Political News: ಯಪ್ಪಾ, ಇಷ್ಟು ದಿವಸ ಸುಮ್ಮನಿದ್ದು ಈಗ ಕ್ಯಾಮೆರಾ ಮುಂದೆ ಬಂದ ಯತಿಂದ್ರ, ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಕೇಳಿದಕ್ಕೆ ಬಿಜೆಪಿ ಬಗ್ಗೆ ಹೇಳಿದ್ದೇನು ಗೊತ್ತೇ??

Political News: ಕಾಂಗ್ರೆಸ್ ಪಕ್ಷ ಈ ವರ್ಷ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬೇಕು ಎಂದು ಬಹಳಷ್ಟು ಪ್ರಚಾರ ಮಾಡಿ, ಜನರಿಗೆ ಭರವಸೆಗಳನ್ನು ಕೊಟ್ಟು ಕೊನೆಗೆ ಎಲೆಕ್ಷನ್ ನಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷವು 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆಗಳನ್ನು ನೀಡಿತ್ತು, ಈ ಯೋಜನೆಗಳನ್ನೆಲ್ಲಾ ಕಾಂಗ್ರೆಸ್ ಸರ್ಕಾರ ಈಡೇರಿಸುತ್ತಾ ಎಂದು ಬಿಜೆಪಿ ಪಕ್ಷ ಟೀಕೆ ಮಾಡಿತ್ತು.

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಡೆಯನ್ನು ಟೀಕೆ ಮಾಡುತ್ತಲೇ ಬರುವಾಗ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಈಗ ಬಿಜೆಪಿ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಶಾಸಕ ಗಣೇಶ್ ಪ್ರಸಾದ್ ಅವರು ಆಯೋಜಿಸಿದ್ದ ಮತದಾರರ ಕೃತಜ್ಞತಾ ಸಭೆಯಲ್ಲಿ ಯತೀಂದ್ರ ಅವರು ಪಾಲ್ಗೊಂಡಿದ್ದರು, ಆಗ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿ ಪಕ್ಷಕ್ಕೆ ಪ್ರತ್ಯುತ್ತರ ನೀಡಿದ್ದಾರೆ. “ಅವರ ಹಾಗೆ ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆ ಕೊಟ್ಟಿದೆ ಎಂದು ಅಂದುಕೊಂಡಿದ್ದರು.

JOSH 2 | Live Kannada News
Political News: ಯಪ್ಪಾ, ಇಷ್ಟು ದಿವಸ ಸುಮ್ಮನಿದ್ದು ಈಗ ಕ್ಯಾಮೆರಾ ಮುಂದೆ ಬಂದ ಯತಿಂದ್ರ, ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಕೇಳಿದಕ್ಕೆ ಬಿಜೆಪಿ ಬಗ್ಗೆ ಹೇಳಿದ್ದೇನು ಗೊತ್ತೇ?? https://sihikahinews.com/2023/06/07/yathindra-siddaramaiah-questioning-modi-govt/

ಆದರೆ ಕಾಂಗ್ರೆಸ್ ಪಕ್ಷ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸಿದೆ. ಬಿಜೆಪಿ ಪಕ್ಷದ ಸ್ಥಿತಿ ಹೇಗಿದೆ ಎಂದರೆ ತಾನು ಕಳ್ಳ ಪರರನ್ನು ನಂಬ ಎನ್ನುವ ಹಾಗೆ ಆಗಿದೆ, ಬಿಜೆಪಿ ಸರ್ಕಾರ ಕೊಟ್ಟಿರುವ 600 ಭರವಸೆಗಳನ್ನು ಈಡೇರಿಸಿದೆಯಾ? ಮೋದಿ ಅವರು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ, ಅದರ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ಒಂದು ತಿಂಗಳು ಕೂಡ ಆಗದೆ ಇದ್ದರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಈ ಎಲೆಕ್ಷನ್ ನಲ್ಲಿ ಧರ್ಮ ನಮ್ಮ ಕಡೆ, ಅಧರ್ಮ ಅವರ ಕಡೆ ಇತ್ತು. ನಮ್ಮ ಪಕ್ಷದ ಸೇವೆ ಪ್ರಾಮಾಣಿಕ, ಅವರನ್ನು 40% ಭ್ರಷ್ಟಾಚಾರ. ನಮ್ಮ ಪಕ್ಷ ಬಡವರ ಪರವಾಗಿತ್ತು, ಆದರೆ ಅವರದ್ದು ಶ್ರೀಮಂತರ ಪರವಾಗಿ ಇದ್ದ ಸರ್ಕಾರ.

ಇದೆಲ್ಲವನ್ನು ನಾವು ಮತದಾರರಿಗೆ ತಿಳಿಸಿದ್ದರಿಂದ ಅವರ ಆಶೀರ್ವಾದ ನಮಗೆ ಸಿಕ್ಕಿತು. ನಮ್ಮ ಕಾರ್ಯಕರ್ತರ ಮೇಲೆ ಈಗ ಹೆಚ್ಚು ಜವಾಬ್ದಾರಿ ಇದೆ. ಲೋಕಸಭಾ ಚುನಾವಣೆ ನಡೆಯುವ ಮೊದಲು ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಿ, ಕಾಂಗ್ರೆಸ್ ಸಾಧನೆ ಬಗ್ಗೆ ಮಾತನಾಡಬೇಕು. ಬಿಜೆಪಿ ಸರ್ಕಾರ ಎಮೋಷನಲ್ ಆಗಿ ಜನರು ಕೋಪಗೊಳ್ಳುವ ಹಾಗೆ ಮಾಡುತ್ತಿದ್ದರು, ಈಗ ಸಿದ್ದರಾಮಯ್ಯನವರ ಸರ್ಕಾರ ಬಂದಿದೆ. ನಾವು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇವೆ..ಎಂದು ಯತೀಂದ್ರ ಅವರು ಹೇಳಿದ್ದಾರೆ.

Comments are closed.