Real story: ಪಾಪ ಹುಡುಗಿ ಸಿಕ್ಕಳು ಎಂದು ಕುಣಿದುಕೊಂಡು ಹೋಗಿ ಮದುವೆಯಾದ ಅಜ್ಜ; ಡಿಂಗ್ ಡಾಂಗ್ ಆಟಕ್ಕೆ ಮೊದಲನೇ ರಾತ್ರಿಯಲ್ಲಿ ಸಿದ್ಧವಾಗುವಾಗಲೇ ಹುಡುಗಿ ಏನು ಮಾಡಿದ್ದಾಳೆ ಗೊತ್ತೆ?

Real story: ಆತನಿಗೆ ಬರೋಬ್ಬರಿ 60 ವರ್ಷ ವಯಸ್ಸು. ಈ ಸಮಯದಲ್ಲಿ ತಾನು ಮದುವೆ ಆಗಬೇಕು ಅಂತ ತಾತಪ್ಪನಿಗೆ ಯೋಚನೆ ಬಂದಿದೆ. ಅಷ್ಟೇ ಅಲ್ಲ, ಆತ ಮದುವೆ ಕೂಡ ಆಗುತ್ತಾನೆ. ಅದು ಅಲ್ಲದೆ ತುಂಬಾ ಚಿಕ್ಕ ವಯಸ್ಸಿನ ಹುಡುಗಿಯನೇ ಮದುವೆ ಆಗುತ್ತಾನೆ. ನಂತರ ಏನಾಯ್ತು ಗೊತ್ತೇ?

ಆ ತಾತ ಇಂದೋರ್ ನಿವಾಸಿ. ಧಾರ್ ನಗರದಲ್ಲಿ ವಿದ್ಯುತ್ ಕೆಲಸ ಮಾಡುತ್ತಿದ್ದ ನಿವೃತ್ತ ಕೆಲಸಗಾರ. ಹೆಸರು ರೂಪದಾಸ್ ಬೈರಾಗಿ. ಈತನಿಗೆ ಮದುವೆಯಾಗಿ 1992 ರಲ್ಲಿ ಆತನ ಪತ್ನಿ ತೀರಿಹೋಗಿದ್ದಾರೆ. ಅದಾದ ಮೇಲೆ ರೂಪದಾಸ್ ಮತ್ತೆ ಮದುವೆ ಆಗಲಿಲ್ಲ. ಅವರಿಗೆ ಮಕ್ಕಳಾಗಲಿ ಅಥವಾ ಯಾವುದೇ ಸಂಬಂಧಿಕರಾಗಲಿ ಇರಲಿಲ್ಲ ಹೀಗೆ ದಿನ ಕಳೆಯಿತು ಇದೀಗ 60 ವರ್ಷಕ್ಕೆ ಕಾಲಿಟ್ಟ ರೂಪದಾಸ್ ಗೆ ಒಬ್ಬ ಸಂಗಾತಿ ಬೇಕು ಎಂದು ಆಸೆ ಆಗಿದೆ. ಇದನ್ನೂ ಓದಿ: Kannada Recipe:ಗೋಡಂಬಿ ಹಲ್ವಾ ಮಾಡೋದು ಎಷ್ಟು ಸುಲಭ ಗೊತ್ತಾ? ತಿನ್ನೋಕೂ ಅಷ್ಟೇ ರುಚಿ

ತನ್ನ ಸ್ನೇಹಿತರ ಜೊತೆಗೆ ಮಾತನಾಡಿ ತನಗೆ ಮದುವೆ ಆಗಬೇಕು ಎಂದು ತಿಳಿಸಿದ್ದಾರೆ ಇವರು ಈ ಪರಿಸ್ಥಿತಿಯನ್ನು ಅವರ ಸ್ನೇಹಿತರು ತಮಗೆ ಬೇಕಾದಂತೆ ಬಳಸಿಕೊಂಡಿದ್ದಾರೆ. ಸ್ನೇಹಿತರಿಂದಲೆ ತಾನು ಮೋಸ ಹೋಗುತ್ತೇನೆ ಎಂದು ರೂಪ್ ದಾಸ್ ಜಿ ಗೆ ಗೊತ್ತಿರಲಿಲ್ಲ. ನಂತರ ಸ್ನೇಹಿತರಿಂದ 45 ವರ್ಷದ ವಿಧವೆ ಮಹಿಳೆ ಒಬ್ಬಳ ಫೋನ್ ನಂಬರ್ ಪಡೆದುಕೊಳ್ಳುತ್ತಾರೆ. ಆಕೆಯು ರೂಪದಾಸ್ ಗೆ ಸುಳ್ಳು ಹೇಳಿ ಮದುವೆಯಾಗುತ್ತಾಳೆ ತನ್ನ ಹೆಸರು ಪೂಜಾ ಎಂದು ಬದಲಾಯಿಸಿಕೊಂಡು ರೂಪ್ ದಾಸ್ ಬಳಿ ಬರುತ್ತಾಳೆ. ಇದನ್ನೂ ಓದಿ: Actress Pragati: ವಯಸ್ಸು 46 ಆದರೂ ಕೂಡ ತಲೆ ಧೀಮ್ ಅನ್ನುವಂತೆ ಡಾನ್ಸ್ ಮಾಡಿದ ನಟಿ ಪ್ರಗತಿ: ಎಲ್ಲರೂ ಬಾಯ್ಬಿಟ್ಟು ನೋಡುವಂತೆ ಮಾಡಿದ ಡಾನ್ಸ್!

ಪೂಜಾ ಹಾಗೂ ಆಕೆಯ ಸಹೋದರ ಎಂದು ಹೇಳಿಕೊಂಡ ವ್ಯಕ್ತಿ ರೂಪದಾಸ್ ಜೊತೆ ಚೆನ್ನಾಗಿ ಮಾತನಾಡುತ್ತಾರೆ ಇವರಿಬ್ಬರನ್ನ ನೋಡಿ ಅವರನ್ನ ನಂಬಿದ ರೂಪ್ ದಾಸ್ ಕೊನೆಗೆ ಪೂಜಾಳನ್ನು ಮದುವೆ ಆಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಸದ್ಯ ಮದುವೆ ಆಯ್ತು ತನಗೆ ಮನೆಯ ಜವಾಬ್ದಾರಿ ಬೇಡ ಎಂದು ರೂಪದಾಸ ತನ್ನ ಮನೆಯ ಬೀರುವಿನ ಕೀಲಿ ಕೈ ಪೂಜಾಳಿಗೆ ಕೊಟ್ಟುಬಿಡುತ್ತಾನೆ. ಮದುವೆಯಾಗಿ ಎರಡೇ ದಿನದ ನಂತರ ರೂಪದಾಸ್ ಹೊರಗೆ ಹೋಗಿದ್ದವನು ಮನೆಗೆ ಬಂದು ಹೆಂಡತಿಯನ್ನು ಕರೆಯುತ್ತಾನೆ. ಆದರೆ ಪೂಜಾ ಮಾತ್ರ ಹೊರಗೆ ಬರುವುದಿಲ್ಲ ತಕ್ಷಣಕ್ಕೆ ಮನೆಯ ಒಳಗಡೆಗೆ ಹೋಗಿ ಬಾಗಿಲು ತೆರೆದ ಬೀರುವನು ನೋಡುತ್ತಾನೆ. ಬೀರುವಿನಲ್ಲಿದ್ದ ಆಭರಣಗಳು ಮೂರು ಲಕ್ಷ ರೂಪಾಯಿ ಎಲ್ಲವೂ ನಾಪತ್ತೆ ಆಗಿತ್ತು.

ಅಲ್ಲಿಗೆ ರೂಪದಾಸ್ ಗೆ ತಾನು ಮೋಸ ಹೋಗಿರುವುದು ಅರಿವಾಗುತ್ತದೆ. ಕೊನೆಗೆ ತನ್ನ ಸ್ನೇಹಿತ ಒಬ್ಬನಿಗೆ ಈ ವಿಷಯದ ಬಗ್ಗೆ ರೂಪದಾಸ್ ವಿವರಿಸುತ್ತಾನೆ. ಕೊನೆಗೆ ಆ ಸ್ನೇಹಿತನ ಸಲಹೆಯಂತೆ ಪೊಲೀಸರಿಗೆ ದೂರು ನೀಡುತ್ತಾನೆ. ನಂತರ ದೂರು ದಾಖಲೆಸಿಕೊಂಡ ಪೊಲೀಸರು ರೂಪದಾಸ್ ಹಾಗೂ ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ. ಪೂಜಾಳ ನಿಜವಾದ ಹೆಸರು ಹೇಮ ಮತ್ತು ಆಕೆಯ ಜೊತೆಗೆ ಇದ್ದ ಸಹೋದರ ಎಂದು ಹೇಳಿಕೊಂಡು ಬಂದಿದ್ದ ಆಕೆಯ ಸ್ನೇಹಿತ ಅಶೋಕ್ ಇದೀಗ ಇವರಿಬ್ಬರು ಪೊಲೀಸರ ವಶದಲ್ಲಿ ಇದ್ದಾರೆ. ಇಳೆವಯಸಿನಲ್ಲಿ ಮದುವೆ ಆಗೋದಕ್ಕೆ ಹೋಗಿ ರೂಪದಾಸ್ ಕೊನೆಗೆ ಎಲ್ಲವನ್ನು ಕಳೆದುಕೊಂಡು ಕುಳಿತುಕೊಳ್ಳುವಂತಾಗಿದೆ.

Comments are closed.