South Film Star: ಇಂದೆನೋ ದೊಡ್ದ ಸ್ಟಾರ್ ನಟ; ಆದ್ರೆ ಅಂದು ಇದೇ ನಟ ಏನು ಕೆಲಸ ಮಾಡ್ತಿದ್ದ ಗೊತ್ತೇ? ಎಲ್ಲಾ ಹಣೆಬರಹ ಕಣ್ರೀ!

South Film Star: ಸೌತ್ ಇಂಡಿಯಾದ ಸೂಪರ್ ಸ್ಟಾರ್ ನಟ ಸೂರ್ಯ (Super star Suriya) ನಿಗೆ ಇದೀಗ 48ರ ಹರೆಯ. ಆಹಾ, ಈ ಸ್ಟಾರ್ ನಟನಿಗೆ ಫಿದಾ ಆಗದವರೇ ಇಲ್ಲ. ತಮಿಳಿನ ಸಿನಿಮಾ ಇಂಡಸ್ಟ್ರಿಯನ್ನು (Tamil film industry) ಅಂದಿನಿಂದ ಇಂದಿನವರೆಗೂ ಆಳಿಕೊಂಡು ಬರುತ್ತಿರುವ ಈ ಸ್ಟಾರ್ ನಟನ ವ್ಯಕ್ತಿತ್ವ ಕೂಡ ಸ್ಪೇಷಲ್. ಜೊತೆಗೆ ಅವರು ನಡೆದು ಬಂದಿರುವ ದಾರಿ ಕೂಡ ಬಹಳ ಇಂಟರೆಸ್ಟಿಂಗ್ ಆಗಿದೆ ಎನ್ನಬಹುದು. ಒಬ್ಬ ಇದನ್ನೂ ಓದಿ:Crime News: ಧಿಡೀರ್ ಅಂತ ಶ್ರೀಮಂತರಾಗಲು ಯಾರೂ ಇವರನ್ನು ಅನುಸರಿಸಬೇಡಿ; ಮತ್ತೆ ಜೈಲುವಾಸ ಗ್ಯಾರಂಟಿ! ಎಂಥಾ ಖದೀಮರು ನೋಡಿ!

ಒಬ್ಬ ನಟ ಸ್ಟಾರ್ (Star) ಎನಿಸಿಕೊಳ್ಳುವುದಕ್ಕೂ ಮೊದಲು ಸಾಕಷ್ಟು ಕಷ್ಟದ ಹಾದಿಯಲ್ಲಿ ಸಾಗಿರುತ್ತಾರೆ. ಎಷ್ಟೋ ಜನರ ಜೀವನದ ಕಥೆ ಇನ್ನೊಬ್ಬರಿಗೆ ಇನ್ಪರೇಶನ್ (Inspiration) ಕೂಡ ಆಗಿರುತ್ತದೆ. ಹಾಗೆಯೇ ನಟ ಸೂರ್ಯ ಸಿನಿಮಾ ರಂಗಕ್ಕೆ ಬರುವುದಕ್ಕೂ ಮೊದಲು ಒಂದು ಸಾಮಾನ್ಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ವ್ಯಕ್ತಿ ಎಂಬುದು ನಿಮಗೆ ಗೊತ್ತೇ?

ಆಕ್ಷನ್, ಫ್ಯಾಮಿಲಿ, ರೊಮ್ಯಾಂಟಿಕ್ ಎಂತದ್ದೇ ಸಿನಿಮಾವಾಗಿರಲಿ, ಸೂರ್ಯ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಮೇಲೆ ಒಂದೇ ಒಂದು ಕಾಂಟ್ರವರ್ಸಿಯನ್ನೂ ಮೈಮೇಲೆ ಎಳೆದುಕೊಳ್ಳದ ಅಪರೂಪದ ವ್ಯಕ್ತಿ ಇವರು. ಸೂರ್ಯ ಜನಿಸಿದ್ದು 1975, ಜುಲೈ 23. ಚೆನ್ನೈನಲ್ಲಿ. ಶಾಲಾ ವಿದ್ಯಾಭ್ಯಾಸ ಮುಗಿಸಿ, ಕಾಮರ್ಸ್ ಪದವಿ ಪಡೆದ ಸೂರ್ಯ, ಸುಮಾರು 8 ತಿಂಗಳವರೆಗೆ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಾರೆ. ನಂತರ ಸಿನಿಮಾರಂಗ ಅವರನ್ನು ಆಕರ್ಷಿಸುತ್ತದೆ. 1997ರಲ್ಲಿ, ಸೂರ್ಯ ನೆರುಕ್ಕು ನೆರ್ ಚಿತ್ರದ ಮೂಲಕ ಸಿನಿಮಾ ನತನೆ ಆರಂಭಿಸುತ್ತಾರೆ. ‘ಸಿಂಗಮ್’ ಸಿನಿಮಾದ ಮೂಲಕ ತಮಿಳುನಾಡಿನ ಸಿಂಗಮ್ ಎಂದೇ ಖ್ಯಾತರಾಗಿರುವ ಸೂರ್‍ಯ ಸದ್ಯದಲ್ಲಿಯೇ ‘ಕಂಗುವ’ ಸಿನಿಮಾ ಮೂಲಕ ತೆರೆಗೆ ಬರಲಿದ್ದಾರೆ. ಇದು ಅವರ 42 ನೇ ಚಿತ್ರವಾಗಿದೆ. ಇದನ್ನೂ ಓದಿ: Team India: ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲು ಈ ಆಟಗಾರ ಇರಲೇಬೇಕು; ಗೌಅಮ್ ಗಂಭೀರ್ ’ಗಂಭೀರವಾಗಿ ಸೂಚಿಸಿದ್ದು ಯಾರ ಹೆಸರು ಗೊತ್ತಾ?

ನಟ ಸೂರ್ಯ ಅವರ ಸಹೋದರ ಕಾರ್ತೀ. ಇವರೂ ಕೂಡ ಸೌತ್ ಸಿನಿಮಾಗಳಲ್ಲಿ ಫೇಮಸ್. ಇವರ ಸಹೋದರಿ ಬೄಂದಾ.  ಬೃಂದಾ ಗ್ರಾನೈಟ್ ಉದ್ಯಮಿಯಾಗಿದ್ದಾರೆ. ಸೂರ್ಯ ಅವರು 2011ರಲ್ಲಿ ವಿವಾಹವಾಗುತ್ತಾರೆ. ಅವರ ಪತ್ನಿ ಬಗ್ಗೆಯಂತೂ ಹೇಳುವುದೇ ಬೇಡ. ಅವರೇ ಬಹುಭಾಷಾ ನಟಿ ಜ್ಯೋತಿಕಾ. ನಟ ಸೂರ್ಯ ವೈವಾಹಿಕ ಜೀವನದಲ್ಲಿಯೂ ಕೂಡ ಯಾವುದೇ ಕಪ್ಪು ಚುಕ್ಕೆ ಬಾರದಂತೇ ಇಬ್ಬರೂ ಸಂತೋಷವಾಗಿ ಮಕ್ಕಳ ಜೊತೆಗೆ ಜೀವನ ಮಾಡುತ್ತಿರುವುದೇ ಅಭಿಮಾನಿಗಳಿಗೂ ಖುಷಿಯ ವಿಚಾರ!

Comments are closed.