Tulu Language: ಕರ್ನಾಟಕದಲ್ಲಿ ಸಹೋದರರಂತೆ ಬಾಳುತ್ತಿರುವ ಕನ್ನಡಿಗರು, ತುಳುವರ ನಡುವೆ ತಂದಿಟ್ಟ ನಕಲಿ ಹೋರಾಟಗಾರ. ತುಳು ಭಾಷೆಗೆ, ತುಳುವಿಗರಿಗೆ ಮಾಡಿದ ಅವಮಾನ ಎಂತದ್ದು ಗೊತ್ತೆ?

Tulu Language: ತುಳು ಭಾಷೆಯನ್ನು ಅವಮಾನ ಮಾಡಿ ತುಳುಗರ ಕೈಯಲ್ಲಿ ಹೀನಾಯವಾಗಿ ಉಗಿಸಿಕೊಂಡ ಭೂಪ. ಕನ್ನಡ ಸಿನಿಮಾ ರಂಗದಲ್ಲಿ ಈಗಾಗಲೇ ತುಳುವರು ಹೆಸರು ಮಾಡಿದ್ದಾರೆ ಸಾಕಷ್ಟು ಅತ್ಯುತ್ತಮವಾದ ಸಿನಿಮಾವನ್ನು ಕೂಡ ಕೊಟ್ಟಿದ್ದಾರೆ. ತುಳುನಾಡಿನ ಸೊಗಡನ್ನು ವಿಶ್ವಾದ್ಯಂತ ಪರಿಚಯಿಸಿದವರು ಇದ್ದಾರೆ. ಇತ್ತೀಚಿಗಿನ ಕಾಂತಾರ ಸಿನಿಮಾ ನೋಡಿದರೆ ನಿಮಗೆ, ತುಳು ನಾಡಿನ ಕಲೆ, ಅಲ್ಲಿನ ವೈಶಿಷ್ಟ್ಯತೆಯ ಬಗ್ಗೆ ಗೊತ್ತಾಗುತ್ತದೆ. ಆದರೆ ಸಾಕಷ್ಟು ಜನರಿಗೆ ತುಳುವರು ಹಾಗೂ ಕನ್ನಡಿಗರು ಒಟ್ಟಾಗಿ ಇರೋದನ್ನ ನೋಡುವುದಕ್ಕೆ ಆಗುವುದಿಲ್ಲ. ಹೊಟ್ಟೆ ಉರಿ ಪಟ್ಟುಕೊಳ್ಳುತ್ತಾರೆ.

ಕನ್ನಡದ ಸಹೋದರ ಭಾಷೆ ತುಳು:

ತುಳುವನ್ನು ಕನ್ನಡದ ಸಹೋದರಿ ಎಂದೇ ಹೇಳಲಾಗುತ್ತದೆ ಕನ್ನಡ ಹಾಗೂ ತುಳು ಬಹಳ ಹತ್ತಿರವಾದಂತಹ ಭಾಷೆಗಳು. ಇನ್ನು ತುಳುವರನ್ನು ಕನ್ನಡಿಗರು, ಕನ್ನಡಿಗರನ್ನು ತುಳುವರು ಕೂಡ ಗೌರವಿಸುತ್ತಾರೆ. ಆದರೆ ಇತ್ತೀಚೆಗೆ ಒಬ್ಬ ತನ್ನ ಅಧಿಕ ಪ್ರಸಂಗತನದಿಂದ ತುಳುವವರಲ್ಲಿ ಆಕ್ರೋಶ ಹುಟ್ಟು ಹಾಕಿದ್ದಾನೆ. ಕರಾವಳಿಯವರು ನಿದ್ದೆ ಗೆಟ್ಟು ಸಾಮಾಜಿಕ ಜಾಲತಾಣದಲ್ಲಿ ಆತನ ಹುಡುಕಾಟ ಶುರು ಮಾಡಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ? “ಆವು ಶೆಟ್ರೆ” ಏನು ಒಂದೇ ಒಂದು ಕಮೆಂಟ್?

“ಆವು ಶೆಟ್ರೆ” ಹೇಳಿದ್ದು ಯಾರು?

ಕೆಜಿಎಫ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಶ್ರೀನಿಧಿ ಶೆಟ್ಟಿ, ದೇಶಾದ್ಯಂತ ಗುರುತಿಸಿಕೊಂಡಿದ್ದಾರೆ. ಕರಾವಳಿ ಮೂಲದ ಶ್ರೀನಿಧಿ ಶೆಟ್ಟಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಒಂದು ಫೋಟೋವನ್ನು ಶೇರ್ ಮಾಡಿದ್ರು. ಅದಕ್ಕೆ ಹಾಗೆ ಸುಮ್ಮನೆ ಎಂದು ಬರೆದುಕೊಂಡಿದ್ದರು. ಇದಕ್ಕೆ ತುಳುನಾಡಿನ ಕುಡಿ ಉಡುಪಿಯ ಮೂಲದ ಖ್ಯಾತ ನಿರ್ದೇಶಕ ಹಾಗೂ ನಟ ರಕ್ಷಿತ್ ಶೆಟ್ಟಿ ಅವರು “ಆವು ಶೆಟ್ರೆ” ಎಂದು ಒಂದು ರಿಪ್ಲೈ ಕೊಟ್ಟಿದ್ರು. ಅಂದರೆ ಆಯಿತು ಶೆಟ್ರೆ ಅಂತ ಅರ್ಥ. ಈ ಕಮೆಂಟ್ ಕೆಳಗೆ ಮತ್ತೊಬ್ಬ ಕಮೆಂಟ್ ಮಾಡಿದ್ದ ಆತನ ಅಸಹ್ಯಕರವಾದ ತುಳು ಭಾಷೆಗೆ ಬೈದಿರುವ ಶಬ್ದಗಳಿಂದ ತುಳುವರು ಕೋಪಗೊಂಡಿದ್ದಾರೆ.

ಫೇಕ್ ಅಕೌಂಟ್?!

ಈ ಕಮೆಂಟ್‌ಗೆ ಪ್ರತ್ಯುತ್ತರ ನೀಡಿದ ರೋಷನ್ ಯಶ್ ಎನ್ನುವ ಹೆಸರಿನ ಫೇಕ್ ಅಕೌಂಟ್ ಬಾಯಿಗೆ ಬಂದ ಹಾಗೆ ತುಳು ಭಾಷೆಯ ಬಗ್ಗೆ ಮಾತನಾಡಿದ್ದಾನೆ. “ನಿಮ್ಮ ಶಾ* ನಾಡು ಮಂಗಳೂರಿನಲ್ಲಿ ಇಟ್ಕೊಳ್ಳಿ ಇದನ್ನೆಲ್ಲ. ಲಿಪಿಯೇ ಇಲ್ಲದ ಸೂ* ಭಾಷೆ ತುಳು. ಮಂಗಳೂರಿನಲ್ಲಿ ಒಂದೇ ಒಂದು ಕನ್ನಡ ಸಿನಿಮಾಕ್ಕೆ ಅಭಿಮಾನಿಗಳೇ ಇಲ್ಲದ ಕಾರಣ ನೀವೆಲ್ಲ ಬೆಂಗಳೂರು ಸೇರಿದ್ದೀರಿ” ಇಂತಹ  ತೀರ ಅವಾಚ್ಯ ಶಬ್ದದಿಂದ ತುಳು ಭಾಷೆಗೆ ಬೈದಿದ್ದು ಮಾತ್ರವಲ್ಲದೆ ತುಳುನಾಡಿಗರಿಗೆ ಅವಮಾನ ಮಾಡುವಂತಹ ಕಮೆಂಟ್ ಮಾಡಿದ್ದಾನೆ.

tulu bhashe 1 | Live Kannada News
Tulu Language: ಕರ್ನಾಟಕದಲ್ಲಿ ಸಹೋದರರಂತೆ ಬಾಳುತ್ತಿರುವ ಕನ್ನಡಿಗರು, ತುಳುವರ ನಡುವೆ ತಂದಿಟ್ಟ ನಕಲಿ ಹೋರಾಟಗಾರ. ತುಳು ಭಾಷೆಗೆ, ತುಳುವಿಗರಿಗೆ ಮಾಡಿದ ಅವಮಾನ ಎಂತದ್ದು ಗೊತ್ತೆ? https://sihikahinews.com/2023/03/31/tulu-language/

ಈತನ ಈ ಒಂದು ಕಮೆಂಟ್ನಿಂದ ತುಳುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಇದಕ್ಕೆಲ್ಲ ಸರ್ಕಾರವೇ ಕಾರಣ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕಲ್ಪಿಸಿ ಕೊಟ್ಟಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹಲವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಮುಂದುವರೆದರೆ ತುಳು ಭಾಷೆ ಹಾಗೂ ತುಳುವರಿಗೆ ಸ್ಥಾನಮಾನ ಬಿಡಿ ಮಾನವೂ ಇಲ್ಲದಂತಾಗುತ್ತದೆ ಎಂದು ತುಳುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.