Anna bhagya Yojane: ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದು, ಬ್ಯಾಂಕ್ ಖಾತೆ ಇಲ್ವಾ? ಆಧಾರ್ ಕಾರ್ಡ್ ಲಿಂಕ್ ಆಗಿಲ್ವಾ? ಹಾಗಾದ್ರೆ ಇದೊಂದೇ ಮಾರ್ಗ ಅಕ್ಕಿಬದಲು ಹಣ ಪಡೆಯಲು, ಕೂಡಲೇ ಮಾಡಿ!

Anna bhagya Yojane: ಸದ್ಯ ರಾಜ್ಯ ಸರ್ಕಾರ (karnataka Govt.) 5 ಕೆ.ಜಿ ಹೆಚ್ಚುವರಿ ಅಕ್ಕಿ (Rice) ಯನ್ನು ಒದಗಿಸಲು ಸಾಧ್ಯವಾಗದೆ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170rs.ಗಳನ್ನು ನೀಡಲು ತೀರ್ಮಾನ ಮಾಡಿದೆ ಈ ಬಗ್ಗೆ ನಿನ್ನೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ತಿಂಗಳುಗಳವರೆಗೆ ನಾವು ಅಕ್ಕಿಯನ್ನು ಹೊಂದಿಸುವವರೆಗೂ ಪಡಿತರ ಚೀಟಿದಾರರ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಹೌದು ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ರಾಜ್ಯಕ್ಕೆ ಉಚಿತವಾಗಿ ನೀಡುತ್ತಿದೆ. ಇದರ ಜೊತೆಗೆ ಇನ್ನೂ ಐದು ಕೆಜಿಯನ್ನು ರಾಜ್ಯ ಸರ್ಕಾರವೇ ನೀಡುತ್ತದೆ ಎಂದು ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಆದರೆ ಈಗ ಪ್ರತಿ ತಿಂಗಳಿಗೆ ಬೇಕಿರುವ 2.29 ಮೆಟ್ರಿಕ್ ಟನ್ ಅಕ್ಕಿಯನ್ನು ಹೊಂದಿಸಲು ರಾಜ್ಯಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಕ್ಕಿಯ ಬದಲು ದುಡ್ಡನ್ನು ಕೊಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

ನಿಮ್ಮ ಅಕೌಂಟ್ ಆಧಾರ್ ನೊಂದಿಗೆ ಲಿಂಕ್ ಆಗಿದ್ಯಾ?
ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳ ಜೊತೆಗೆ ಲಿಂಕ್ ಮಾಡಿಕೊಳ್ಳುವುದಕ್ಕೆ ಇಂದು ಕೊನೆಯ ದಿನ. ರೇಷನ್ ಕಾರ್ಡ್ ಹೊಂದಿರುವ ಮನೆಯ ಯಜಮಾನ ತನ್ನ ಹೆಸರಿನಲ್ಲಿ ಖಾತೆಯನ್ನು ಹೊಂದಿಲ್ಲದೆ ಇದ್ದರೆ ಜೊತೆಗೆ ಆ ಖಾತೆ ಆಧಾರ್ ನೊಂದಿಗೆ ಲಿಂಕ್ ಆಗದೆ ಇದ್ದರೆ, ದುಡ್ಡು ಸಿಗುವುದಿಲ್ಲ. ಆದರೆ ರೇಷನ್ ಕಾರ್ಡ್ ನಲ್ಲಿ ಇರುವ ಬೇರೆ ಹೆಸರುಗಳಲ್ಲಿ, ಯಾರ ಹೆಸರಿನಲ್ಲಾದರೂ ಖಾತೆ ಇದ್ದು ಅದು ಆಧಾರದೊಂದಿಗೆ ಲಿಂಕ್ ಆಗಿದ್ದರೆ ಖಾತೆಗೆ ಅಕ್ಕಿಯ ಹಣ ಬರುವಂತೆ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಜೊತೆಗೆ ಲಿಂಕ್ ಮಾಡಿಕೊಂಡಿಲ್ಲವೋ ಅಂತವರಿಗೆ ಹಣ ಸಿಗುವುದಿಲ್ಲ. ಕೂಡಲೇ ನಿಮ್ಮ ಬಳಿ ಖಾತೆ ಇದ್ದರೆ ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ ಇಲ್ಲವಾದರೆ ಸರ್ಕಾರದ ಈ ಯೋಜನೆಗಳಿಂದ ನೀವು ವಂಚಿತರಾಗುತ್ತೀರಿ.

Comments are closed.