Shah Rukh Khan: ನಾನು ರಾತ್ರಿ ಬ್ಯಾಟ್ ಮ್ಯಾನ್ ಆದರೆ ಮುಂಜಾನೆ ಸೂಪರ್ ಮ್ಯಾನ್ ಎಂದ ಶಾರುಖ್ ಖಾನ್. ಹೀಗೆ ಹೇಳಿದ್ದು ಯಾಕೆ ಗೊತ್ತೇ??

Shah Rukh Khan: 90ರ ದಶಕದಿಂದ ಇಲ್ಲಿಯವರೆಗೂ ತಮ್ಮ ಇಮೇಜ್ ಹಾಗೂ ಅಭಿಮಾನಿ ಬಳಗವನ್ನು ಕಾಪಾಡಿಕೊಂಡು ಬಂದಿರುವ ಬಾಲಿವುಡ್ (Bollywood) ಸ್ಟಾರ್ ನಟರಲ್ಲಿ ಶಾರುಖ್ ಖಾನ್ ಕೂಡ ಒಬ್ಬರು. ಇವರನ್ನು ಬಾಲಿವುಡ್ ಆಳಿದ ಖಾನ್ ತ್ರಯರಲ್ಲಿ ಒಬ್ಬರು ಎಂದು ಗುರುತಿಸಲಾಗುತ್ತದೆ. ಇವರಿಗೆ ವಿಶ್ವದಾದ್ಯಂತ ಅಭಿಮಾನಿಬಳಗವಿದೆ. ಇದೀಗ ಶಾರುಖ್ ಖಾನ್ ನಟನೆಯ ಪಠಾಣ್ (Pathan) ಸಿನೆಮಾ ಈ ವಾರ ತೆರೆಗೆ ಅಪ್ಪಳಿಸಲಿದೆ.

ಈ ಸಿನೆಮಾಗೆ ಭಾರತದಲ್ಲಿ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿದೆ. ಆದರೂ ಈ ಸಿನೆಮಾವನ್ನು ಬಿಡುಗಡೆ ಮಾಡಿಯೇ ಮಾಡುತ್ತೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಶಾರುಖ್ ಖಾನ್ ಅವರಿಗೆ ಈ ಸಿನೆಮಾವಾದರೂ ಜೀವದಾನ ನೀಡುತ್ತಾ ಎಂದು ನೋಡಬೇಕಾಗಿದೆ. ಈ ನಡುವೆ ಶಾರುಖ್ ಖಾನ್ ಅವರು ನೀಡಿರುವ ಹೇಳಿಕೆಯೊಂದು ಸಾಕಷ್ಟು ವೈರಲ್ ಆಗಿದೆ. ಅದೆನೆಂದರೆ ನಾನು ರಾತ್ರಿ ಬ್ಯಾಟ್ಸ್ಮನ್ ಆಗಿರುತ್ತೇನೆ ಬೆಳಿಗ್ಗೆ ಸೂಪರ್ ಮ್ಯಾನ್ ಆಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Nikhil Kumaraswamy: ರಾಜಕೀಯ ಬಿಟ್ರೆ, ಕನ್ನಡದ ಭರವಸೆಯ ನಟ ನಿಖಿಲ್ ಹಾಗೂ ಪತ್ನಿ ರೇವತಿ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??

ಪಠಾಣ್ ಜೊತೆ ಜವಾನ್, ಧುನ್ಕಿ ಸಿನೆಮಾಗಳ ಚಿತ್ರೀಕರಣದಲ್ಲಿ ಕಿಂಗ್ ಖಾನ್ ಬ್ಯುಸಿಯಾಗಿದ್ದಾರೆ. ತೆರೆಗೆ ಬರುತ್ತೀರುವ ಪಠಾಣ್ ಸಿನೆಮಾದ ಮೇಲೆ ಕಿಂಗ್ ಖಾನ್ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಲಿಯಾನ್; ದಿ ಪ್ರೊಪೇಶನಲ್ ರೀತಿಯ ಸಿನೆಮಾಗಳನ್ನು ಮಾಡಬೇಕೆಂದು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ನಾನು ಎಲ್ಲ ರೀತಿಯ ಸಿನೆಮಾಗಳನ್ನು ಮಾಡಲು ಇಷ್ಟಪಡುತ್ತೇನೆ. ಒಳ್ಳೆಯ ಹುಡುಗ, ಕೆಟ್ಟ ಹುಡುಗ, ಸಂತೋಷದ ವ್ಯಕ್ತಿ, ಫೈಟಿಂಗ್ ಮಾಡುವ ವ್ಯಕ್ತಿ ಹೀಗೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: Actress Pragati: ವಯಸ್ಸು 46 ಆದರೂ ಕೂಡ ತಲೆ ಧೀಮ್ ಅನ್ನುವಂತೆ ಡಾನ್ಸ್ ಮಾಡಿದ ನಟಿ ಪ್ರಗತಿ: ಎಲ್ಲರೂ ಬಾಯ್ಬಿಟ್ಟು ನೋಡುವಂತೆ ಮಾಡಿದ ಡಾನ್ಸ್!

ಈ ವರ್ಷ ನನಗೆ ಬಹಳ ಮಹತ್ವದ್ದಾಗಿದೆ. ವರ್ಷದ ಆರಂಭದಲ್ಲಿಯೇ ಪಠಾಣ್ ಸಿನೆಮಾ ಬಿಡುಗಡೆಯಾಗುತ್ತಿದೆ. ನಾನು ಸಿನೆಮಾ ರಂಗಕ್ಕೆ ಬಂದು ೩೨ ವರ್ಷಗಳು ಕಳೆದಿವೆ. ೫೭ನೇ ವಯಸ್ಸಿನಲ್ಲಿ ನಾನು ಈ ರೀತಿಯ ಸಿನೆಮಾ ಮಾಡಿದ್ದೇನೆ. ನಾನು ಯಾವಾಗಲು ದಕ್ಷಿಣ ಭಾರತದ ಸಿನೆಮಾಗಳ ಪ್ರಕಾರ ಸಿನೆಮಾ ಮಾಡಲು ಇಷ್ಟಪಡುತ್ತೇನೆ. ಪಠಾಣ್ ಬಹಳ ವಿಭಿನ್ನ ಸಿನೆಮಾವಾಗಿದೆ. ನಾನು ಈ ಹಿಂದೆ ರಾಜ್ಕುಮಾರ್ ಇರಾನಿ ಅವರೊಂದಿಗೆ ಸಿನೆಮಾ ಮಾಡಲು ಬಯಸಿದ್ದೆ. ಮುನ್ನಾಬಾಯಿ ಎಂಬಿಬಿಎಸ್ ಸಿನೆಮಾ ನಾನೇ ಮಾಡಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಲಿಯಾನ್-ದಿ ಪ್ರೋಪೆಶನಲ್ ರೀತಿಯ ಸಿನೆಮಾ ಮಾಡಲು ಇಷ್ಟಪಡುತ್ತೇನೆ. ವಯಸ್ಸಾದ ಶಾಂತ ವ್ಯಕ್ತಿ. ಗ್ರೇ ಹೇರ್ ಇರುವ ರೀತಿಯ ಸಿನೆಮಾ ಮಾಡಬೇಕು. ನಾನು ಪಾತ್ರಗಳನ್ನು ತೆಗೆದುಕೊಳ್ಳುವುದಿಲ್ಲ. ಕಥೆಗಳನ್ನು ಆಯ್ಕೆಮಾಡಿಕೊಳ್ಳುತ್ತೇನೆ. ನಾನು ಎಲ್ಲ ರೀತಿಯ ಪಾತ್ರಗಳನ್ನು ಮಾಡುತ್ತೇನೆ. ರಾತ್ರಿ ಬ್ಯಾಟ್ಸ್ಮನ್, ಬೆಳಿಗ್ಗೆ ಸೂಪರ್ ಮ್ಯಾನ್, ಮಧ್ಯಾಹ್ನ ಸ್ಪೈಡರ್ ಮ್ಯಾನ್ ಹೀಗೆ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಬೇಕು ಎಂದು ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

Comments are closed.