Real Story: ಐದು ವರ್ಷ ಪ್ರೀತಿ ಮಾಡಿದ, ಹಿಂದೆ ಬಿದ್ದು ಮದುವೆಯಾಗುತ್ತೇನೆ ಎಂದ, ನಿಶ್ಚಿತಾರ್ಥ ಆದಮೇಲೆ ಏನು ಮಾಡಿದ್ದಾನೆ ಗೊತ್ತೇ?

Real Story: ಸಾಮಾನ್ಯವಾಗಿ ಲವ್ ಸ್ಟೋರಿ (Love story) ಗಳಲ್ಲಿ ಹುಡುಗರು ಹುಡುಗಿಯರ ಹಿಂದೆ ಬಿದ್ದು ಪ್ರೀತಿ ಮಾಡಿ, ಅವರನ್ನೇ ಮದುವೆ ಆಗುತ್ತೇನೆ ಎಂದು ನಂಬಿಸಿ, ಚೆನ್ನಾಗಿ ಸುತ್ತಾಡಿ.. ಕೊನೆಗೆ ಮದುವೆ ಎಂದು ಬಂದಾಗ, ಮನೆಯಲ್ಲಿ ಒಪ್ಪುವುದಿಲ್ಲ, ಜಾತಿ ಸರಿಹೊಂದುವುದಿಲ್ಲ ಎಂದು ಅನೇಕ ಕಾರಣಗಳನ್ನು ನೀಡಿ, ಬ್ರೇಕಪ್ (breakup) ಮಾಡಿಕೊಳ್ಳುತ್ತಾರೆ. ಆದರೆ ಈ ಹುಡುಗನ ಕಥೆ ಬೇರೆಯದೇ ರೀತಿ ಇದೆ. ಈ ಹುಡುಗ ತಾನು ಪ್ರೀತಿಸಿದ ಹುಡುಗಿಯ ಜೊತೆಗೆ ಮನೆಯವರು ಹೇಳಿದರು ಎಂದು ಎಂಗೇಜ್ಮೆಂಟ್ (Engagement) ಮಾಡಿಕೊಂಡ. ಜೂನ್ 10ರಂದು ಮದುವೆ ನಿಶ್ಚಯವಾಗಿತ್ತು, ಆದರೆ ಮದುವೆಗಿಂತ ಮೊದಲು ಹುಡುಗಿಗೆ ಮೋಸ ಮಾಡಿದ್ದಾನೆ. ಇದರಿಂದ ಮನನೊಂದ ಆಕೆ ಎಂಥ ನಿರ್ಧಾರ ತೆಗೆದುಕೊಂಡಿದ್ದಾಳೆ ಗೊತ್ತಾ? ಇದನ್ನೂ ಓದಿ: House Constriction: 40 ಲಕ್ಷ ರೂ. ಗಳಲ್ಲಿ ನಿರ್ಮಿಸಿ ಬಂಗಲೆಯಂಥ ಮನೆ; 2 ಪ್ಲೋರ್, 4 BHK, 1RK, ಪಕ್ಕಾ ಪೈಸಾ ವಸೂಲ್ ಮನೆ!

JOSH 2 | Live Kannada News
Real Story: ಐದು ವರ್ಷ ಪ್ರೀತಿ ಮಾಡಿದ, ಹಿಂದೆ ಬಿದ್ದು ಮದುವೆಯಾಗುತ್ತೇನೆ ಎಂದ, ನಿಶ್ಚಿತಾರ್ಥ ಆದಮೇಲೆ ಏನು ಮಾಡಿದ್ದಾನೆ ಗೊತ್ತೇ? https://sihikahinews.com/2023/06/07/love-story-crime-kurnool-vinodkumar/

ಈ ಘಟನೆ ನಡೆದಿರುವುದು ಕರ್ನೂಲ್ (karnool) ನಲ್ಲಿ, ಪೊಲೀಸರು (Police) ಹೇಳಿರುವ ಹಾಗೆ… ಪಿವಿ ನರಸಿಂಹರಗ್ ಕಾಲೊನಿಯ ಮಲ್ಲೇಪೋಗು ಮಧು ಮತ್ತು ಶೇಕಮ್ಮ ಇವರಿಬ್ಬರ ಮಗಳ ಹೆಸರು ಪದ್ಮಾವತಿ. ಈಕೆ ಡಿಗ್ರಿ ಮುಗಿಸಿ 10 ವರ್ಷ ಕಾರ್ ಶೋರೂಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು ಈಕೆಗೆ 30 ವರ್ಷ ವಯಸ್ಸು. ಐದು ವರ್ಷಗಳ ಹಿಂದೆ ನಂದ್ಯಾಲ ಜಿಲ್ಲೆಯ ಪಗಿದಾಳ ಮಂಡಲದ ಪಟಕೋಟದ ವಿನೋದ್ ಕುಮಾರ್ ಅಲಿಯಾಸ್ ಪ್ರವೀಣ್ ಎನ್ನುವ ಹುಡುಗ ಅದೇ ಶೋರೂಮ್ ನಲ್ಲಿ ಕೆಲಸಕ್ಕೆ ಸೇರಿಕೊಂಡ. ಆಕೆಯನ್ನು ಪ್ರೀತಿಸುತ್ತೇನೆ ಎಂದು ಹಿಂದೆ ಮುಂದೆ ಓಡಾಡುವುದಕ್ಕೆ ಶುರು ಮಾಡಿದ. ಅವಳಿಗೆ ಪದೇ ಪದೇ ಕಾಲ್ ಮಾಡಿ ಪ್ರೊಪೋಸ್ ಮಾಡುತ್ತಿದ್ದ. ಇದನ್ನೂ ಓದಿ: Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

ಕೊನೆಗೆ ಆಕೆ ವಿನೋದ್ ಪ್ರಾಮಾಣಿಕವಾಗಿದ್ದಾನೆ ಎಂದು ಅರ್ಥ ಮಾಡಿಕೊಂಡು ಅವನನ್ನು ಪ್ರೀತಿಸಲು ಶುರು ಮಾಡಿದಳು. ತನ್ನ ಪ್ರೀತಿ ವಿಷಯವನ್ನು ಮನೆಯಲ್ಲಿ ಹೇಳಿ, ಮದುವೆಗೂ ಒಪ್ಪಿಸಿದಳು. ಮಾರ್ಚ್ 9ರಂದು ಇಬ್ಬರ ಎಂಗೇಜ್ಮೆಂಟ್ ನಡೆದು, ಜೂನ್ 10ರಂದು ಮದುವೆ ಆಗಬೇಕಿತ್ತು. ಮದುವೆಯಾಗಿ 1 ಲಕ್ಷ ಹಾಗು ಚಿನ್ನದ ಒಡವೆಗಳನ್ನು ವರದಕ್ಷಿಣೆ ಆಗಿ ನೀಡಲಾಗಿತ್ತು. ಆದರೆ ಮದುವೆಗಿಂತ ಮೊದಲು ವಿನೋದ್ ಆಕೆಯನ್ನು ಭೇಟಿ ಮಾಡಿ ಶಾಕಿಂಗ್ ವಿಷಯ ತಿಳಿಸಿದ್ದಾನೆ. ಅವನು ಮೇ 29ರಂದು ಮತ್ತೊಂದು ಹುಡುಗಿಯನ್ನು ಮದುವೆ ಆಗಿರುವುದಾಗಿ ತಿಳಿಸಿದ್ದಾನೆ. ಈ ವಿಚಾರ ಆಕೆಯ ತಂದೆ ತಾಯಿಗೆ ಗೊತ್ತಾಗಿ, ಅವರು ಪೊಲೀಸರ ಬಳಿ ವಿನೋದ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರ ಬಳಿ ವಿನೋದ್ ಆಕೆ ತನಗಿಂತ ನಾಲ್ಕು ವರ್ಷ ದೊಡ್ಡವಳು ಒತ್ತಾಯ ಮಾಡಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ.

ಈ ಸೋಮವಾರ ವಿಚಾರಣೆ ನಡೆಯಬೇಕಿತ್ತು, ಅಷ್ಟರಲ್ಲಿ ಪದ್ಮಾವತಿ ಪ್ರಾಣ ಕಳೆದುಕೊಂಡಿದ್ದಾಳೆ. ಜೊತೆಗೆ ಒಂದು ಪತ್ರವನ್ನು ಬರೆದಿಟ್ಟು, ಅಮ್ಮ ಅಪ್ಪ ನನ್ನನ್ನು ಕ್ಷಮಿಸಿ, ನಿಮ್ಮ ಮಾತು ಕೇಳದೆ ಇದ್ದಿದ್ದಕ್ಕೆ ನನಗೆ ತಕ್ಕ ಶಿಕ್ಷೆ ಆಗಿದೆ. ನನ್ನ ಬಗ್ಗೆ ಚಿಂತೆ ಮಾಡಬೇಡಿ, ತಮ್ಮ ತಂಗಿ ಬಗ್ಗೆ ಚಿಂತೆ ಮಾಡಿ.. ನನ್ನ ಸಾವಿಗೆ ಕಾರಣ ವಿನೋದ್, ಪ್ರೀತಿಸುತ್ತೇನೆ ಎಂದು ಹಿಂದೆ ಬಂದು, ಮದುವೆ ಆಗುತ್ತೇನೆ ಎಂದು ಐದು ವರ್ಷಗಳ ಕಾಲ ಹೇಳಿ, ನಿಶ್ಚಿತಾರ್ಥ ಆಗಿ ಮದುವೆ ಆಮಂತ್ರಣ ಪತ್ರ ಪ್ರಿಂಟ್ ಮಾಡಿಸಿದ ನಂತರ ಅವನು ಇನ್ನೊಂದು ಹುಡುಗಿಯನ್ನು ಮದುವೆಯಾಗಿದ್ದಾನೆ. ನನಗೆ ಮೋಸ ಮಾಡಿದ್ದಾನೆ..ನನ್ನ ಸಾವಿಗೆ ವಿನೋದ್, ಅವನ ತಂದೆ ರಾಯಿ ಬಕ್ಕಣ್ಣ ಹಾಗೂ ಲಕ್ಷ್ಮೀದೇವಿ, ಸೋದರಮಾವ ಶೋಭನ್, ತಮ್ಮ ಮಧುಬಾಬು ಮತ್ತು ಐದು ಅಣ್ಣ ತಮ್ಮಂದಿರು ಕಾರಣ..ಎಂದು ಬರೆದಿದ್ದು, ಪೊಲೀಸರು ಈಗ ಈ ಪತ್ರದ ಪ್ರಕಾರ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ!

Comments are closed.