BMW: BMW ಕಡೆ ಇಂದ ಹೊಸ ಬೈಕ್ ಲಾಂಚ್- 1000 RR ಬೈಕ್ ನಲ್ಲಿ ಏನೆಲ್ಲಾ ವಿಶೇಷತೆ, ದರದ ಸಂಪೂರ್ಣ ಮಾಹಿತಿ.

BMW: BMW ಮೋಟಾರ್ಸ್ ಇಂಡಿಯಾ ಈಗ ಭಾರತದಲ್ಲಿ BMW M 1000 RR ಬೈಕ್ ಅನ್ನು ಲಾಂಚ್ ಮಾಡಿದೆ. ಈ ಬೈಕ್ ನ ಎಕ್ಸ್ ಶೋರೂಮ್ ಬೆಲೆ ಬರೋಬ್ಬರಿ 49 ಲಕ್ಷ ರೂಪಾಯಿ ಆಗಿದೆ. ಇದೇ ಬೈಕ್ ಕಾಂಪಿಟೇಶನ್ ಗ್ರೇಡ್ ನಲ್ಲಿ 55 ಲಕ್ಷ ರೂಪಾಯಿ ಶೋರೂಮ್ ಬೆಲೆಗೆ ಸಿಗಲಿದೆ. ಇಂದಿನಿಂದ ಈ ಬೈಕ್ ಅನ್ನು ಭಾರತದ ಯಾವ ಡೀಲರ್ಶಿಪ್ ಗಳಲ್ಲಿ ಆದರೂ ಬುಕ್ ಮಾಡಬಹುದು, ನವೆಂಬರ್ ನಲ್ಲಿ ಬೈಕ್ ಡೆಲಿವರಿ ಆಗಲಿದೆ. ಈ ಹೊಸ ಬೈಕ್ ಬಗ್ಗೆ BMW ಮೋಟಾರ್ಸ್ ಸಂಸ್ಥೆ ಭಾರತದ ಪ್ರೆಸಿಡೆಂಟ್ ಶ್ರೀ ವಿಕ್ರಂ ಪಾವ ಅವರು ಮಾತನಾಡಿದ್ದು, “ಈ ಹೊಸ BMW M 1000 RR ಬೈಕ್ ಸೂಪರ್ ಬೈಕ್ಸ್ ಗಳ ಪೈಕಿ ಹೊಸ ಸಂಚಲನ ಸೃಷ್ಟಿಸಿದೆ.

bmw 1000 RR full details
bmw 1000 RR full details

ಪ್ಯಾಷನ್ ಇರುವವರಿಗೆ, ಚಾಲೆಂಜ್ ಗಳನ್ನು ತೆಗೆದುಕೊಳ್ಳಬೇಕು ಎಂದು ಬಯಸುವವರಿಗೆ ಇದು ಹೇಳಿ ಮಾಡಿಸಿದ ಬೈಕ್ ಆಗಿದೆ, ಕಾಂಪ್ರೋಮೈಸ್ ಆಗದ acceleration, ಅತ್ಯುತ್ತಮ ಪರ್ಫಾರ್ಮೆನ್ಸ್ ಇಂದ ಈ ಹೊಸ ಬೈಕ್ ಕೂಡಿರುತ್ತದೆ..” ಎಂದಿದ್ದಾರೆ. ಈ ಹೊಸ ಬೈಕ್ ಎರಡು ಕಲರ್ ಗಳಲಿ ಸಿಗಲಿದೆ, ಲೈಟ್ ವೈಟ್ ಇದು ಎಂ ಮೋಟಾರ್ ಸ್ಪೋರ್ಟ್ ಪೇಂಟ್ ಫಿನಿಷ್ ನಲ್ಲಿ ಇರುತ್ತದೆ. ಹಾಗೆಯೇ ಬ್ಲ್ಯಾಕ್ ಸ್ಟಾರ್ಮ್ ಮೆಟಾಲಿಕ್ ಬಣ್ಣದಲ್ಲಿ ಸಿಗುತ್ತದೆ. M ಡಿಸೈನ್ ಟೇಪ್ಸ್ ಹಾಗೂ ಕಾರ್ಬನ್ ಫೈಬರಿಂಗ್ ಇಂದ ಬೈಕ್ ಅನ್ನು ಮಾಡಲಾಗಿದೆ. ಇದನ್ನು ಓದಿ..Home Loan tricks: ಗೃಹ ಸಾಲದ ಹೊರೆಯನ್ನು ನೀವು ಕಡಿಮೆ ಮಾಡಿಕೊಳ್ಳಬೇಕೆ? ಗಮನಿಸಿ, ಈ ರೀತಿ ನಿಮ್ಮ ಹಣ ಕಟ್ಟುವುದು ಕಡಿಮೆ ಮಾಡಿಕೊಳ್ಳಿ.

ಅಲ್ಯೂಮಿನಿಯಂ ಬ್ರಿಡ್ಜ್ ಫ್ರೆಮ್ ಇದ್ದು, M ಇಂಜಿನ್ ಕವರ್ಸ್ ಗಳು ಇರಲಿದೆ. ಕಾರ್ಬನ್ ವೀಲ್ಸ್ ಇರಲಿದ್ದು, ಮುಂದೆ ಇರುವ ಮಡ್ ಗಾರ್ಡ್ ಗಳಲ್ಲಿ ಇಂಟೆಗ್ರೇಟೆಡ್ ಬ್ರೇಕ್ ಡಕ್ಟ್ಸ್ ಇದ್ದು, ಇದನ್ನು ಫೋರ್ಕ್ ಲೆಗ್ಸ್ ಮತ್ತು ಬ್ರೇಕ್ ಕ್ಯಾಲಿಪರ್ಸ್ ನಡುವೆ ಏರ್ ಫ್ಲೋ ಚೆನ್ನಾಗಿ ಆಗುವುದಕ್ಕಾಗಿ ಮಾಡಲಾಗಿದೆ. ಹೊಸದಾಗಿ ಡಿಸೈನ್ ಮಾಡಿರುವ ಹಂಪ್ ಕವರ್ ಇಡಲಾಗಿದೆ. ಇಂಡಿಕೆಟರ್ ಹಾಗೂ ನಂಬರ್ ಪ್ಲೇಟ್ ಲೈಟ್ ಒಂದು ಯೂನಿಟ್ ಆಗಿರುತ್ತದೆ. ಬ್ರೇಕ್ ಹಾಗೂ ಟೇಲ್ ಲೈಟ್ಸ್ ಎರಡು ಸೈಡ್ ಇಂಡಿಕೇಟರ್ ನ ಲೈಟ್ ಗಳಾಗಿದೆ.

ಈ ಸೂಪರ್ ಬೈಂ 999cc ವಾಟರ್ ಕೂಲ್ಡ್ ಇನ್ಲೈನ್ 4 ಸಿಲಿಂಡರ್ ಇಂಜಿನ್ ಹೊಂದಿದೆ. ಇದರ ಪವರ್ 14,500 rpm ಬಳ್ಳಿ 209bhp ಹಾಗೂ ಇದರ ಪೀಕ್ ಟಾರ್ಕ್ 11,000 rpm ನಲ್ಲಿ 113nm ಆಗಿದೆ. 3.1 ಸೆಕೆಂಡ್ ಗಳಲ್ಲಿ 0 ಇಂದ 100ಕಿಮೀ ಸ್ಪೀಡ್ ಗೆ ಹೋಗುತ್ತದೆ. ಇದರ ಟಾಪ್ ಸ್ಪೀಡ್ 314kmph ಆಗಿದೆ. ಈ ಬೈಕ್ ನಲ್ಲಿ ವಿಶೇಷ ಅಡ್ವಾನ್ಸ್ಡ್ ಫೀಚರ್ ಗಳಿದ್ದು, 6.5 ಇಂಚ್ ಬTFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಲೈಟ್ ವೇಟ್ M ಬ್ಯಾಟರಿ, ಇಂಜಿನ್ ಬ್ರೇಕ್, ಟ್ರಕ್ಷನ್ ಕಂಟ್ರೋಲ್, ವೀಲಿ ಕಂಟ್ರೋಲ್, ABS, ABS ಪ್ರೊ, USB ಚಾರ್ಜಿಂಗ್ ಸಾಕೇಟ್, LED ಲೈಟ್ ಯುನಿಟ್ಸ್ ಎಲೆಕ್ಟ್ರಿಕ್ ಕ್ರುಸ್ ಕಂಟ್ರೋಲ್ ಮತ್ತು ಹೀಟೆಡ್ ಗ್ರಿಪ್ಸ್ ಇದೆ.. ಇದನ್ನು ಓದಿ..Business Idea: ಕೇವಲ ಮೊಟ್ಟೆಯನ್ನು ಬಳಸಿಕೊಂಡು ನೀವು ತಿಂಗಳಿಗೆ ಎರಡು ಲಕ್ಷ ದುಡಿಯುವುದು ಹೇಗೆ ಗೊತ್ತೇ?? ಇದಕ್ಕಿಂತ ಸುಲಭ ದಾರಿ ಮತ್ತೊಂದಿಲ್ಲ.

ಇದರಲ್ಲಿ ಸ್ಟಾರ್ಟಪ್ ಅನಿಮೇಷನ್ ನ M ಲೋಗೋ ಬರುತ್ತದೆ. M GPS datalogger ಹಾಗೂ M GPS Laptrigger ಗೆ OBD ಇಂಟರ್ ಫೇಸ್ ಇದೆ. ರೇನ್, ರೋಡ್, ಡೈನಮಿಕ್, ರೇಸ್ ಹಾಗೂ ರೇಸ್ ಪ್ರೊ ಎಂದು 5 ರೈಡಿಂಗ್ ಮೋಡ್ ಇದೆ. ಪ್ರೊ ಮೋಡ್ ಗಳಲ್ಲಿ ಪರ್ಫೆಕ್ಟ್ ಸ್ಟಾರ್ಟ್ ಗಾಗಿ ಲಾಂಚ್ ಕಂಟ್ರೋಲ್, ಪಿಟ್ ಲೇನ್ ಲಿಮಿಟರ್ ಸಹ ಇದೆ. ಈ ಸೂಪರ್ ಬೈಕ್ ರೇಸ್ ನಲ್ಲಿ ಆಸಕ್ತಿ ಇರುವವರು ದಿ ಬೆಸ್ಟ್ ಆಯ್ಕೆ ಎಂದು ಹೇಳಬಹುದು. ಇದನ್ನು ಓದಿ..Anna bhagya Yojane: ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದು, ಬ್ಯಾಂಕ್ ಖಾತೆ ಇಲ್ವಾ? ಆಧಾರ್ ಕಾರ್ಡ್ ಲಿಂಕ್ ಆಗಿಲ್ವಾ? ಹಾಗಾದ್ರೆ ಇದೊಂದೇ ಮಾರ್ಗ ಅಕ್ಕಿಬದಲು ಹಣ ಪಡೆಯಲು, ಕೂಡಲೇ ಮಾಡಿ!

Comments are closed.