Property: ಮಗಳಿಗೂ ತಂದೆಯ ಆಸ್ತಿಯಲ್ಲಿ ಪಾಲು ಸಿಗಬೇಕು ಎನ್ನುವ ಬಗ್ಗೆ ಕಡೆಗೂ ಹೊರಬಿತ್ತು ಮಹತ್ವದ ತೀರ್ಪು; ಆಸ್ತಿ ಆಸೆಗೆ ಬಿತ್ತು ಕಡಿವಾಣ!

Property: ನಮ್ಮ ದೇಶದಲ್ಲಿ ಜೊತೆಯಾಗಿ ಹುಟ್ಟಿದವರು ನಡುವೆ ಎಷ್ಟೇ ಪ್ರೀತಿ ವಿಶ್ವಾಸ ಇದ್ದು, ಬಹಳ ಒಗ್ಗಟ್ಟಿನಿಂದ ಇದ್ದರು ಕೂಡ ಆಸ್ತಿ ಪಾಲು ವಿಷಯ ಬಂದಾಗ, ನಿಜವಾದ ಭಾವನೆಗಳು ಹೊರಬರುತ್ತದೆ. ಆಸ್ತಿ ಎನ್ನುವ ಅದೊಂದು ವಿಷಯದಿಂದ ಅಣ್ಣತಮ್ಮಂದಿರು ಅಕ್ಕತಂಗಿಯರೇ ವೈರಿಗಳಾಗಿ ಬಿಡುತ್ತಾರೆ. ಈ ವಿಷಯಕ್ಕೆ ಕೋರ್ಟ್ ಕೂಡ ಆಗಾಗ ಕಾನೂನು ತಿದ್ದುಪಡಿ ಮಾಡುತ್ತದೆ. ಇದೀಗ ಆಸ್ತಿ ಹಂಚಿಕೆ ವಿಷಯಕ್ಕೆ ಮತ್ತೊಮ್ಮೆ ಕೋರ್ಟ್ ಕಾನೂನಿನಲ್ಲಿ ತಿದ್ದುಪಡಿ ತಂದಿದ್ದು, ಅದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

JOSH 2 | Live Kannada News
Property: ಮಗಳಿಗೂ ತಂದೆಯ ಆಸ್ತಿಯಲ್ಲಿ ಪಾಲು ಸಿಗಬೇಕು ಎನ್ನುವ ಬಗ್ಗೆ ಕಡೆಗೂ ಹೊರಬಿತ್ತು ಮಹತ್ವದ ತೀರ್ಪು; ಆಸ್ತಿ ಆಸೆಗೆ ಬಿತ್ತು ಕಡಿವಾಣ! https://sihikahinews.com/2023/06/17/father-property-to-daughter/

ತಮಿಳುನಾಡಿನಲ್ಲಿ ಆಸ್ತಿ ವಿಚಾರಕ್ಕೆ ನಡೆದ ಗದ್ದಲಕ್ಕೆ ಕೋರ್ಟ್ ತೀರ್ಪು ನೀಡುವಾಗ ಈ ಥರದ ತೀರ್ಪನ್ನು ನೀಡಿದೆ. ಕೋರ್ಟ್ ನೀಡಿರುವ ತೀರ್ಪು ಏನು ಎಂದರೆ, ಒಂದು ವೇಳೆ ಒಬ್ಬ ವ್ಯಕ್ತಿ ವಿಲ್ ಬರೆಸದೆ ಅಥವಾ ಆಸ್ತಿ ಯಾರಿಗೆ ಸೇರಬೇಕು ಎನ್ನುವುದನ್ನು ತೀರ್ಮಾನ ಮಾಡದೆ ವಿಧಿವಶವಾದರೆ, ಅವನ ಆಸ್ತಿಯಲ್ಲಿ ಮನೆಯ ಹೆಣ್ಣುಮಕ್ಕಳಿಗೂ ಕೂಡ ಪಾಲು ಸಿಗಬೇಕು ಎನ್ನುವುದಾಗಿದೆ. ಮೃತರಾದ ವ್ಯಕ್ತಿಯ ಸ್ವಂತ ಮಕ್ಕಳಿಗೆ ಹೆಚ್ಚು ಹಕ್ಕು ಇರುತ್ತದೆ ಆತನ ಸಹೋದರರ ಮಕ್ಕಳಿಗೆ ಇರುವುದಿಲ್ಲ. ಹಾಗಾಗಿ ಸಹೋದರಿಯರ ಆಸ್ತಿಯನ್ನೂ ತಾನೇ ಅನುಭವಿಸುತ್ತೇನೆ ಅಂತ ಗಂಡು ಮಕ್ಕಳು ಹೇಳುವಹಾಗಿಲ್ಲ. ಕೋರ್ಟ್ ನಲ್ಲಿ ಕೇಸ್ ಹಾಕುವ ಹಾಗೆಯೋ ಇಲ್ಲ.

ತಮಿಳುನಾಡಿನ ಈ ಕೇಸ್ ನಲ್ಲಿ, ಬಂದಿರುವ ವ್ಯಕ್ತಿ 1949ರಲ್ಲೇ ವಿಧಿವಶರಾಗಿದ್ದಾರೆ. ಈ ವ್ಯಕ್ತಿ ಆಸ್ತಿ ಯಾರಿಗೆ ಸಿಗಬೇಕು ಎಂದು ಬರೆಯದೆ ಇದ್ದ ಕಾರಣಕ್ಕೆ, ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದ ಅವನ ಗಂಡು ಮಕ್ಕಳಿಗೆ ಆಸ್ತಿ ಸಿಗಬೇಕು ಎಂದು ಕೋರ್ಟ್ ತೀರ್ಪು ನೀಡಿತು. ಮೃತ ವ್ಯಕ್ತಿಯ ಮಕ್ಕಳಿಗೆ ಆಸ್ತಿಯಲ್ಲಿ ಪ್ರಾಥಮಿಕ ಹಕ್ಕು ಬರುತ್ತದೆ ಎಂದು ಕೋರ್ಟಿ ತಿಳಿಸಿತು. ಇದು ಕಾನೂನಿನ ವಿಷಯದಲ್ಲಿ ಒಂದು ಹೊಸ ಇತಿಹಾಸ ಎಂದೇ ಹೇಳಲಾಗುತ್ತಿದೆ.

ಒಬ್ಬ ವ್ಯಕ್ತಿಗೆ ಹೆಣ್ಣುಮಕ್ಕಳಿದ್ದು, ಈ ರೀತಿ ಅವರು ಆಸ್ತಿ ಯಾರಿಗೆ ಹೋಗಬೇಕು ಎಂದು ಬರೆಯುವ ಮೊದಲೇ ವಿಧಿವಶರಾದರೆ ಆ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮ ಪಾಲು ಇರುತ್ತದೆ. ಮುಂದೆ ಎಲ್ಲಾ ಕುಟುಂಬಗಳಲ್ಲಿ ಆಸ್ತಿಯನ್ನು ಪಾಲು ಮಾಡುವ ಸಮಯ ಬಂದಾಗ, ಈ ಕಾನೂನು ಹೆಚ್ಚಾಗಿ ಎಲ್ಲರ ಬಳಕೆಗೆ ಬರುತ್ತದೆ ಎಂದು ಹೇಳಲಾಗುತ್ತಿದೆ.

Comments are closed.