Sparsha Rekha: ಹಿರಿತೆರೆಯಲ್ಲಿ ಮಿಂಚಿ, ಕಿರುತೆರೆಯಲ್ಲಿಯೂ ಮೋಡಿ ಮಾಡುತ್ತಿರುವ ರೇಖಾ ರವರ ತಂಗಿ ಕೂಡ ಖ್ಯಾತ ನಟಿ. ಯಾರು ಗೊತ್ತೆ??

Sparsha Rekha: ಕೆಲವು ಕಲಾವಿದರು (Actress) ಅವರ ಅಭಿನಯದಿಂದ ಅವರು ನೀಡಿರುವ ಕೆಲವೊಂದು ಸಿನಿಮಾಗಳಿಂದ ಇಂದು ನಟಿಸದೆ ಇದ್ದರೂ ಕೂಡ ಜನ ಮಾನಸದಲ್ಲಿ ಸದಾ ಕಾಲಕ್ಕೆ ನೆಲೆಸಿರುತ್ತಾರೆ. ಇನ್ನು ಕೆಲವು ತಾರೆಯರು ಸಿನಿಮಾ ರಂಗ (Film Field) ದಲ್ಲಿ ಫೇಮಸ್ ಆಗಿರುವಾಗಲೇ ಸಿನಿಮಾ ರಂಗವನ್ನು ತೊರೆದು ಬಹಳಷ್ಟು ವರ್ಷದ ನಂತರ ಮತ್ತೆ ಸಿನಿಮಾದಲ್ಲಿ ನಟಿಸುವುದಕ್ಕೆ ಬರುತ್ತಾರೆ ಅಂತವರಲ್ಲಿ ನಟಿ ಸ್ಪರ್ಶ ರೇಖಾ (Sparsha Rekha) ಕೂಡ ಒಬ್ಬರು.

ಬಹುಶಃ ರೇಖಾ ಅಂದ್ರೆ ಯಾರು ಅಂತ ತಟ್ಟನೆ ಹೊಳೆಯದೆ ಇರಬಹುದು. ಆದರೆ ಸ್ಪರ್ಶ ರೇಖಾ ಅಂದ್ರೆ ಎಲ್ಲರಿಗೂ ಗೊತ್ತಾಗುತ್ತದೆ. ಯಾಕೆಂದರೆ ಸ್ಪರ್ಶ ಸಿನಿಮಾದಲ್ಲಿ ರೇಖಾ ಹಾಗೂ ಕಿಚ್ಚ ಸುದೀಪ್ (Kichha Sudeep) ಇಬ್ಬರೂ ಗುರುತಿಸಿಕೊಂಡವರು ಸಿನಿಮಾ (Film) ರಂಗದಲ್ಲಿ ಇಬ್ಬರಿಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ ಇದು. ಇದನ್ನೂ ಓದಿ: LIC Job: ಕಾಳಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆರಂಭಿಸಿದ LIC: ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯುವುದು ಹೇಗೆ ಗೊತ್ತೇ??

ಒಂದು ಕಾಲದಲ್ಲಿ ಫೇಮಸ್ ನಟಿಯಾಗಿದ್ದ ರೇಖಾ ಕಿಚ್ಚ ಸುದೀಪ್ ಅವರ ಜೊತೆಗೆ ಸ್ಪರ್ಶ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರ ಜೊತೆಗೆ ಮೆಜೆಸ್ಟಿಕ್ ಈ ಎರಡು ಚಿತ್ರಗಳಲ್ಲಿ ಅಭಿನಯಿಸಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡರು. ಅಲ್ಲಿಂದ ಅವರಿಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಕೂಡ ಒಲಿದು ಬಂದವು. ಆದರೆ ಟಾಪ್ ನಟಿ ಎನಿಸಿಕೊಂಡಿರುವಾಗಲೇ ಸ್ಪರ್ಶ ರೇಖಾ ಸಿನಿಮಾ ರಂಗದಿಂದ ಸ್ವಲ್ಪ ದೂರ ಉಳಿಯುತ್ತಾರೆ. ಆದರೆ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋದ ಮೂಲಕ ಮತ್ತೆ ವಾಪಸ್ ಆಗುತ್ತಾರೆ.

ಮದುವೆ ಆದ ಬಳಿಕ ಸಿನಿಮಾರಂಗದಿಂದ ಸ್ಪರ್ಶ ರೇಖಾ ದೂರ ಇದ್ದರು ನಂತರ ಮತ್ತೆ ಸಿನಿಮಾದಲ್ಲಿ ಕೆಲವು ಪೋಷಕ ಪಾತ್ರಗಳನ್ನು ಮಾಡುವುದರ ಮೂಲಕ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ ಇದೀಗ ಧಾರಾವಾಹಿಯಲ್ಲಿಯೂ ಕೂಡ ರೇಖಾ ಅವರು ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇತ್ತೀಚಿಗೆ ಕನ್ನಡದಲ್ಲಿ ಬಿಡುಗಡೆಯಾಗಿರುವ ಡಾಲಿ ಧನಂಜಯ್ ಅವರ ನಟನೆಯ ಬಡವರ ಸಿನಿಮಾದಲ್ಲಿಯೂ ಕೂಡ ಅನೇಕ ಅಭಿನಯಿಸಿದ್ದರು. ಇದನ್ನೂ ಓದಿ:Karnataka Politics: ಒಂದು ಕಡೆ CM ಕುರ್ಚಿಗಾಗಿ ಕಿತ್ತಾಡುತ್ತಿರುವ ಡಿಕೆ ಹಾಗೂ ಸಿದ್ದು ನಡುವೆ ಮತ್ತೊಂದು ಬಿಗ್ ವಾರ್: ಈ ಬಾರಿ ಯಾವ ವಿಚಾರಕ್ಕೆ ಗೊತ್ತೇ??

ಇನ್ನು ರೇಖಾ ಅವರ ಸಹೋದರಿ ಕೂಡ ಚಿತ್ರರಂಗದಲ್ಲಿ ಅಭಿನಯಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ (Golden start Ganesh) ಅವರ ಸಿನಿಮಾದಲ್ಲಿ ಅನೇಕ ಅವರ ತಂಗಿ ಅಭಿನಯಿಸಿದ್ದರು ಅವರ ಹೆಸರು ನಿಖಿತ ನಾರಾಯಣ್ (Nikhita Narayan).

ಹೌದು ರೇಖಾ ಅವರ ಸಹೋದರಿಯ ನಿಖಿತ ನಾರಾಯಣ್ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳ್ನಗೆ ಚಿತ್ರದಲ್ಲಿ ನಾಲ್ಕು ಜನ ನಾಯಕಿಯರ ಪೈಕಿ ಒಬ್ಬ ನಾಯಕಿ ಆಗಿ ಕಾಣಿಸಿಕೊಂಡಿದ್ದರು. ಪಟ್ಟಣದ ಹುಡುಗಿಯಾಗಿ ಅಭಿನಯಿಸಿರುವ ನಿಖಿತ ಅಕ್ಕ ರೇಖಾಳಂತೆಯೇ ಉತ್ತಮ ನಟಿ. ಆದರೆ ಅವರು ಬೇರೆ ಯಾವ ಸಿನಿಮಾಗಳು ಕೂಡ ಕಾಣಿಸಿಕೊಂಡಿಲ್ಲ. ಸದ್ಯ ರೇಖಾ ಮಾತ್ರ ತಮ್ಮ ಚಾರ್ಮ್ ಉಳಿಸಿಕೊಂಡು ಬೆಳ್ಳಿತೆರೆ ಹಾಗೂ ಕಿರುತೆರಯಲ್ಲಿ ಮಿಂಚುತ್ತಿದ್ದಾರೆ.

Comments are closed.