Cricket News; ಗೆಲ್ಲುವುದೇನೋ ಗೆದ್ದು ಬಿಟ್ರು- ಆದರೆ ಪಂದ್ಯ ಮುಗಿದ ಮೇಲೆ ನಾಯಕ ಡುಪ್ಲೆಸಿಸ್ ಹೇಳಿದ್ದೇನು ಗೊತ್ತೇ??

Cricket News; ಐಪಿಎಲ್ ಟೂರ್ನಿ (IPL) ಯಲ್ಲಿ ಲೀಗ್ ಹಂತದ ಪಂದ್ಯಗಳ ಅಂತಿಮ ಸೆಣಸಾಟ ನಡೆಯುತ್ತಿದೆ. ಇದರ ನಡುವೆ ಆರ್ಸಿಬಿ ತಂಡ ಪ್ಲೇಆಫ್ಸ್ ತಲುಪುವ ಹಾದಿ ಕಷ್ಟವಾಗಿದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ತಂಡ (RCB) ಪ್ಲೇಆಫ್ಸ್ ತಲುಪುವ ಹಾದಿಯನ್ನು ಸ್ವಲ್ಪ ಮಟ್ಟಿಗೆ ಸುಗಮ ಮಾಡಿಕೊಂಡಿದೆ. ನಿನ್ನೆ ಜೈಪುರದ ಸವಾಯಿ ಮಾನಸಿಂಗ್ ಸ್ಟೇಡಿಯಂ ನಲ್ಲಿ ಆರ್ಸಿಬಿ ವರ್ಸಸ್ ಆರ್.ಆರ್ ಪಂದ್ಯ ನಡೆಯಿತು. ಇದನ್ನೂ ಓದಿ: Business ideas: ನಿಮ್ಮ ಮನೆಯಲ್ಲಿ ಹೆಂಡತಿ ಖಾಲಿ ಕುಳಿತಿದ್ದರೇ ಈ ಕೆಲಸ ಮಾಡಿ. ಲಕ್ಷ ಲಕ್ಷ ಆದಾಯ ಬರುವಂತೆ ಮಾಡಬಹುದು. ಹೇಗೆ ಗೊತ್ತೇ??

ಈ ಪಂದ್ಯದಲ್ಲಿ ಆರ್ಸಿಬಿ ತಂಡ ದೊಡ್ಡ ಮಾರ್ಜಿನ್ ನಲ್ಲಿ ಗೆದ್ದಿದೆ, ಅರ್ಸಬಿ ತಂಡದ ಬ್ಯಾಟಿಂಗ್ (Batting) ಮತ್ತು ಬೌಲಿಂಗ್ ಪ್ರದರ್ಶನ ಅದ್ಭುತವಾಗಿ ಮೂಡಿಬಂದಿದೆ. ಆರ್.ಆರ್ ತಂಡವನ್ನು ಬೌಲಿಂಗ್ ಮೂಲಕ ಕಟ್ಟಿಹಾಕಿದ ಆರ್ಸಿಬಿ ತಂಡ ಕೇವಲ 59 ರನ್ (Run) ಗಳಿಗೆ ಆಲೌಟ್ (allout) ಮಾಡಿ, 112 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವು ಆರ್ಸಿಬಿ ತಂಡಕ್ಕೆ ಬಹಳ ಮುಖ್ಯವಾಗಿತ್ತು. ನಿನ್ನೆ ಪಂದ್ಯ ಗೆದ್ದ ಖುಷಿಯಲ್ಲಿ ಆರ್ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಅವರು ಹೇಳಿದ್ದೇನು ಗೊತ್ತಾ? ಇದನ್ನೂ ಓದಿ: Film News: 80 ನೇ ವಯಸ್ಸಾದ ಮೇಲೆ ಮಗುವಿಗೆ ತಂದೆಯಾದ ಖ್ಯಾತ ನಟ: ಈ ವಯಸ್ಸಿನಲ್ಲಿ ಇದೆಲ್ಲ ಸಾಧ್ಯನಾ ಎಂದು ಕಾಲೆಳೆದ ನೆಟ್ಟಿಗರು. ಏನಾಗಿದೆ ಗೊತ್ತೇ?

“ನಮ್ಮ ತಂಡದ ನೆಟ್ ರನ್ ರೇಟ್ ಹೆಚ್ಚಾಗಿರುವುದು ತುಂಬಾ ಒಳ್ಳೆಯ ವಿಷಯ. ಇದು ಕಷ್ಟವಾದ ಪಿಚ್ ಆಗಿತ್ತು, ಮೊದಲಿಗೆ ನಾವು ಬ್ಯಾಟಿಂಗ್ ಮಾಡಿದ ಕಾರಣ, ಪಿಚ್ ಹೇಗಿದೆ ಎನ್ನುವುದನ್ನು ಅರ್ಥಮಾಡಿಕೊಂಡೆವು. ಪವರ್ ಪ್ಲೇ ನಲ್ಲಿ ರನ್ಸ್ ಗಳಿಸುವಾಗ, 160 ರನ್ಸ್ ಒಳ್ಳೆಯ ಸ್ಕೋರ್ (Score) ಆಗುತ್ತದೆ ಎಂದುಕೊಂಡಿದ್ದವು. 15 ಓವರ್ ಗಳವರೆಗೂ ಚೆನ್ನಾಗಿ ಆಡಿ, ಒಳ್ಳೆಯ ಫೌಂಡೇಶನ್ ಹಾಕಿಕೊಟ್ಟೆವು. ಕೊನೆಯ ಓವರ್ ಗಳಲ್ಲಿ ಪಂದ್ಯ ನಮ್ಮ ಪರವಾಗಿಯೇ ಆಯಿತು.

ತಂಡದ ಎಲ್ಲಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನಮ್ಮ ತಂಡಕ್ಕೆ ಈ ಪಂದ್ಯದಲ್ಲಿ ಲೆಫ್ಟ್ ಆರ್ಮ್ ಸ್ಪಿನ್ನರ್ ಅವಶ್ಯಕತೆ ಇತ್ತು. ಬ್ರೆಸ್ ವೆಲ್ ಅವರು ನೆಟ್ ನಲ್ಲಿ ಬೌಲಿಂಗ್ ಮಾಡುತ್ತಿದ್ದು, ಶಬಾಜ್ ಅಹ್ಮದ್ ಮುಂದಿನ ಪಂದ್ಯದಲ್ಲಿ ಆಡುತ್ತಾರೆ.. ತಂಡಕ್ಕೆ ಬಹಳ ಮುಖ್ಯವಾಗಿ ಬೇಕಾಗಿದ್ದ ಗೆಲುವು ಇದು. ಟೀಮ್ ನ ಆತ್ಮವಿಶ್ವಾಸ ಹೆಚ್ಚಿಸಿದೆ. ಮುಂಬರುವ ಎರಡು ಪಂದ್ಯಕ್ಕೆ ಇದು ಸಹಾಯವಾಗುತ್ತದೆ..” ಎಂದಿದ್ದಾರೆ ಫಾಫ್ ಡು ಪ್ಲೆಸಿಸ್. ಇದನ್ನೂ ಓದಿ:Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

Comments are closed.