Abhishek marriage: ಬಾಡೂಟದ ಹಿಂದೆಯೂ ರಾಜಕೀಯಾನಾ? ಅಭಿಷೇಕ್ ಇಷ್ಟು ದೊಡ್ಡ ಅರೇಂಜ್ ಮಾಡಿದ್ಯಾಕೆ? ಕೊನೆಗೂ ಸತ್ಯ ಹೇಳಿದ ಅಭಿ ಕುಟುಂಬ!

Abhishek marriage: ನಟ ಅಂಬರೀಶ್ (Ambareesh) ಹಾಗೂ ನಟಿ ಸುಮಲತಾ (sumalata) ಅವರ ಮಗ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ಅವರ ಮದುವೆ ನಡೆದು, ಮೊನ್ನೆ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದ ಬಗ್ಗೆ ಕೆಲವರು ಬೇರೆ ರೀತಿಯ ಮಾತುಗಳನ್ನಾಡಿದ್ದಾರೆ. ರಾಜಕೀಯಕ್ಕೆ ಸಹಾಯ ಆಗಲಿ ಎಂದು ಸುಮಲತಾ ಅವರು ಈ ರೀತಿ ಮಾಡಿದ್ದಾರೆ ಎಂದು ಕೆಲವರು ಮಾತನಾಡುತ್ತಿದ್ದು ಈ ಬಗ್ಗೆ ಅಭಿಷೇಕ್ ಅಂಬರೀಶ್ ಅವರು ಪ್ರೆಸ್ ಮೀಟ್ ನಲ್ಲಿ ಉತ್ತರ ಕೊಟ್ಟಿದ್ದಾರೆ.

JOSH 2 | Live Kannada News
Abhishek marriage: ಬಾಡೂಟದ ಹಿಂದೆಯೂ ರಾಜಕೀಯಾನಾ? ಅಭಿಷೇಕ್ ಇಷ್ಟು ದೊಡ್ಡ ಅರೇಂಜ್ ಮಾಡಿದ್ಯಾಕೆ? ಕೊನೆಗೂ ಸತ್ಯ ಹೇಳಿದ ಅಭಿ ಕುಟುಂಬ! https://sihikahinews.com/2023/06/18/abhishek-marriage-mandya-baduta-problem/

ರಾಜಕೀಯ ಪ್ರೇರಿತ ಬೀಗರೂಟ ಎಂದು ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಬೀಗರೂಟಕ್ಕೆ ರಾಜಕೀಯಕ್ಕೆ ಸಂಬಂಧ ಕಲ್ಪಿಸಬೇಡಿ. ಕೆಲವರು ಮಾಡುತ್ತಿರು ಪ್ರಚೋದನೆಯಿಂದ ಹೀಗೆಲ್ಲಾ ಆಗ್ತಿದೆ. ಈ ಕಾರ್ಯಕ್ರಮ ನಮಗೆ ರಾಜಕೀಯವಾಗಿ ಲಾಭ ತರುತ್ತದೆ ಎಂದು ಕೆಲವರು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದಿದ್ದಾರೆ. ಈ ರೀತಿ ಹೇಳಿರುವುದು ಅಡುಗೆ ಮನೆಗೆ ಕೆಲವರು ನುಗ್ಗಿ ಗಲಾಟೆ ಮಾಡಿದ ವಿಷಯದ ಬಗ್ಗೆ. ಈ ಕಾರ್ಯಕ್ರಮ ಮಾಡಿರುವುದರ ಹಿಂದೆ ರಾಜಕೀಯದ ಉದ್ದೇಶ ಖಂಡಿತ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಅಭಿಷೇಕ್ ಅಂಬರೀಶ್.

ರಾಜಕೀಯದಲ್ಲಿ ಲಾಭವಾಗಲಿ ಎಂದು ಕಾರ್ಯಕ್ರಮ ಮಾಡುವುದಿದ್ದರೆ ವಿಧಾನಸಭೆಗಿಂತ ಮೊದಲು ಮಾಡ್ತಿದ್ವಿ, ಅಥವಾ ನಮ್ಮ ಅಮ್ಮನಿಗೆ ಸಹಾಯ ಆಗಬೇಕು ಎನ್ನುವುದಾಗಿದ್ದರೆ ಲೋಕಸಭಾ ಚುನಾವಣೆಗೆ ಹತ್ತಿರ ಇರುವಾಗ ಮಾಡ್ತಿದ್ವಿ.. ಕಾರ್ಯಕ್ರಮವನ್ನ ಮುಂದಕ್ಕೆ ಹಾಕಿ ಈಗ ಮಾಡೋದು ಬೇಡ, ಚುನಾವಣೆಗೆ ಹತ್ತಿರ ಇದ್ದಾಗ ಮಾಡಿ ಅಂತ ಹೇಳಿದ್ರು.. ರಾಜಕೀಯದ ದೃಷ್ಟಿಯಲ್ಲಿ ಅದು ಸರಿಯಾಗಿತ್ತು, ಆದರೆ ಅದು ನಮಗೆ ಒಪ್ಪಿಗೆ ಇರಲಿಲ್ಲ. ನಮ್ಮ ಮದುವೆಯ ಸಂತೋಷಕ್ಕೆ ರಾಜಕೀಯವನ್ನ ಬೆರೆಸೋದು ಬೇಡ ಎನ್ನುವುದು ನಮ್ಮ ನಿಲುವುದು ಆಗಿತ್ತು ಎಂದಿದ್ದಾರೆ ಅಭಿಶೇಕ್ ಅಂಬರೀಶ್.

ಜನರು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಊಟಕ್ಕಿಂತ ಹೆಚ್ಚಾಗಿ ನಿಮ್ಮನ್ನ ನೋಡೋಕೆ ಬಂದ್ವಿ ಅಂತ ಹಲವು ಜನ ಹೇಳಿದ್ರು, ಈ ಸಂದರ್ಭವನ್ನ ಅವರಿಗೆ ಬೇಕಾದ ಹಾಗೆ ರಾಜಕೀಯ ವಿರೋಧಿಗಳು ಬಳಸಿಕೊಂಡರೆ ಅವರಿಗೆ ಒಳ್ಳೆಯದಾಗಲಿ. ಊಟ ಶಾರ್ಟೇಜ್ ಆಗಿಲ್ಲ ಅದೆಲ್ಲ ಸುಳ್ಳು. ನಮ್ಮಪ್ಪನ ಆಸೆಯ ಹಾಗೆ ಮದುವೆ ಆಗಿದ್ದೀನಿ, ಇಲ್ಲದಿದ್ದರೆ ಸಿಂಪಲ್ ಆಗಿ ಮದುವೆ ಆಗ್ತಿದ್ದೆ. ಇದು ಅಂಬರೀಶ್ ಅವರ ಮನೆ ಮದುವೆ, ನಮ್ಮ ಮನೆಯವರನ್ನ ಬೆಳೆಸಿದ ಜನ ಇವರು, ಇಲ್ಲೇ ಬೀಗರೂಟ ಮಾಡಬೇಕು ಅಂತ ಮೊದಲೇ ಅಂದುಕೊಂಡಿದ್ವಿ.. ಎಂದು ಹೇಳುವ ಮೂಲಕ ಎಲ್ಲಾ ವಿಷಯಕ್ಕೂ ಸ್ಪಶ್ಟನೆ ನೀಡಿದ್ದಾರೆ.

Comments are closed.