Political News: ಹೀನಾಯವಾಗಿ ಸೋತ ಬೆನ್ನಲ್ಲೇ ಬಿಜೆಪಿ ನಾಯಕರಿಗೆ ಮತ್ತೊಂದು ಟೆನ್ಶನ್- ಕಾಂಗ್ರೆಸ್ ಗೆ ಆರ್ಭಟಕ್ಕೆ ನಲುಗಿದ ಬಳಿಕ ಏನಾಗಿದೆ ಗೊತ್ತೇ??

Political News: ಕರ್ನಾಟಕ ವಿಧಾನ ಸಭೆಯ ಚುನಾವಣೆ (Vidhana sabha election 2023) ಮುಗಿದು ಮೇ 13ರಂದು ಫಲಿತಾಂಶ ಬಂದಿದ್ದು, ಬಿಜೆಪಿ ಪಕ್ಷವನ್ನು ಹೀನಾಯವಾಗಿ ಸೋಲಿಸಿ ಕಾಂಗ್ರೆಸ್ ಪಕ್ಷ (Congress party) ಬಹುಮತ ಸಾಧಿಸಿದೆ. 135 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ತಯಾರಿ ಮಾಡಿಕೊಳ್ಳುತ್ತಿದೆ. ಮುಖ್ಯಮಂತ್ರಿ ಯಾರಾಗಬಹುದು ಎನ್ನುವ ಚರ್ಚೆ ಕೂಡ ನಡೆಸುತ್ತಿದೆ. ಒಂದು ಕಡೆ ಈ ಚರ್ಚೆ ನಡೆಯುತ್ತಿರುವಾಗ, ವಿರೋಧ ಪಕ್ಷದಲ್ಲಿ ಕೂರಬೇಕಾದ ಬಿಜೆಪಿ (BJP) ಇಂದ ಸರ್ಕಾರಕ್ಕೆ ಪ್ರಶ್ನೆ ಹಾಕಬಲ್ಲ ವಿಪಕ್ಷ ನಾಯಕ (Opposition Party) ಯಾರಾಗಬಹುದು ಎನ್ನುವ ದೊಡ್ಡ ಪ್ರಶ್ನೆ ಇದೆ.. ಇದನ್ನೂ ಓದಿ;Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

ಏಕೆಂದರೆ, ಬಿಜೆಪಿ ಪಕ್ಷದ ಖಡಕ್ ನಾಯಕ ಬಿ.ಎಸ್.ಯಡಿಯೂರಪ್ಪನವರು (BS Yediyurappa) ಈಗ ಬರುವುದಿಲ್ಲ, ಅವರು ಸರ್ಕಾರವನ್ನು ನಡುಗಿಸುವಂಥ ಪ್ರಶ್ನೆ ಕೇಳುವ ಗಟ್ಟಿಮಾತುಗಳ, ತೂಕ ಇರುವ ಮಾತುಗಳನ್ನಾಡುವ ವ್ಯಕ್ತಿ ಆಗಿದ್ದರು. ಆದರೆ ಈಗ ಅವರು ಇಲ್ಲ. ಹಾಗೆಯೇ ಹೀಗೆ ಗತ್ತಿನಿಂದ ಮಾತನಾಡಿ ಸರ್ಕಾರವನ್ನು ಶೇಕ್ ಮಾಡಬಲ್ಲ ಸಾಮರ್ಥ್ಯವಿರುವ ಮತ್ತೊಬ್ಬ ನಾಯಕ ಕೆ.ಎಸ್. ಈಶ್ವರಪ್ಪ (K.S.Eshvarappa) ಅವರು, ಆದರೆ ಇವರು ಕೂಡ ಈಗಾಗಲೇ ನಿವೃತ್ತಿ ಪಡೆದು ಎಲೆಕ್ಷನ್ ನಲ್ಲಿಯು ಸ್ಪರ್ದಿಸಿಲ್ಲ. ಹಾಗಾಗಿ ಈ ಇವರು ಕೂಡ ವಿಪಕ್ಷ ನಾಯಕರಾಗಲು ಸಾಧ್ಯವಿಲ್ಲ.

ಈ ಜಾಗಕ್ಕೆ ಬರಬಲ್ಲ ಸಾಮರ್ಥ್ಯ ಹೊಂದಿದ್ದ ಮತ್ತೊಂದು ಹೆಸರು ಜಗದೀಶ್ ಶೆಟ್ಟರ್ (Jagadish Shetter) ಅವರದ್ದು, ಇವರು ಶಾಸಕರಾಗಿ, ಸಂಸದರಾಗಿ, ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರು ಕೂಡ ಎದುರಾಳಿ ಪಕ್ಷದ ಬೆವರಿಳಿಸುವ ಹಾಗೆ ಮಾತನಾಡುತ್ತಿದ್ದರು. ಆದರೆ ಈಗ ಇವರು ಬಿಜೆಪಿ ಪಕ್ಷದಲ್ಲಿಲ್ಲ, ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್ ಇಂದ ಎಲೆಕ್ಷನ್ ಗೆ ನಿಂತು ಸೋತಿದ್ದಾರೆ. ವಿಪಕ್ಷ ನಾಯಕನ ಸ್ಥಾನಕ್ಕೆ ಕೇಳಿಬರುತ್ತಿರುವ ಮತ್ತೊಂದು ಹೆಸರು ವಿಶ್ವೇಶ್ವರ ಹೆಗಡೆ, ಇವರಿಗು ಕೂಡ ಶಾಸಕರಾಗಿ, ಸಂಸದರಾಗಿ ಸ್ಪೀಕರ್ (Speaker) ಆಗಿ ಕೆಲಸ ಮಾಡಿದ್ದಾರೆ. ಆದರೆ ಎಲೆಕ್ಷನ್ ನಲ್ಲಿ ಸೋತಿರುವುದರಿಂದ ಇವರು ಕೂಡ ವಿಪಕ್ಷ ನಾಯಕ ಆಗುವ ಸಾಧ್ಯತೆ ಕಡಿಮೆ ಇದೆ. ಇದನ್ನೂ ಓದಿ:Film News: ಪವನ್ ಕಲ್ಯಾಣ್ ರವರಿಗೆ ಒಂದು ದಿನದ ಚಿತ್ರೀಕರಣಕ್ಕೆ ಕರೆಯಲು ಎಷ್ಟು ಹಣ ಕೊಡಬೇಕು ಗೊತ್ತೆ? ಯಪ್ಪಾ ಇಷ್ಟೊಂದಾ??

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕನಾಗಿ ಕುಳಿತುಕೊಳ್ಳಬಹುದು. ಆದರೆ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗಲೇ ಬಿಜೆಪಿ ಸೋತಿದೆ. ಈ ಸೋಲಿನ ಹೊಣೆ ಹೊತ್ತಿಕೊಂಡ ಬೊಮ್ಮಾಯಿ ಅವರು ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಅವರು ವಿಪಕ್ಷ ನಾಯಕ ಆಗುತ್ತಾರಾ ಎನ್ನುವ ಬಗ್ಗೆ ಸ್ಪಶ್ಟನೆ ಇಲ್ಲ. ಬಿಜೆಪಿ ಪಕ್ಷದಲ್ಲಿ ಉತ್ತಮ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಸುರೇಶ್ ಕುಮಾರ್ (Suresh Kumar) ಅವರು ಗೆದ್ದಿದ್ದು ಇವರ ಹೆಸರು ಕೂಡ ಈ ಸ್ಥಾನಕ್ಕೆ ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ, ಕಾರ್ಕಳ ಶಾಸಕ ಸುನೀಲ್ ಕುಮಾರ್ (Sunil Kumar) ಅವರ ಹೆಸರು ಕೂಡ ಕೇಳಿಬರುತ್ತಿದೆ. ಒಟ್ಟಿನಲ್ಲಿ ಡಿಕೆ ಶಿವ ಕುಮಾರ್, ಸಿದ್ದರಾಮಯ್ಯ ಅಂಥ ನಾಯಕರ ವಿರುದ್ಧ ಪ್ರಶ್ನೆ ಮಾಡುವ ವಿಪಕ್ಷ ನಾಯಕ ಯಾರಾಗಬಹುದು ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ:Business ideas: ನಿಮ್ಮ ಮನೆಯಲ್ಲಿ ಹೆಂಡತಿ ಖಾಲಿ ಕುಳಿತಿದ್ದರೇ ಈ ಕೆಲಸ ಮಾಡಿ. ಲಕ್ಷ ಲಕ್ಷ ಆದಾಯ ಬರುವಂತೆ ಮಾಡಬಹುದು. ಹೇಗೆ ಗೊತ್ತೇ??

Comments are closed.