಶಿವಕುಮಾರ್ (DK Shivkumar) ನಡುವೆ ಫೈಟ್ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಇದೀಗ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಈ ನಾಯಕರು ಒಳಗಿಂದ ಒಳಗೆ ಕಿತ್ತಾಡಲು ಶುರು ಮಾಡಿದ್ದಾರೆ ಎನ್ನುವುದು ತಿಳಿದುಬಂದಿದೆ. ಇದು ಕಾಂಗ್ರೆಸ್ ಹೈಕಮಾಂಡ್ಗೆ ತಲೆನೋವಾಗಿ ಪರಿಣಮಿಸಿದೆ.
ವಿಧಾನಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ (Ticket) ಫೈಟ್ ತಾರಕಕ್ಕೇರಿದೆ. ಅದರಲ್ಲೂ ಪ್ರಮುಖವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಹೋರಾಟ ಜೋರಾಗಿಯೇ ನಡೆದಿದೆ. ಫೆ.೨ರಂದು ನಡೆಯುವ ಚುನಾವಣಾ ಸಮಿತಿ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕಾದುನೋಡಬೇಕಾಗಿದೆ. ಇದನ್ನೂ ಓದಿ: Cricket News: ಕೊಹ್ಲಿ ಮೂರನೇ ಕ್ರಮಾಂಕದ ಅಧಿಪತ್ಯ ಮುಗಿಯಿತೇ?? ಈತನಿಗಾಗಿ ಸ್ಥಾನ ಬಿಟ್ಟುಕೊಡಿ ಎಂದ ಸಂಜಯ್: ಕೊಹ್ಲಿ ತ್ಯಾಗ ಯಾರಿಗೆ ಮಾಡಬೇಕಂತೆ ಗೊತ್ತೇ?

ಇಷ್ಟು ದಿನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಯಾರಾಗುತ್ತಾರೆ ಎಂಬ ವಿಚಾರಕ್ಕಾಗಿ ಭಿನ್ನಾಭಿಪ್ರಾಯ ಇತ್ತು. ಕಾಂಗ್ರೆಸ್ನ ವರಿಷ್ಟ ನೇತಾರ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ ಈ ವಿಚಾರ ಸ್ವಲ್ಪ ತಣ್ಣಗಾದಂತೆ ಕಾಣಿಸುತ್ತಿದೆ. ತಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷ ಸಂಘಟನೆಯತ್ತ ಮುಖಂಡರು ಲಕ್ಷ್ಯ ವಹಿಸಿದ್ದಾರೆ. ಪ್ರಜಾಧ್ವನಿ ಹೆಸರಿನಲ್ಲಿ ರಾಜ್ಯಾದ್ಯಂತ ಬಸ್ ಯಾತ್ರೆ ಆರಂಭಿಸಿದ್ದಾರೆ. ಜನರಿಗೆ ಕೆಲವೊಂದಿಷ್ಟು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಆದರೆ ಈಗ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾಯಕರ ಪೈಪೋಟಿ ಶುರುವಾಗಿದೆ. ತಮ್ಮ ಬಣದ ಆಕಾಂಕ್ಷಿಗಳಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಟೊಂಕ ಕಟ್ಟಿ ನಿಂತಂತೆ ಕಾಣುತ್ತಿದೆ. ಇದನ್ನೂ ಓದಿ: Real Story: ಸೌಂದರ್ಯವೇ ಬಂಡವಾಳ, ಆದರೆ ಹೂಡಿಕೆ ಇಲ್ಲದೆ, ಖರ್ಚು ಇಲ್ಲದೆ ಆಂಟಿ ಹಣಕ್ಕೆ ಏನು ಮಾಡಿದ್ದಾರೆ ಗೊತ್ತೇ?? ಹಿಂಗೂ ಇರ್ತಾರ??

ಕಾಂಗ್ರೆಸ್ನಲ್ಲಿ ಪ್ರತಿ ಕ್ಷೇತ್ರದಲ್ಲಿ ಎರಡ್ಮೂರು ಜನ ಆಕಾಂಕ್ಷಿಗಳು ಇದ್ದಾರೆ. ಅದರಲ್ಲಿಯೂ ಬೆಂಗಳೂರಿನ ದಾಸರಹಳ್ಳಿ, ರಾಜಾಜಿನಗರ, ಕಲಘಟಗಿ, ಆಳ್ನಾವರ, ಹುಬ್ಬಳ್ಳಿ-ಧಾರವಾಡ, ಹೊನ್ನಾಳಿ, ತುಮಕೂರು ನಗರ, ಶಿರಾ, ನಂಜನಗೂಡು, ಪುಲಕೇಶಿ ನಗರ, ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ೪-೫ ಜನರು ಆಕಾಂಕ್ಷಿಗಳಾಗಿದ್ದಾರೆ. ತಮಗೇ ಟಿಕೆಟ್ ನೀಡಬೇಕು ಎಂದು ಆಕಾಂಕ್ಷಿಗಳು ನಾಯಕರ ಮೇಲೆ ಬಹಿರಂಗವಾಗಿಯೇ ಒತ್ತಡ ಹಾಕುತ್ತಿದ್ದಾರೆ. ತಮ್ಮ ಬೆಂಬಲಿಗರ ಮೂಲಕ ಬಲ ಪ್ರದರ್ಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸುಮಾರು ೮೦ಕ್ಕೂ ಅಧಿಕ ಕ್ಷೇತ್ರದಲ್ಲಿ ಈ ರೀತಿ ಆಗಿದೆ. ಹಾಗಾಗಿ ಫೆ. ೨ರಂದು ನಡೆಯುವ ಸಭೆಯಲ್ಲಿ ತಮ್ಮ ಬಣದವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಕಿತ್ತಾಟ ತಾರಕಕ್ಕೇರುವುದು ಖಚಿತವಾಗಿದೆ.

ಇದೇ ವೇಳೆ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಈ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಚ್. ವಿಶ್ವನಾಥ ಅಷ್ಟೇ ಅಲ್ಲ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದಿರುವುದು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

Comments are closed.