Chiranjeevi: ಮೂರನೇ ಮದುವೆಯಾಗುತ್ತಿರುವ ಮಗಳಿಗೆ ಚಿರು ಕೊಟ್ಟ ಬಂಗ್ಲೆಯ ಬೆಲೆ ಎಷ್ಟು ಗೊತ್ತೇ?? ತಿಳಿದರೆ ಇಂತಹ ಅಪ್ಪ ಇರಬೇಕು ಅಂತೀರಾ!

Chiranjeevi: ಭಾರತೀಯ ಚಿತ್ರರಂಗದಲ್ಲಿ ಅದ್ದೂರಿ ಸಿನೆಮಾ ನಿರ್ಮಾಣದ ಮೂಲಕ ಗುರುತಿಸಿಕೊಂಡಿರುವ ಚಿತ್ರರಂಗವೆಂದರೆ ಅದು ಟಾಲಿವುಡ್ ಅಥವಾ ತೆಲುಗು ಚಿತ್ರರಂಗ. ತೆಲುಗು ಚಿತ್ರರಂಗದಲ್ಲಿ ಇರುವ ಅಗ್ರಗಣ್ಯ ನಟರಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂಡ ಒಬ್ಬರು. ಇವರು ೮೦ರ ದಶಕದಿಂದ ಸಿನೆಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ವಿಭಿನ್ನ ಮ್ಯಾನರಿಸಂ, ಡಾನ್ಸ್ ಮೂಲಕ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಇದೀಗ ಚಿರಂಜಿವಿ ಅವರ ಮಗ ರಾಮ್ ಚರಣ್ ತೇಜ ಕೂಡ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಬೆಳೆದಿದ್ದಾರೆ.

ಚಿರಂಜೀವಿ ಅವರು ಜನಿಸಿದ್ದು 22 ಅಗಸ್ಟ್ 1955ರಲ್ಲಿ. ಚಿರಂಜೀವಿ ಅವರು ಇಲ್ಲಿಯ ವರೆಗೆ 150ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ. ಚಿರಂಜಿವಿ ಅವರು ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ ಸಿನೆಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ಜೊತೆ ಸಿಪಾಯಿ ಸಿನೆಮಾದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: Kannada Astrology: ಅಬ್ಬಾ ಕೊನೆಗೂ ಶುರುವಾಗುತ್ತಿದೆ ಲಕ್ಷ್ಮಿ ನಾರಾಯಣ ಯೋಗ; ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಅದೃಷ್ಟ ಇನ್ನು ಶುರು!

ಚಿರಂಜೀವಿ ಅವರು ತಮ್ಮ ಅಭಿನಯಕ್ಕಾಗಿ ಪದ್ಮಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇದಲ್ಲದೆ ಹಲವಾರು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಚಿರಂಜೀವಿ ಅವರು ರಾಜಕೀಯ ರಂಗದಲ್ಲಿಯೂ ಗುರುತಿಸಿಕೊಂಡಿದ್ದು, ಪ್ರಜಾರಾಜ್ಯಂ ಎನ್ನುವ ಪಕ್ಷ ಕಟ್ಟಿದ್ದರು. ನಂತರ ಅದನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿದ್ದಾರೆ. ಇದನ್ನೂ ಓದಿ: Ambani’s daughter-in-law Radhika Merchant: ಅಂಬಾನಿ ಸೊಸೆಯಾಗುತ್ತಿರುವ ಹುಡುಗಿ ಸಾಮಾನ್ಯದವಳೇನು ಅಲ್ಲ, ಯಾರು ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ. ಅಷ್ಟಕ್ಕೂ ಈಕೆ ಯಾರು ಗೊತ್ತೇ??

ಇದೀಗ ಚಿರಂಜೀವಿ ಅವರ ಜೊತೆ ಅವರ ಮಗಳು ಕೂಡ ಸುದ್ದಿಯಲ್ಲಿದ್ದಾರೆ.  ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ ಅವರು ೩ನೇ ಮದುವೆ ಆಗಲು ತಯಾರಾಗಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡಿದೆ. ಈ ನಡುವೆ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಮಗಳಿಗಾಗಿ ಹೈದರಾಬಾದಿನ ಪ್ರತಿಷ್ಟಿತ ಎಂಎಲ್ಎ ಕಾಲೋನಿಯಲ್ಲಿ ಐಶಾರಾಮಿ ಬಂಗಲೆಯೊಂದನ್ನು ಗಿಫ್ಟ್ ಮಾಡಿದ್ದಾರೆ ಎನ್ನುವ ವಿಚಾರ ಹೊರಬಿದ್ದಿದೆ. ಈ ಬಂಗಲೆಯ ಬೆಲೆ ಬರೋಬ್ಬರಿ ೩೫ ಕೋಟಿ ರೂ.ಗಳು.

ವಾಲ್ಟರ್ ವೀರಯ್ಯ, ಬೋಲಾ ಶಂಕರ್ ಸಿನೆಮಾಗಳಿಗೆ ತಾವು ಪಡೆದ ಸಂಭಾವನೆಯಲ್ಲಿ ಈ ಬಂಗಲೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಚಿರಂಜೀವಿ ಅವರು ತಮ್ಮ ಪುತ್ರಿಯರಾದ ಸುಶ್ಮಿತಾ ಹಾಗೂ ಶ್ರೀಜಾ ಹೆಸರಿನಲ್ಲಿ ತೆಲಂಗಾಣದಲ್ಲಿ ಎಕರೆಗಟ್ಟಲೆ ಜಾಗ ಖರೀದಿಸಿದ್ದಾರೆ ಎನ್ನಲಾಗಿದೆ.

Comments are closed.