Tirupati Tirumala: ಜನರು ಇದೇ ಕಾರಣಕ್ಕೆ ಮುಗಿಬಿದ್ದು ತಿರುಪತಿ ತಿಮ್ಮಪ್ಪನ ದರ್ಶನ ಮಾಡುತ್ತಾರೆ ನೋಡಿ: ಈ ಕಾರಣ ಗೊತ್ತಾದ್ರೆ ನೀವು ಕೂಡ ಬಾಲಜಿಯ ದರ್ಶನ ಮಾಡುತ್ತೀರಿ!

Tirupati Tirumala: ಅದೆಷ್ಟೋ ಜನ ತಾವು ಮಾಡುವ ಪ್ರತಿ ಮೊದಲ ಕೆಲಸ ಯಶಸ್ವಿ ಆಗಬೇಕು ಎಂದು ಏಳು ಬೆಟ್ಟಗಳಲ್ಲಿ ನೆಲೆಸಿರುವ ಭಗವಾನ್ ವಿಷ್ಣು ವನ್ನು ನೋಡಲು ಈ ಬೆಟ್ಟವನ್ನು ಹತ್ತುತ್ತಾರೆ. ಇನ್ನು ಭಗವಂತನೇ ತನ್ನ ಭಕ್ತಾದಿಗಳನ್ನು ಆಶೀರ್ವದಿಸಲು ಕಲಿಯುಗದ ಪುರುಷೋತ್ತಮನಾಗಿ ಸ್ವರ್ಗದಿಂದ ಭೂಲೋಕಕ್ಕೆ ಇಳಿದು ಬಂದಿದ್ದಾನೆ ಎನ್ನಲಾಗುತ್ತದೆ. ಇಂತಹ ಭಕ್ತಿ ಭಾವ ತುಂಬಿದ ಭಾರತೀಯ ಸಾಂಪ್ರದಾಯಿಕ ದೇವಾಲಯವೇ ಭಗವಾನ್ ತಿರುಪತಿ ತಿಮ್ಮಪ್ಪ ನೆಲೆಸಿರುವ ತಿರುಪತಿ ತಿರುಮಲ ದೇವಾಲಯ.

ತಿರುಪತಿ ತಿರುಮಲನನ್ನು “ಏಳು ಬೆಟ್ಟಗಳ ಒಡೆಯ” ಎಂದೇ ಕರೆಯಲಾಗುತ್ತದೆ. ಆಂಧ್ರ ಪ್ರದೇಶದ (Andhra Pradesh) ಚಿತ್ತೂರು ಜಿಲ್ಲೆಯಲ್ಲಿ ತಿರುಪತಿ ತಿಮ್ಮಪ್ಪ ನೆಲೆಸಿದ್ದಾನೆ. ದಕ್ಷಿಣ ಭಾರತದ ಶೇಷಾಚಲಂ ಪರ್ವತ ಶ್ರೇಣಿಯನ್ನು ರೂಪಿಸುವ ಏಳು ಶಿಖರಗಳಲ್ಲಿ ಇದು ಒಂದು. ಈ ಅದ್ಭುತ ಸ್ಥಳಕ್ಕೆ ಬಂದರೆ ಇಲ್ಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಂಡರೆ ನಿಮ್ಮಂತ ಅದೃಷ್ಟ ಶಾಲೆಗಳು ಮತ್ತೊಬ್ಬರಿಲ್ಲ.

ಇತಿಹಾಸದ ಕಥೆಗಳು ಹೇಳುವಂತೆ ವೆಂಕಟೇಶ್ವರನನ್ನು 16.2 ಎಕರೆ ಭೂಮಿಯಲ್ಲಿ 5000 ವರ್ಷಗಳ ಇತಿಹಾಸ ಹೊಂದಿರುವ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯ, ಕ್ರಿಸ್ತ ಶಕ 300ರಲ್ಲಿ ನಿರ್ಮಿಸಲಾಯಿತು ಎನ್ನಲಾಗಿದೆ. ಬಲ್ಲವರು ಚೋಳರು ವಿಜಯನಗರದ ಅರಸರು ಈ ದೇವಾಲಯವನ್ನು ಇತಿಹಾಸದುದ್ದಕ್ಕೂ ರಕ್ಷಿಸುತ್ತಾ ಬಂದಿದ್ದಾರೆ ಎನ್ನಲಾಗಿದೆ.

ತಿರುಪತಿ ಲಡ್ಡು ಬಹಳ ಫೇಮಸ್. ಯಾರಾದರೂ ತಿರುಪತಿಗೆ ಭೇಟಿ ನೀಡಿದರೆ ಪ್ರಸಾದ ರೂಪದಲ್ಲಿ ನೀಡಲಾಗುವ ಲಡ್ಡು ಪ್ರಸಾದವನ್ನು ತೆಗೆದುಕೊಂಡು ಬರುತ್ತಾರೆ. ಈ ಪ್ರಸಾದಕ್ಕೂ ಒಂದು ಹಿನ್ನೆಲೆ ಇದೆ 18ನೇ ಶತಮಾನದಲ್ಲಿ ವೆಂಕಟೇಶ್ವರ ಮೊದಲ ಶ್ರೀವಾರಿ ಲಡ್ಡುವನ್ನು ಪಡೆದ ದಿನದಿಂದ ಇಲ್ಲಿ ಲಡ್ಡುವನ್ನು ಪ್ರಸಾದವಾಗಿ ನೀಡಲಾಗುತ್ತದೆ ಎಂದು ಹೇಳುತ್ತಾರೆ.

ತಿರುಪತಿಯಲ್ಲಿ ಆಚರಿಸಲಾಗುವ ಹಬ್ಬ ಹರಿದಿನಗಳು ಅಷ್ಟಿಷ್ಟಲ್ಲ. ಪ್ರಮೋತ್ಸವ ಪವಿತ್ರೋತ್ಸವ ಮಕರ ಸಂಕ್ರಾಂತಿ ಹೀಗೆ ಸಾಕಷ್ಟು ಧಾರ್ಮಿಕ ಉತ್ಸವಗಳನ್ನು ಇಲ್ಲಿ ನಡೆಸಲಾಗುತ್ತದೆ. ತಿರುಪತಿಯ ದರ್ಶನಕ್ಕೆ ದಿನವೂ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಕೃಥಾರ್ತರಾಗುತ್ತಾರೆ. ಇಂಥ ಕಲಿಯುಗ ಪುರುಷೋತ್ತಮ ನೆಲೆಸಿರುವ ತಿರುಪತಿ ಬೆಟ್ಟಕ್ಕೆ ನೀವು ಕೂಡ ಒಮ್ಮೆಯಾದರೂ ಭೇಟಿ ನೀಡಿ.

Comments are closed.